ಬಾಯಿಯ ಗಾಯಕ್ಕೆ ಪರಿಣಾಮಕಾರಿ ಮನೆ ಮದ್ದುಗಳು

ಬಾಯಿ ಹುಣ್ಣು ಮತ್ತು ಇತರ ಬಾಯಿಯಲ್ಲಿ ಗಾಯವಾಗುವ ಸಮಸ್ಯೆ ಬಹಳ ಮಂದಿಗೆ ಇರುತ್ತದೆ. ಆದರೆ ಅದಕ್ಕೆ ತಕ್ಕ ಮದ್ದು ಏನು ಎನ್ನುವುದು ತಿಳಿದಿರುವುದಿಲ್ಲ. ಇಲ್ಲಿವೆ ಕೆಲವು ಮನೆಮದ್ದುಗಳ ವಿವರ.
ಕ್ರಾನ್‌ಬೆರಿ ಪಾನೀಯ
2-3 ಗ್ಲಾಸ್ ಕ್ರಾನ್ ಬೆರಿ ಪಾನೀಯ ಸೇವಿಸುವುದು ಬಾಯಿಯನ್ನು ಆರೋಗ್ಯಕರವಾಗಿಡುತ್ತದೆ. ಅಲ್ಲದೆ ದಿನಕ್ಕೆ 2-3 ಬಾರಿ ಕ್ರಾನ್ ಬೆರಿ ಗುಳಿಗೆಗಳನ್ನು ಸೇವಿಸಬಹುದು.
ಆರ್ಗನೋ ಎಣ್ಣೆ
ನೀರಿಗೆ ಮೂರು ಬಿಂದು ಆರ್ಗನೋ ಎಣ್ಣೆ ಹಾಕಿ ಕುಡಿಯಬೇಕು. ದಿನಕ್ಕೆ ಮೂರು ಬಾರಿ ಹೀಗೆ ಮಾಡಿದರೆ ಸಹಜವಾದ ಆಂಟಿ ಫಂಗಲ್ ಆಗಿ ಕೆಲಸ ಮಾಡುತ್ತದೆ.
ಟೀ ಟ್ರೀ ಎಣ್ಣೆ
ನೀರಿನಲ್ಲಿ 5-7 ಬಿಂದು ಟೀ ಟ್ರೀ ಎಣ್ಣೆ ಬೆರೆಸಿ. 2 ನಿಮಿಷಗಳ ಕಾಲ ಬಾಯಲ್ಲಿರಿಸಿಕೊಳ್ಳಿ. ದಿನಕ್ಕೆ 2 ಬಾರಿ ಹೀಗೆ ಮಾಡಿ. ನುಂಗಬೇಡಿ, ನಂತರ ಉಗುಳಿ.
ತೆಂಗಿನೆಣ್ಣೆ
ಟೀ ಟ್ರೀ ಎಣ್ಣೆಯಂತೆಯೇ ಇದೂ ಉತ್ತಮ ಫಂಗಲ್ ವಿರೋಧಿ. ದಿನಕ್ಕೆ ಎರಡು ಬಾರಿ ತೆಂಗಿನೆಣ್ಣೆಯನ್ನು ಬಾಯಲ್ಲಿಟ್ಟು ಮುಕುಳಿಸಿ. ಸಲಾಡ್ ಮತ್ತು ಸ್ಮೂತೀಗಳಿಗೂ ಇದನ್ನು ಬೆರೆಸಬಹುದು.
ಗ್ರೀನ್ ಟೀ
ಗ್ರೀನ್ ಟೀ ಕುಡಿಯುವುದು ಬಾಯಿ ಹುಣ್ನಿನ ಸಮಸ್ಯೆಯನ್ನೇ ನಿವಾರಿಸುತ್ತದೆ. ಇದು ನಿರೋಧಕ ಶಕ್ತಿ ನೀಡುತ್ತದೆ.
ಆಪಲ್ ಸೈಡರ್ ವಿನೆಗರ್
ಇದು ಎಲ್ಲಾ ರೀತಿಯ ಸೋಂಕು ತಡೆಯುತ್ತದೆ. ಎರಡು ಚಮಚವನ್ನು ಬಿಸಿ ನೀರಿಗೆ ಬೆರೆಸಿ ಬಾಯಿ ಮುಕುಳಿಸಿ. ದಿನಕ್ಕೆ ನಾಲ್ಕು ಬಾರಿ ಹೀಗೆ ಮಾಡಿ.
ಉಪ್ಪು ನೀರು
ಬಿಸಿ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ ಬಾಯಿ ಮುಕುಳಿಸಿ ನಂತರ ಉಗುಳಿ. ದಿನಕ್ಕೆ ನಾಲ್ಕು ಬಾರಿ ಮಾಡಿದರೆ ಬಾಯಿಯ ಗಾಯದ ನೋವು ಮರೆಯಾಗುತ್ತದೆ.
ಯೋಗಾರ್ಟ್
ಯೋಗಾರ್ಟ್ ಅಲ್ಲಿರುವ ಉತ್ತಮ ಬ್ಯಾಕ್ಟೀರಿಯ ಸೋಂಕು ನಿವಾರಿಸುತ್ತದೆ. ಆದರೆ ಹೆಚ್ಚು ಸಿಹಿಯಿಲ್ಲದ ಸಾಮಾನ್ಯ ಯೋಗಾರ್ಟ್ ಸೇವಿಸಿ. ಅದನ್ನು ನಿಧಾನವಾಗಿ ಸೇವಿಸಿ.
ಕೃಪೆ: http://www.healthdigezt.com/







