ವಿಶ್ವದಾಖಲೆಗಾಗಿ ಕ್ಲಿಕ್ ಲಾಂಛನ ಬಿಡುಗಡೆ

ಬೆಂಗಳೂರು, ಜೂ.22: ಕರ್ನಾಟಕ ವೀಡಿಯೊ ಮತ್ತು ಫೋಟೊ ಅಸೋಸಿಯೇಷನ್ ಹಾಗೂ ವಸಂತ್ಸ್ ಡಿಜಿಟಲ್ಸ್ ಸೆಂಟರ್‌ನ ಸಹಯೋಗದಲ್ಲಿ ಕರ್ನಾಟಕ ಸಿನಿಮಾಟೊಗ್ರಾಫರ್ಸ್ ಅಸೋಸಿಯೇಷನ್ ಸದಸ್ಯರಿಗಾಗಿ ನಡೆದ ಸಮಾರಂಭದಲ್ಲಿ ಆಂಧ್ರಪ್ರದೇಶದ ಮುಜರಾಯಿ ಇಲಾಖಾ ಸಚಿವ ಪೈಡಿಕೊಂಡಲ ಮಾಣಿಕ್ಯಲರಾವ್ ನೂತನ ಮಾದರಿಯ ಮಿರರ್‌ಲೆಸ್ ಕ್ಯಾಮರಾವನ್ನು ಉದ್ಘಾಟಿಸಿದರು.
ಇದೇ ವೇಳೆ ಜು.1ರಿಂದ 3ರವರೆಗೆ ಬೆಂಗಳೂರಿನ ಪೀಣ್ಯ ಮೆಟ್ರೋ ಸ್ಟೇಷನ್ ಎದುರಿನ ಪ್ರಭಾಕರ್ ಕೋರೆ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಛಾಯಾಗ್ರಹಣ ಸಂಬಂಧಿತ ವಸ್ತುಪ್ರದರ್ಶನ ಫೋಟೋ ಟುಡೇಯಲ್ಲಿ ನಡೆಯುವ ವಿಶ್ವದಾಖಲೆಗಾಗಿ ಕ್ಲಿಕ್ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಇಂತಹ ವಿಶಿಷ್ಟ ಸ್ಪರ್ಧೆಗಳನ್ನು ದೇಶಾದ್ಯಂತ ಆಯೋಜಿಸಬೇಕೆಂದು ಕರೆ ನೀಡಿದ್ದರು. ಪ್ಯಾನಾಸೋನಿಕ್ ಸಂಸ್ಥೆಯ ಪ್ರತಿನಿಧಿಗಳ ಮೂಲಕ ನಡೆದ ಪ್ರಾತ್ಯಕ್ಷಿಕೆಯಲ್ಲಿ ಕರ್ನಾಟಕ ಸಿನೆಮಾಟೊಗ್ರಾಫರ್ಸ್‌ನ ಎಲ್ಲಾ ಸದಸ್ಯರು ಭಾಗವಹಿಸಿ ಕ್ಯಾಮರಾ ಸಂಬಂಧಿತ ತಾಂತ್ರಿಕ ಮಾಹಿತಿಯನ್ನು ಪಡೆದುಕೊಂಡರು.
Next Story





