ಕೇರಳ ಬಸ್‌ಸ್ಟ್ಯಾಂಡ್‌ನಲ್ಲಿ ಬರ್ಮೀಸ್ ಕುಟುಂಬ

ಕಲ್ಪಟ್ಟ, ಜೂನ್ 23: ಇಲ್ಲಿನ ಹೊಸಬಸ್‌ಸ್ಟಾಂಡ್‌ನಲ್ಲಿ ಬರ್ಮೀಸ್ ನಿರಾಶ್ರಿತ ಕುಟುಂಬವೊಂದು ಕಳೆದ ಐದು ದಿವಸಗಳಿಂದ ವಾಸವಿದೆ. ಅಬ್ದುಸ್ಸಲಾಂ ಮತ್ತು ರೈಹಾನ ದಂಪತಿಗಳು ಹಾಗೂ ಅವರ ನಾಲ್ವರು ಗಂಡು ಮಕ್ಕಳು ನಿರ್ಗತಿಕರಾಗಿ ಭಾರತಕ್ಕೆ ಪಲಾಯನ ಮಾಡಿಬಂದಿದ್ದು ಇದೀಗ ಕೇರಳದ ಕಲ್ಪಟ್ಟ ಬಸ್‌ಸ್ಟಾಂಡ್‌ನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಮತ್ತು ಮಕ್ಕಳ ಮುಂದಿನ ಭವಿಷ್ಯದ ಕುರಿತು ಚಿಂತಾಕ್ರಾಂತರಾಗಿದ್ದಾರೆ.
ಅವರ ಮಕ್ಕಳಾದ ಇಬ್ರಾಹೀಮ್, ಅಹ್ಮದ್, ಸಾಲಿಮ್, ಅಹದ್ ಬಸ್‌ಸ್ಟಾಂಡ್‌ನ್ನೇ ತಮ್ಮ ಮನೆಯೆಂದು ತಿಳಿದು ಆಟವಾಡುತ್ತಿದ್ದಾರೆ. ಇವರು ಭಾರತ ಕ್ರಿಕೆಟ್ ತಂಡ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು. ತಮ್ಮ ಕುರಿತು ಹೇಳಿಕೊಳ್ಳಲು ಮೊದಲು ಹಿಂಜರಿದ ಅಬ್ದುಸ್ಸಲಾಂ ಪೊಲೀಸರು ಇಲ್ಲಿಯೂ ಇರಲು ಬಿಡಲಾರರು ಎಂದು ಆತಂಕ ವ್ಯಕ್ತಪಡಿಸಿದ್ದರು. ಮ್ಯಾನ್ಮಾರ್‌ನಿಂದ ನಿರಾಶ್ರಿತರಾಗಿ ಬಂದ ಈ ಕುಟುಂಬ ಮೊದಲು ಕಾಶ್ಮೀರದಲ್ಲಿ ತಂಗಿತ್ತು. ಅಬ್ದುಸ್ಸಲಾಂ ಚಾಲಕನಾಗಿ ಅಲ್ಲಿ ದುಡಿಯುತ್ತಿದ್ದರು. ಆನಂತರ ಚೆನ್ನೈಗೆ ಬಂದರು. ಅಲ್ಲಿಂದ ಕೇರಳಕ್ಕೆ ಬಂದಿದ್ದಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ದಂಪತಿಗಳ ಬಯಕೆಯಾಗಿದೆ. ಈ ಕುರಿತು ಅವರ ಪ್ರಯತ್ನ ಮುಂದುವರಿದಿದೆ. ದಾಖಲೆಗಳು ಸರಿಯಿಲ್ಲದ್ದರಿಂದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಸಾಧ್ಯವಾಗಿಲ್ಲ.ಆದ್ದರಿಂದ ದಾಖಲೆಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ.. ಇಲ್ಲೆಲ್ಲಾದರೂ ಕೆಲಸಮಾಡಿ ಜೀವಿಸಲು ಅವಕಾಶ ಸಿಕ್ಕಿದ್ದರೆ ಎಂದು ಅಬ್ದುಸ್ಸಲಾಂ ತಮ್ಮ ಬಯಕೆ ವ್ಯಕ್ತಪಡಿಸಿದ್ದು ಕುಟುಂಬದ ಬಳಿ 2016 ಸೆಪ್ಟಂಬರ್‌ವರೆಗೆ ಅವಧಿಯ ವೀಸಾ ಕೂಡಾ ಇದೆ. ಭಾರತಕ್ಕೆ ಇಂತಹ ಇನ್ನೂ ಕೆಲವು ನಿರಾಶ್ರಿತ ಕುಟುಂಬಗಳು ಭಾರತಕ್ಕೆ ಬಂದಿದ್ದು ಅಲ್ಲಲ್ಲಿ ಇವೆ ಎಂದು ಇವರು ತಿಳಿಸುತ್ತಾರೆ.ಮ್ಯಾನ್ಮಾರ್‌ನ ಮಂಡು ಜಿಲ್ಲೆಯ ನಾಗ್‌ಪುರ ಎಂಬಲ್ಲಿ ಈ ಕುಟುಂಬ ವಾಸಿಸುತ್ತಿತ್ತು.





