ಕುಪ್ವಾರಾ: ಭೀಷಣ ಗುಂಡಿನ ಕಾಳಗ, ಇಬ್ಬರು ಭಯೋತ್ಪಾದಕರ ಹತ್ಯೆ

ಲೋಲಾಬ್(ಕುಪ್ವಾರಾ),ಜೂ.23: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಲೋಲಾಬ್ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗಿನ ಭೀಷಣ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ.
ದೋಬಾನ್‌ನ ವಾರ್ನೊ ಗ್ರಾಮದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಬೆಳಿಗ್ಗೆ ಅಲ್ಲಿಗೆ ಮುತ್ತಿಗೆ ಹಾಕಿದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಭದ್ರತಾ ಪಡೆಗಳು ಪ್ರತಿದಾಳಿಗಿಳಿದಾಗ ಭಾರೀ ಗುಂಡಿನ ಚಕಮಕಿ ನಡೆದು ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಈ ಭಯೋತ್ಪಾದಕರು ಕಳೆದ ವಾರ ಮಚಿಲ್ ವಿಭಾಗದಿಂದ ಭಾರತದ ಗಡಿಯೊಳಗೆ ನುಸುಳಿದ್ದ ಗುಂಪಿನ ಸದಸ್ಯರೆಂದು ಹೇಳಲಾಗಿದೆ. ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪನ್ನು ಸೇನೆಯು ತಡೆದಾಗ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಮತ್ತು ಓರ್ವ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದರು.
Next Story





