ಅಮೆರಿಕ: ಭಾರತೀಯ ಮೂಲದ ಹೆಜ್ ಫಂಡ್ ವ್ಯವಸ್ಥಾಪಕ ಸಂಜಯ್ ಆತ್ಮಹತ್ಯೆ

ನ್ಯೂಯಾರ್ಕ್, ಜೂ. 22: ವಿದೇಶಿ ಹೂಡಿಕೆ ನಿಧಿ (ಹೆಜ್ ಫಂಡ್)ಯೊಂದರ ಮ್ಯಾನೇಜರ್, ಭಾರತ ಮೂಲದ ವ್ಯಕ್ತಿಯೊಬ್ಬರು ಇಲ್ಲಿನ ತನ್ನ ನಿವಾಸದಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
44 ವರ್ಷದ ಸಂಜಯ್ ವಲ್ವಾನಿ ವಿರುದ್ಧ ಕಳೆದ ವಾರ ಇನ್‌ಸೈಡರ್ ಟ್ರೇಡಿಂಗ್ ನಡೆಸಿದ ಆರೋಪವನ್ನು ಹೊರಿಸಲಾಗಿತ್ತು.
ಆಹಾರ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಮಾಜಿ ಅಧಿಕಾರಿಯೊಬ್ಬರಿಂದ ಪಡೆದ ಗೌಪ್ಯ ಮಾಹಿತಿಯನ್ನು ಬಳಸಿ ಎರಡು ಔಷಧ ತಯಾರಿಕೆ ಕಂಪೆನಿಗಳ ಶೇರುಗಳಲ್ಲಿ ಹೂಡಿಕೆ ಮಾಡಿ 2.5 ಕೋಟಿ ಡಾಲರ್ ಲಾಭ ಮಾಡಿದ ಆರೋಪವನ್ನು ಅವರು ಎದುರಿಸುತ್ತಿದ್ದರು.
ತನ್ನ ಕುತ್ತಿಗೆ ಮತ್ತು ಅಂಗೈಯನ್ನು ಸೀಳಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
Next Story





