ಇಸ್ರೇಲ್: ಪ್ರತಿ ಮುಂಜಾನೆ ಸಹರಿಗೆ ಮುಸ್ಲಿಮರನ್ನು ಎಬ್ಬಿಸುವ ಮೈಖಲ್!

ಮೈಖಲ್ ಅಯೂಬ್‌ನ ಪವಿತ್ರ ದಿನಚರಿ ಎಂದರೆ ಪ್ರತೀದಿನ 2 ಗಂಟೆಗೆ ಏಳುವುದು. ಆತ ಆಕರ್ಸ್ ಓಲ್ಡ್ ಸಿಟಿಯ ಜನಸಂದಣಿ ತುಂಬಿದ ದಾರಿಗಳಲ್ಲಿ ತಂಬೂರಿ ಹಿಡಿದು ಹೆಜ್ಜೆ ಇಡುವಾಗ ರಂಝಾನ್ ಸಂದರ್ಭದಲ್ಲಿ ಮುಸ್ಲಿಮರು ಎಚ್ಚರಗೊಳ್ಳುತ್ತಾರೆ. ನಗರದಲ್ಲಿ ಆತನ ಕೆಲಸವೇ ಪವಿತ್ರ ತಿಂಗಳಲ್ಲಿ ನಗರವನ್ನು ಎಬ್ಬಿಸುವುದು. ಆದರೆ ಮೈಖಲ್ ಕ್ರಿಶ್ಚಿಯನ್.
39 ವರ್ಷದ ಅರಬ್ ಇಸ್ರೇಲಿಗೆ ಇದರಲ್ಲೇನೂ ತಪ್ಪು ಕಾಣುವುದಿಲ್ಲ. ವಾಯುವ್ಯ ಇಸ್ರೇಲಿನ ಪುರಾತನ ನಗರದ ಮುಸ್ಲಿಂ ನಿವಾಸಿಗಳಿಗೂ ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ನಾವು ಒಂದೇ ಕುಟುಂಬದ ಹಾಗೆ ಎನ್ನುತ್ತಾರೆ ಅಯೂಬ್. ಅವರು ಪಾರಂಪರಿಕ ಲ್ಯಾವಂಟೀನ್ ಉಡುಪು ತೊಟ್ಟು ಕಿರು ದಾರಿಗಳಲ್ಲಿ ತಂಬೂರಿ ಹಿಡಿದು ನಡೆಯುತ್ತಾರೆ. ಭುಜದಿಂದ ಕೇಫೀಯ ಇಳಿದಿರುತ್ತದೆ. ಜೋತುಬಿದ್ದಿ ಪ್ಯಾಂಟುಗಳನ್ನು ತೊಟ್ಟಿರುತ್ತದೆ. ಅವರ ಸೊಂಟಕ್ಕೆ ಕುಸುರಿ ಕಲೆ ಇರುವ ಪಟ್ಟಿಯೂ ಇರುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಮುಂಡಾಸು ತಲೆ ಮೇಲಿರುತ್ತದೆ.
ದೇವರು ಒಬ್ಬನೇ. ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವೆ ಬೇಧ ಭಾವವಿಲ್ಲ ಎನ್ನುವ ಯಾಕೂಬ್ ಧ್ವನಿ ಖಾಲಿ ಬಿದ್ದ ದಾರಿಯಲ್ಲಿ ರಾಗವಾಗಿ ಕೇಳುತ್ತ ರಂಝಾನ್ ಹಬ್ಬದ ಸಂದೇಶ ನೀಡುತ್ತದೆ. ಮಲಗಿರುವವರೇ ಇರುವುದು ಒಬ್ಬನೇ ದೇವರು ಎಂದು ಅವರು ಹಾಡುತ್ತಾರೆ. ಆಗಲೇ ಮನೆಗಳು ಒಂದೊಂದಾಗಿ ಬೆಳಗಲಾರಂಭಿಸುತ್ತದೆ. ಕಿಟಕಿಗಳು ತೆರೆದು ಆತನ ಧ್ವನಿಯನ್ನು ಸ್ವಾಗತಿಸುತ್ತವೆ. ಇಲ್ಲಿನ 50,000 ಜನಸಂಖ್ಯೆಯಲ್ಲಿ ಯಹೂದಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಬಾಹಗಳಿದ್ದಾರೆ. ಇಂದು ಇಸ್ರೇಲಿನ ಭಾಗವಾಗಿರುವ ಇದು 1948ರಲ್ಲಿ ಅರಬ್ ಇಸ್ರೇಲಿ ಯುದ್ಧದ ಸಂದರ್ಭದಲ್ಲಿ ಸೃಷ್ಟಿಯಾಗಿದೆ. ಶೇ. 28ರಷ್ಟು ಅರಬ್ ಇಸ್ರೇಲಿಗಳು ಇಲ್ಲಿದ್ದಾರೆ. ಅವರು ಪ್ಯಾಲೆಸ್ತೀನಿಯನ್ನರು. 1948ರಲ್ಲಿ ಇಸ್ರೇಲ್ ಸೃಷ್ಟಿಯಾದ ಮೇಲೂ ಇಲ್ಲೇ ನೆಲೆಸಿದವರೂ ಇದ್ದಾರೆ. ನಗರದ ಬಹುತೇಕ ಅರಬರು ಮುಸ್ಲಿಮರು. ಆದರೆ ಅಯೂಬ್ ನಂಥ ಕ್ರಿಶ್ಚಿಯನ್ ಅಲ್ಪಸಂಖ್ಯಾತರೂ ಇದ್ದಾರೆ. ಮೇಸಾಹಾರಥಿ ಪರಂಪರೆ ಆಕರ್ ನಿಂದ ಕಣ್ಮರೆಯೇ ಆಗಿತ್ತು. ಆದರೆ 13 ವರ್ಷದ ಹಿಂದೆ ಅಯೂಬ್ ಅದಕ್ಕೆ ಮತ್ತೆ ಜೀವ ತಂದಿದ್ದಾರೆ. ತಮ್ಮ ಮುತ್ತಾತನ ಪರಂಪರೆಯನ್ನು ತಾನು ಉಳಿಸುತ್ತಿದ್ದೇನೆ ಎನ್ನುತ್ತಾರೆ ಅಯೂಬ್. ಅವರ ಮುತ್ತಾತ ಕ್ಯಾಥೋಲಿಕ್ ಆಗಿದ್ದು, ಪ್ರತೀ ಶುಕ್ರವಾರದಂದು ಕುರಾನ್ ಕೇಳುತ್ತಿದ್ದರು. ಇದೇ ಕಾರಣದಿಂದ ಅಯೂಬ್ ಸಹಭಾಳ್ವೆಯ ಭಾವನೆ ಜೊತೆಗೆ ಬೆಳೆದಿದ್ದಾರೆ. ಮುಸ್ಲಿಂ ಸಹೋದರರು ಹಸಿವೆ ಮತ್ತು ಬಾಯಾರಿಕೆ ತಡೆದುಕೊಳ್ಳಲು ನೆರವಾಗುವ ಕರ್ತವ್ಯವಷ್ಟೇ ನಾನು ಮಾಡುತ್ತಿದ್ದೇನೆ ಎನ್ನುತ್ತಾರೆ ಅಯೂಬ್.
19 ವರ್ಷದ ಸಬ್ರಾ ಅಖರ್ ಪ್ರತೀ ಪವಿತ್ರ ತಿಂಗಳಲ್ಲಿ ಮೈಖಲ್ ಅಯೂಬ್ ಎಚ್ಚರಿಸುವುದನ್ನು ಕಂಡೇ ಬೆಳೆದಿದ್ದಾರೆ. ಒಂದು ದಿನ ಅಯೂಬ್ ಬಾರದೆ ಇದ್ದರೆ ಉಪವಾಸ ಮರೆತು ಹೋಗುತ್ತದೆ ಎನ್ನುತ್ತಾರೆ ಸಬ್ರಾ. 36 ವರ್ಷದ ಸಫಿಯಾ ಸಾವೈದ್ ಕೂಡ ಪ್ರತೀ ವರ್ಷ ಅಯೂಬ್ ತಮ್ಮನ್ನು ಎಚ್ಚರಿಸಬೇಕು ಎಂದು ಬಯಸುತ್ತಾರೆ. ಈ ಪರಂಪರೆ ಅಯೂಬ್ ಜೊತೆಗೆ ಮುಗಿಯದು. ಏಕೆಂದರೆ 12 ವರ್ಷದ ಅಹಮದ್ ಅಲಿ ರಿಹಾವಿ ಈಗ ಅವರ ಜೊತೆಗೆ ಬೆಳಗಿನ ಜಾವ ಮೀಸಾಹಾರಥಿ ಮಾಡಲು ಆರಂಭಿಸಿದ್ದಾರೆ. ಅಯೂಬ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
ಕೃಪೆ: http://khaleejtimes.com/





