ಮುಂಡಗೋಡ: ಬಾಲಕಿಗೆ ಲೈಂಗಿಕ ಕಿರುಕುಳ

ಮುಂಡಗೋಡ, ಜೂ.22: 14ರ ಹರೆಯದ ಬಾಲಕಿಯೋರ್ವಳು ಹೊಲದಲ್ಲಿ ಒಬ್ಬಳೆ ಕೆಲಸಮಾಡುತ್ತಿದ್ದಾಗ ಹೊಲದಲ್ಲಿ ಆಕ್ರಮವಾಗಿ ಪ್ರವೇಶಮಾಡಿ ಬಾಲಕಿ ಮೇಲೆ ಲೈಂಗಿಕ ಕಿರಕುಳ ನೀಡಿದ ಘಟನೆ ಮಂಗಳವಾರ ಚೌಡಳ್ಳಿ ಪಂಚಾಯತಿ ವ್ಯಾಪ್ತಿಯ ತೆಮ್ಮಾನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಲೈಂಗಿಕ ದೌರ್ಜನ್ಯವೆಸಗಿದ ಯುವಕನನ್ನು ತ್ಯಾಮನಕೊಪ್ಪಗ್ರಾಮದ ಮೇಘರಾಜ ಬಾಲಚಂದ್ರ ರಾಠೋಡ(29) ಎಂದು ಗುರುತಿಸಲಾಗಿದೆ.
ಈ ಕುರಿತು ಬಾಲಕಿ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಎಸೈ ಎನ್.ಡಿ. ಜಕ್ಕಣ್ಣವರ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





