ಡಿಕೆಎಸ್ಸಿ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಇಫ್ತಾರ್ ಸಂಗಮ

ದುಬೈ, ಜೂ.23: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ)ಮಂಗಳೂರು ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಇಫ್ತಾರ್ ಕೂಟ ಇತ್ತೀಚೆಗೆ ಬಾರ್ ದುಬೈ ಮುಸಲ್ಲ ಟವರ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಿಕೆಎಸ್‌ಸಿಯ ಯುಎಇ ರಾಷ್ಟ್ರೀಯ ಅಧ್ಯಕ್ಷ ಹುಸೈನ್ ಹಾಜಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸೈಯದ್ ತ್ವಾಹ ಬಾಫಾಕಿ ತಂಙಳ್ ದುಆ ನೆರವೇರಿಸಿದರು.
ಡಿಕೆಎಸ್ಸಿಯ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೂಳೂರು ಇದರ ಜನರಲ್ ಮ್ಯಾನೇಜರ್ ಮೌಲಾನ ಹಾಜಿ ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೌಲಾನ ಹಾಜಿ ಮುಸ್ತಫಾ ಸಅದಿಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಿಕೆಎಸ್ಸಿ ಯುಎಇ ರಾಷ್ಟ್ರೀಯ ಸಮಿತಿಯ ಸಲಹೆಗಾರರಾದ ಮೊಯ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಸೈಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಇಬ್ರಾಹೀಂ ಸಖಾಫಿ ಕೆದಂಬಾಡಿ, ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು, ಅಬೂಬಕರ್ ಮದನಿ ಕೆಮ್ಮಾರ ಹಾಗೂ ಹಿತೈಷಿಗಳಾದ ಹಾಜಿ ಅಬ್ದುರ್ರಝಾಕ್ (ದೀವಾ), ಅಝೀಮ್ ಉಚ್ಚಿಲ, ಎ.ಕೆ.ಸುಲೈಮಾನ್ ಹಾಜಿ ಉಚ್ಚಿಲ, ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಎಂ.ಇ ಮೂಳೂರು, ಲತೀಫ್ ಮುಲ್ಕಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಸ್ವಾಗತಿಸಿ, ಇಫ್ತಾರ್ ಚೇರ್ಮೇನ್ ನವಾಝ್ ಕೋಟೆಕ್ಕಾರ್ ವಂದಿಸಿದರು. ಯೂಸುಫ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.







