ಕಡಬ: ಕೊರುಂದೂರು ರಸ್ತೆಗೆ ಕಾಂಕ್ರಿಟೀಕರಣ
.jpg)
ಕಡಬ, ಜೂ.23: ಮಳೆಗಾಲದಲ್ಲಿ ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ಕೋಡಿಂಬಾಳ ಗ್ರಾಮದ ಕೊರುಂದೂರಿನ ರಸ್ತೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಯಿತು.
ಕಾಮಗಾರಿಯು ಪೂರ್ಣಗೊಂಡಿದ್ದು, ಕೆಸರುಮಯವಾಗುತ್ತಿದ್ದ ರಸ್ತೆಯಲ್ಲಿ ಪರದಾಡುತ್ತಿದ್ದ ಕೊರುಂದೂರು ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Next Story





