Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನಿಮ್ಮ ಧರ್ಮದೊಳಗಿದ್ದೇ ಇತರ ಧರ್ಮಗಳನ್ನು...

ನಿಮ್ಮ ಧರ್ಮದೊಳಗಿದ್ದೇ ಇತರ ಧರ್ಮಗಳನ್ನು ಪಾಲಿಸಿ: ನಿಡುಮಾಮಿಡಿ ಶ್ರೀ

‘ಮಠಾಧೀಶರು ಮತ್ತು ಕೋಮುವಾದ’ ವಿಚಾರ ಸಂಕಿರಣ

ವಾರ್ತಾಭಾರತಿವಾರ್ತಾಭಾರತಿ22 Jun 2016 11:40 PM IST
share
ನಿಮ್ಮ ಧರ್ಮದೊಳಗಿದ್ದೇ ಇತರ ಧರ್ಮಗಳನ್ನು ಪಾಲಿಸಿ: ನಿಡುಮಾಮಿಡಿ ಶ್ರೀ

ಬೆಂಗಳೂರು, ಜೂ.22: ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮದ ಒಳಗಿದ್ದೇ, ಕನಿಷ್ಠ ನಾಲ್ಕರಿಂದ ಐದು ಧರ್ಮಗಳನ್ನು ಪಾಲಿಸಿ ಎಂದು ನಿಡುಮಾಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕರೆ ನೀಡಿದ್ದಾರೆ.

 ನಗರದ ನಿಡುಮಾಮಿಡಿ ಮಠ ಹಾಗೂ ಪ್ರಗತಿಪರ ಮಠಾಧೀಶರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ‘ಅಂತರ್ನಿರೀಕ್ಷಣೆಯ ಹಾದಿಯಲ್ಲಿ ಮಠಾಧೀಶರು’ ವಿಚಾರ ಸಂಕಿರಣದ ಎರಡನೆ ದಿನ ‘ಮಠಾಧೀಶರು ಮತ್ತು ಕೋಮುವಾದ’ ಎಂಬ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಬಾಲ್ಯದಲ್ಲಿ ಏಸುವನ್ನು, ಯೌವನದಲ್ಲಿ ಬಸವಣ್ಣ ಹಾಗೂ ಪೈಗಂಬರರನ್ನೂ, ಮಧ್ಯವಯಸ್ಸಿನಲ್ಲಿ ವೇದಾಂತದಿಂದಲೂ ವೃದ್ಧಾಪ್ಯದಲ್ಲಿ ಜ್ಞಾನಮಾರ್ಗವಾದ ಬುದ್ಧನನ್ನೂ ಅನುಸರಿಸುವ ಮೂಲಕ ಒಂದು ನದಿಗಳು ಹಲವು ತೊರೆಗಳು ಎಂಬಂತೆ ಬಾಳಬೇಕು ಎಂದು ಅವರು ಹೇಳಿದರು.
ಜಗತ್ತಿನಲ್ಲಿ ಹಲವಾರು ಜನರು ಹಿಂಸೆ, ಕೋಮುವಾದದ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಜೀಸಸ್ ಗುಲಾಮಗಿರಿಯ ವಿರುದ್ಧ ಬಂಡೆದ್ದರಿಂದಲೇ ಅಧಿಕಾರಸ್ತರು ಅವರನ್ನು ನೇಣಿಗೆ ಹಾಕಿದರು. ಆದರೂ ಜೀಸಸ್‌ನಿಂದ ಕ್ರೈಸ್ತ ಧರ್ಮಕ್ಕೆ ಹೊಸತನ ಬಂದಿದೆ ಎಂದ ಅವರು, ಹೊಸತನ ಹಾಗೂ ಕಾಲ ಧರ್ಮಕ್ಕೆ ಬೆನ್ನು ಮಾಡಿದ್ರೆ ಅಲ್ಲಿ ಮತ್ತೊಂದು ಧರ್ಮ ಹುಟ್ಟಲು ಕಾರಣವಾಗುತ್ತದೆ. ಬುದ್ಧ, ಬಸವಣ್ಣ, ಮಹಾವೀರ, ಪೈಗಂಬರ್ ಹಾಗೂ ಇನ್ನಿತರ ಸಂತರಿಂದ ಹೀಗೆ ಹೊಸತನ ಬರಲು ಕಾರಣವಾಯ್ತು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
 ದೊಡ್ಡ ಮಠಗಳಲ್ಲಿದೆ ಜಾತಿ ತಾರತಮ್ಯ: ದೇಶದಲ್ಲಿನ ಹಲವು ದೊಡ್ಡ ದೊಡ್ಡ ಮಠಗಳಲ್ಲಿ ಇಂದಿಗೂ ಹೆಚ್ಚಿನ ಮಟ್ಟದ ಕೋಮುವಾದವಿದ್ದು, ಜಾತಿ ತಾರತಮ್ಯ ತಾಂಡವಾಡುತ್ತಿದೆ. ಆದರೆ, ಜಚನಿ ಮಠದಲ್ಲಿಂದು ಪಾದೋದಕ, ಪೀಠ - ಪಲ್ಲಕ್ಕಿ ಪಾದಪೂಜೆಗಳನ್ನು ತ್ಯಜಿಸಲಾಗಿದೆ. ನಮ್ಮ ಮಠದಲ್ಲಿ ಇಂದಿಗೂ ಪೂಜೆ ಮಾಡುವವರು ಹಾಗೂ ಅಡುಗೆ ಮಾಡುವವರು ದಲಿತರಾಗಿದ್ದಾರೆ. ನನ್ನ ಗುರುಗಳಾಗಿದ್ದ ಜಚನಿ ಸ್ವಾಮಿ ಸಹ ಪ್ರಗತಿಪರ ವಿಚಾರಧಾರೆಗಳಿಗೆ ಒಪ್ಪಿಗೆ ನೀಡಿದ್ದರು. ಆದರೆ, ಮಠದಲ್ಲಿ ಪ್ರಗತಿಪರ ವಿಚಾರಗಳನ್ನು ಅನುಸರಿಸುವುದನ್ನು ಸಹಿಸದವರಿಂದ ಆರ್ಥಿಕ ಹಾಗೂ ಇನ್ನಿತರ ಸಹಕಾರ ನಿಂತು ಹೋಯಿತು. ಆದರೂ ನಾವು ನಮ್ಮ ವಿಚಾರಧಾರೆಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಅವರು ಹಳೆಯದನ್ನು ನೆನಪಿಸಿಕೊಂಡರು.
 ಇಂದು ಸ್ವಾರ್ಥಕ್ಕಾಗಿ ಮೌಲ್ಯಗಳನ್ನು ಅಪಮೌಲ್ಯಗೊಳಿಸಲಾಗುತ್ತಿದೆ. ಮಹಿಳೆಯರ ಶಿಕ್ಷಣ ಹಾಗೂ ಅಭಿವೃದ್ಧಿಗೆ ಬೆನ್ನು ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರೊಬ್ಬರು ಮಹಿಳೆಯರು ಅಡುಗೆ ಮನೆಯಿಂದ ಹೊರ ಬರುವುದು ಸರಿಯಲ್ಲ ಎಂಬಂತಹ ಹೇಳಿಕೆಯನ್ನು ನೀಡಿದ್ದರು. ಇಂತಹ ನ್ಯಾಯಾಧೀಶರಿಂದ ನಾವು ಮಹಿಳೆಯರಿಗೆ ಯಾವ ರೀತಿಯ ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
 ಮತಾಂತರ ಹಾಗೂ ಧಾರ್ಮಿಕ ಆಚರಣೆಗಳು ಮೌಲ್ಯಗಳಿಗಾಗಿ ನಡೆಯಬೇಕೆ ಹೊರತು ಬೇರೆಯ ಸ್ವಾರ್ಥಗಳಿಗಾಗಿ ಅಲ್ಲ. ಧಾರ್ಮಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಇಂದು ಕೋಮುದಳ್ಳುರಿಯನ್ನು ಹಚ್ಚಲಾಗುತ್ತಿದ್ದು, ಧರ್ಮಗಳು ಉದ್ಯಮಗಳಾಗಿವೆ. ಧರ್ಮಗಳಿಗಾಗಿ ಯುದ್ಧ ನಡೆಸುವುದೇ ಅಪಚಾರ. ಹೀಗಾಗಿ ಇವುಗಳ ಬದಲಿಗೆ ಒಳಗಿನ ಅಜ್ಞಾನದ ವಿರುದ್ಧ ಹೋರಾಡಬೇಕಿದೆ ಎಂದ ಅವರು, ಬುದ್ದ, ಬಸವಣ್ಣ, ಮಾರ್ಕ್ಸ್, ಅಂಬೇಡ್ಕರ್, ಮಹಾವೀರ ಹಾಗೂ ಅನೇಕ ಶರಣರ ಚಿಂತನೆಗಳೇ ನಮಗೆ ದಾರಿ ದೀಪಗಳಾಗಿವೆ ಎಂದು ಹೇಳಿದರು.
ಜಾತಿ ಗುರುಗಳು ಹೇಗೆ ತಾನೆ ಜಗದ್ಗುರುಗಳಾಗಲು ಸಾಧ್ಯ: ಪರಂಪರೆ ಹಾಗೂ ತತ್ವ ಭೌತಿಕ ವಸ್ತುಗಳ ಮೇಲೆ ನಿಂತಿಲ್ಲ. ಕ್ಷತ್ರಿಯ ಹಾಗೂ ಆಳುವ ವರ್ಗಗಳ ಸಂಕೇತವಾದ ಕಿರೀಟ, ಖಡ್ಗ, ಸಿಂಹಾಸನ ಇತ್ಯಾದಿಗಳನ್ನು ಇಂದು ವಿರಕ್ತರು ಹಾಗೂ ತ್ಯಾಗಮೂರ್ತಿಗಳು ಎನಿಸಿಕೊಂಡು ಮಠಾಧೀಶರೂ ಧರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
 ಲೌಕಿಕ ಆಸೆ ಬಿಟ್ಟ ವಿರಕ್ತ ಸ್ವಾಮಿಗಳು ಭಕ್ತರಿಂದ ಪಾದ ಪೂಜೆಗೆ ಇಪ್ಪತೈದು ಸಾವಿರ, ಸಾಮೂಹಿಕ ಬೋಜನಕ್ಕೆ ಐವತ್ತು ಸಾವಿರ ಎಂದು ಹಣ ಮಾಡುತ್ತಿದ್ದಾರೆ. ಗುರುವಿನ ಜೊತೆ ಭಕ್ತರಾದವರು ಆತ್ಮ ಸಂಬಂಧ ಬೆಸೆಯಲು ಇವುಗಳ ಅಗತ್ಯವಿದೆಯಾ ಎಂದರು.
 ಜೇವರ್ಗಿ ಮರುಳ ಶಂಕರ ದೇವರಮಠದ ಸಿದ್ದಬಸವ ಕಬೀರ ಸ್ವಾಮೀಜಿ ಮಾತನಾಡಿ, ಹಲವಾರು ಮಠಗಳಲ್ಲಿ ಇಂದಿಗೂ ಜಾತಿ ಭೇದ ಹಾಗೂ ಪಂಕ್ತಿಬೇಧಗಳು ನಡೆಯುತ್ತಿದ್ದು, ಕೆಲವು ಮಠಗಳಲ್ಲಿ ಜಾತಿ ಹಾಗೂ ಕೋಮುವಾದವನ್ನು ಪ್ರೋತ್ಸಾಹಿಸುವ ಕೆಲಸ ಗುಪ್ತವಾಗಿ ನಡೆಯುತ್ತಿದೆ ಎಂದು ಹೇಳಿದರು.
 
 ಬಸವ ತತ್ವಗಳನ್ನು ಒಪ್ಪಿಕೊಂಡು ನಾನು ಶರಣನಾಗಿದ್ದರೂ, ಮುಸ್ಲಿಂ ಎಂಬ ಕಾರಣಕ್ಕೆ ನಾಡಿನ ಹಲವು ದೊಡ್ಡ ಸ್ವಾಮಿಗಳಿಂದ ಅವಮಾನವನ್ನು ಅನುಭವಿಸಬೇಕಾಯಿತು. ಇಂದು ಹಲವು ಮಠಗಳ ಮೂಲಕ ಕೋಮುವಾದ ಮತ್ತು ಜಾತಿವಾದವನ್ನು ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎಲ್ಲ ಧರ್ಮಗಳಿಗೂ ಮೀರಿದ ಮಾನವ ಧರ್ಮದ ನಡೆ ನುಡಿಯಿಂದ ಮಾತ್ರ ಸಕಲ ಜೀವರಾಶಿಗಳು ಒಳ್ಳೆಯದು ಬಯಸಲು ಸಾಧ್ಯ ಎಂದರು. ಕನಕಗಿರಿಯ ಡಾ.ಚೆನ್ನಮಲ್ಲ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿರುವ ಎಷ್ಟೋ ಯುವ ಸ್ವಾಮಿಗಳಿಗೆ ಅಕ್ಷರ ದಾಸೋಹ ಮುಖ್ಯವಾ, ಆಚರಣೆ ಮುಖ್ಯವೇ, ಬಸವ ತತ್ವ ಮುಖ್ಯವೇ ಎಂಬಂತಹ ಹಲವು ಗೊಂದಲಗಳಿವೆ. ಸ್ವಾಮೀಜಿಗಳಾಗಿ ನಾವಿಂದು ಒಂದು ನಾಟಕೀಯತೆಗೆ ಒಗ್ಗಿ ಹೋಗಿದ್ದೇವೆ. ಹೀಗಾಗಿ ಹೆಚ್ಚು ನಾಟಕ ಮಾಡುವವರು ದೊಡ್ಡ ಸ್ವಾಮೀಜಿಯಾಗಿಯೂ, ಕಡಿಮೆ ನಾಟಕ ಮಾಡುವವರು ಮರಿ ಸ್ವಾಮೀಜಿಗಳಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆೆ ಎಂದು ಬೇಸರ ವ್ಯಕ್ತಪಡಿಸಿದರು. ವಿಚಾರ ಸಂಕಿರಣದಲ್ಲಿ ಅಡ ಸಿದ್ದೇಶ್ವರ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮತ್ತಿತರ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X