ಕ್ರೀಡಾಪಟುಗಳಿಗೆ ಪದಕ ಗಳಿಸುವುದು ಮಾತ್ರ ಉದ್ದೇಶವಾಗಿದೆ: ಸಚಿವ ಇಪಿ ಜಯರಾಜನ್

ತಿರುವನಂತಪುರಂ, ಜೂನ್23:ಕ್ರೀಡಾಪಟುಗಳ ಉದ್ದೇಶ ಪದಕಗಳಿಸುವುದು ಮಾತ್ರ ಆಗಿ ಬದಲಾಗಿದೆ ಎಂದು ಕೇರಳ ಕ್ರೀಡಾಸಚಿವ ಇಪಿ ಜಯರಾಜನ್ ಹೇಳಿದ್ದಾರೆ. ಕ್ರೀಡಾಕ್ಷೇತ್ರವನ್ನು ಇನ್ನಷ್ಟು ಜನಪ್ರಿಯಗೊಳಿಸಲಾಗುವುದು. ಬಡ ಕ್ರೀಡಾಪಟುಗಳಿಗೆ ನೆರವು ನೀಡಲಾಗುವುದು ಎಂದು ಜಯರಾಜನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನಾಚರಣೆ ಸಂದರ್ಭದಲ್ಲಿ ಅವರು ಮಾತಾಡುತ್ತಿದ್ದರು.
ಅಂತಾರಾಷ್ಟ್ರೀಯ ಒಲಿಂಪಿಕ್ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಸಾಮೂಹಿಕ ಓಟವನ್ನು ಕ್ರೀಡಾ ಸಚಿವರು ಪತಾಕೆ ಬೀಸಿ ಉದ್ಘಾಟಿಸಿದರು. ಸಚಿವ ಕಡಕಂಪಳ್ಳಿ ಸುರೇಂದ್ರನ್, ಮಾಜಿ ಕ್ರೀಡಾ ಸಚಿವ ಎಂ.ವಿಜಯಕುಮಾರ್, ಕ್ರೀಡಾ ಪಟು ಕೆ.ಎಂ. ಬೀನ ಮೋಳ್ ಮುಂತಾದವರು ಭಾಗವಹಿಸಿದ್ದರು.
Next Story





