ಟ್ರಂಪ್ ಗೆದ್ದರೆ ಅಮೆರಿಕದ ಬಾಂಧವ್ಯ ಮುರಿವೆ: ಪೆರು ಅಧ್ಯಕ್ಷ

ಲಿಮ, ಜೂ. 22: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆದ್ದರೆ ತನ್ನ ಸರಕಾರ ಅಮೆರಿದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದು ಎಂದು ಪೆರು ದೇಶದ ನಿಯೋಜಿತ ಅಧ್ಯಕ್ಷ ಪೆಡ್ರೊ ಪಾಬ್ಲೊ ಕುಝಿನ್‌ಸ್ಕಿ ತಮಾಷೆಯ ಧಾಟಿಯಲ್ಲಿ ಹೇಳಿದ್ದಾರೆ.
77 ವರ್ಷದ ಮಾಜಿ ಹೂಡಿಕೆ ಬ್ಯಾಂಕರ್ ಈ ತಿಂಗಳ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ.
ತನ್ನನ್ನು ಅಭಿನಂದಿಸಲು ಫೋನ್ ಮಾಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಬಳಿ, ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಮುಂದೇನು ಎಂಬ ಚಿಂತೆಯನ್ನು ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
ಹಾಗಾದರೆ, ಟ್ರಂಪ್ ವಿಜಯಿಯಾದರೆ ಅಮೆರಿಕದೊಂದಿಗಿನ ಬಾಂಧವ್ಯ ಏನಾಗುತ್ತದೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾವು ಒಂದು ಗರಗಸವನ್ನು ಎತ್ತಿಕೊಂಡು ಅದನ್ನು ತುಂಡರಿಸುತ್ತೇವೆ’’ ಎಂದು ನಗುತ್ತಾ ಹೇಳಿದರು.
Next Story





