ರಮಝಾನ್ ತಿಂಗಳ ಪ್ರತಿಫಲ ನಮ್ಮದಾಗಿಸಿಕೊಳ್ಳೋಣ
ನಾನು ಅನುಭವಿಸಿದ ರಮಝಾನ್

ರಮಝಾನ್ ತಿಂಗಳು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೇ ತಿಂಗಳಾಗಿದ್ದು ಮುಸಲ್ಮಾನರು ಉಪವಾಸಿಗರಾಗಿ ಈ ಪುಣ್ಯ ತಿಂಗಳನ್ನು ಆಚರಿಸುತ್ತಾರೆ. ಈ ತಿಂಗಳ ಮಹತ್ವವೇನೆಂದರೆ ನಾವೇನಾದರೂ ಒಳ್ಳೆ ಕೆಲಸ ಮಾಡಿದರೆ ಅಲ್ಲಾಹನು ಅದರ ಪ್ರತಿಯಾಗಿ 70 ಪಟ್ಟು ಅಧಿಕ ಪ್ರತಿಫಲ ನೀಡುವನು.
ಪವಿತ್ರ ರಮಝಾನ್ ತಿಂಗಳಿನಲ್ಲಿ ಕೇವಲ ಒಂದು ಖರ್ಜೂರವನ್ನು ಬೇರೊಬ್ಬರಿಗೆ ದಾನ ನೀಡಿದರೆ ಅದರಿಂದ ಸಿಗುವ ಪ್ರತಿಫಲ ಎಣಿಸಲು ಅಸಾಧ್ಯ. ಮುಹಮ್ಮದ್ ಮುಸ್ತಫಾ (ಸ.ಅ) ಹೇಳಿದರು ‘ಅರ್ಧ ಖರ್ಜೂರವಾದರೂ ಸರಿಯೇ ದಾನ ಮಾಡಿರಿ ನಿಮ್ಮನ್ನು ನೀವು ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ‘. ಇದರಿಂದಾಗಿ ನಮ್ಮ ಬಳಿ ದಾನ ನೀಡಲು ಏನು ಇಲ್ಲದಿದ್ದರೆ ಒಂದು ತುಂಡು ಖರ್ಜೂರವಾದರೂ ದಾನ ಮಾಡಿ ರಮಝಾನ್ ತಿಂಗಳ ಉನ್ನತ ಪ್ರತಿಫಲವನ್ನು ನಮ್ಮದಾಗಿಸಿಕೊಳ್ಳೋಣ.
ರಮಝಾನ್ ತಿಂಗಳು ಹಸಿವಿನ ಯಾತನೆ,ಸರಳ ಜೀವನ,ಬಡವನ ನೊವು ಏನೆಂದು ಅರ್ಥಮಾಡಿಸುತ್ತದೆ. ಇದು ಕೇವಲ ರಮಝಾನ್ ತಿಂಗಳಿಗೆ ಸೀಮಿತವಾಗಿರಿಸದೆ ಮಾಡಿದ ತಪ್ಪಿಗೆ ಮನದಾಳದಿಂದ ಪ್ರಾಯಶ್ಚಿತ ಪಟ್ಟು ತೌಬಾ ಹೇಳಿ ಮುಂದಿನ ಜೀವನದಲ್ಲಿ ವೌಲ್ಯಭರಿತ ಜೀವನ ನಡೆಸುವ ಶ್ರಮದೊಂದಿಗೆ ಅಲ್ಲಾಹನ ಸಂಪ್ರೀತಿ ಗಳಿಸಬೇಕಾಗಿದೆ. ಸೂರ್ಯಾಸ್ತ ಉಪವಾಸ ತೊರೆಯುವ ವೇಳೆ ಕೇವಲ ಕುಡಿಯುವುದು, ತಿನ್ನುವುದೇ ಕಾಯಕವಲ್ಲ. ಹೊರತಾಗಿ ಆತ್ಮಶುದ್ಧೀಕರಣಕ್ಕೆ ದೇವರ ಮೇಲೆ ಗಮನ ನಾಭಿಯನ್ನು ಸರಿಹೊಂದಿಸುವುದಾಗಿದೆ ಮತ್ತು ಸ್ವಯಂ ಶಿಸ್ತು ಮತ್ತು ತ್ಯಾಗದ ಅಭ್ಯಾಸವಾಗಿದೆ.
ಶಹಾದತ್, ನಮಾಝ್,ರಮಳಾನ್,ಝಕಾತ್, ಹಜ್ಜ್ ಎಂಬ ಐದು ಆಧಾರಸ್ಥಂಭಗಳ ಮೇಲೆ ಇಸ್ಲಾಮನ್ನು ಕಟ್ಟಲಾಗಿದೆ. ಉಪವಾಸಾಚರಣೆಯಲ್ಲಿ ಝಕಾತ್(ವೃದ್ದಿ ಮತ್ತು ಸಮೃದ್ದಿ) ನೀಡುವುದು ಸುಸಜ್ಜಿತ ಸಮಯವಾಗಿದೆ. ಅಲ್ಲಾಹನು ಒಬ್ಬನಿಗೆ ಅವನ ಅಗತ್ಯಕಿಂತ ಹೆಚ್ಚು ಸಂಪತ್ತನ್ನು ಕೊಟ್ಟಿದ್ದು ಆ ಸಂಪತ್ತಿನ ಸಂಪಾದನೆಯ ನಿರ್ದಿಷ್ಟ ಭಾಗ ಅರ್ಹರಿಗೆ ಪಾವತಿಸಿಲ್ಲಾವೆಂದಾದರೆ ಪುನರುತ್ಥಾನದ ದಿನ ಅವನ ಸಂಪತ್ತು ಅತ್ಯಂತ ವಿಷಪೂರಿತ ಸರ್ಪದ ರೂಪ ತಾಳುವುದು ಅದರ ತಲೆಯಲ್ಲಿ ಎರಡು ಕಪ್ಪು ಕಲೆಗಳಿರುವುದು ಅದು ಆತನ ಕೊರಳಿಗೆ ಹಾರವಾಗಿ ಬಿಡುವುದು ಮತ್ತು ಅವನ ಎರಡು ದವಡೆಗಳನ್ನು ಹಿಡಿದುಕೊಂಡು ಹೇಳುವುದು ನಾನು ನಿನ್ನ ಸಂಪತ್ತು.
(ಝಕಾತ್ ನೀಡದೇ ಸಂಗ್ರಹಿಸಿಟ್ಟ ಖಜಾನೆ) ಅಲ್ಲಾಹನು ಕೊಟ್ಟ ಭಿಕ್ಷೆಯನ್ನು ಅವನ ಅನುಸರಣೆಯ ರೀತಿಯಲ್ಲಿ ಅವನ ಆಜ್ಙೆಯಂತೆ ಅವನ ಮಾರ್ಗದಲ್ಲಿ ಬಳಸದಿದ್ದರೆ ಆ ಸಂಪತ್ತಿಗೆ ಬೆಲೆ ಇರಲಾರದು. ಪ್ರತಿಫಲದಿಂದ ಕೂಡಿದ ರಂಝಾನ್ ತಿಂಗಳ ಪ್ರತಿಫಲವನ್ನು ಪಡೆಯಲು, ಅಲ್ಲಾಹನಿಗೆ ಭಯಪಟ್ಟು ಜೀವಿಸಲು,ಧಾನ್ಯತ್ಯಾಗ ಮಾಡಲು ಅಲ್ಲಾಹನು ಅನುಗ್ರಹಿಸಲಿ ಆಮೀನ್.
ಅಝ್ವೀನಾ ಬಿಂತ್ ಅಬೂಬಕ್ಕರ್ ಮಂಗಳೂರು.







