ಹಂಪನಕಟ್ಟೆಯಿಂದ ನಾಪತ್ತೆಯಾಗಿದೆ ಫುಟ್‌ಪಾತ್

ಮಂಗಳೂರು,ಜೂ.21:ನಗರದ ಹೃದಯಭಾಗವಾದ ಹಂಪನಕಟ್ಟೆಯ ಕೆ.ಎನ್. ಟೇಲರ್ ಸರ್ಕಲ್ ಬಳಿಯಿರುವ ರಸ್ತೆ ಬದಿಯ ಪುಟ್‌ಪಾತ್‌ನ ಕಲ್ಲುಗಳನ್ನು ತೆಗೆದ ಪರಿಣಾಮ ಪುಟ್‌ಪಾತ್ ದಾರಿ ತೋಡಿನಂತಾಗಿದೆ.
ದಿನಂಪ್ರತಿ ಸಾವಿರಾರು ಜನರು ನಡೆದುಕೊಂಡು ಹೋಗುವ ಈ ದಾರಿಯಲ್ಲಿ ಇತ್ತೀಚೆಗೆ ಕಾಮಗಾರಿ ನಡೆಸಿದ ನಂತರ ಸುಮಾರು 100 ಮೀಟರ್‌ನಷ್ಟು ಪುಟ್‌ಪಾತ್ ಕೆಲಸವನ್ನು ಅರ್ಧದಲ್ಲಿಯೆ ಬಿಡಲಾಗಿದೆ. ಪರಿಣಾಮ ಜನರು ಈ ಭಾಗದಲ್ಲಿ ನಡೆದಾಡಲು ರಸ್ತೆಗೆ ಬರಬೇಕಾಗಿದೆ.
ಪುಟ್‌ಪಾತ್‌ನ ಕಲ್ಲುಗಳನ್ನು ತೆಗೆದ ಪರಿಣಾಮ ಮಳೆ ಬಂದ ಸಂದರ್ಭದಲ್ಲಿ ಇಲ್ಲಿ ನೀರು ಹರಿದುಹೋಗುತ್ತಿದ್ದು ಸಾರ್ವಜನಿಕರು ಜಾರಿ ನೀರಿಗೆ ಬೀಳುವ ಅಪಾಯವು ಇದೆ. ಮನಪಾ ಶೀಘ್ರ ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
Next Story





