ಶಾರುಖ್ ರ ಬಿಎಂಡಬ್ಲ್ಯು ಐ8 ನ್ನು ತಡೆದು ನಿಲ್ಲಿಸಿದ ನಿರ್ವಸಿತ ಮಹಿಳೆ
ಸೂಪರ್ ಸ್ಟಾರ್ ನ ಸೂಪರ್ ಕಾರ್ v/s ವಾಸ್ತವ !

ಮುಂಬೈ, ಜೂ. 23 : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರ ಹೊಸ ಸೂಪರ್ ಕಾರ್ ಬಿಎಂಡಬ್ಲ್ಯು ಐ8 ಎಲ್ಲರ ಗಮನ ಸೆಳೆದಿದ್ದು ಹಳೇ ಸುದ್ದಿ.
ಆದರೆ ಈ ಕಾರ್ ನಲ್ಲಿ ಶಾರುಖ್ ಹೋಗುತ್ತಿರುವಾಗ ನಿರ್ವಸಿತ ಮಹಿಳೆಯೊಬ್ಬರು ಕಾರನ್ನು ತಡೆದು ನಿಲ್ಲಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ವಿಷಯವನ್ನು ಸ್ವತಃ ಶಾರುಖ್ ಬಹಿರಂಗಪಡಿಸಿದ್ದಾರೆ. ಅವರ ಮನೆ ಮನ್ನತ್ ಸಮೀಪವೇ ಈ ಘಟನೆ ನಡೆದಿದೆ.
ಕಾರಿನ ಎದುರು ಹಠಾತ್ತಾಗಿ ಬಂದ ಈ ಮಹಿಳೆ ಚಾಲಕನಲ್ಲಿ ಕಾರು ನಿಲ್ಲಿಸಲು ಹೇಳಿದ್ದಾರೆ. ಕಾರನ್ನು ಖುದ್ದು ಶಾರುಖ್ ಚಲಾಯಿಸುತ್ತಿದ್ದರೆ ಎಂದು ಖಚಿತವಾಗಿಲ್ಲ. ತಕ್ಷಣ ಶಾರುಖ್ ರ ಸುರಕ್ಷತಾ ಸಿಬ್ಬಂದಿಗಳು ಬಂದು ಮಹಿಳೆಯನ್ನು ದೂರ ಮಾಡಲು ಯತ್ನಿಸಿದರು. ಆದರೆ ಶಾರುಖ್ ಅವರನ್ನು ತಡೆದು ಮಹಿಳೆಯನ್ನು ಆಕೆಯ ಪಾಡಿಗೆ ಬಿಡುವಂತೆ ಹೇಳಿದ್ದಾರೆ.
Next Story





