Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೈರಾನ ಹಿಂದೂ ವಲಸೆ ಪಟ್ಟಿಯಿಂದ ತನ್ನ...

ಕೈರಾನ ಹಿಂದೂ ವಲಸೆ ಪಟ್ಟಿಯಿಂದ ತನ್ನ ಹೆಸರನ್ನೇ ಕೈಬಿಟ್ಟ ಬಿಜೆಪಿ ಸಂಸದ

ಕೈರಾನದಿಂದ 3 ದಶಕದ ಹಿಂದೆ ವಲಸೆ ಹೋಗಿದ್ದ ಹುಕುಂ ಸಿಂಗ್!

ವಾರ್ತಾಭಾರತಿವಾರ್ತಾಭಾರತಿ23 Jun 2016 10:50 PM IST
share
ಕೈರಾನ ಹಿಂದೂ ವಲಸೆ ಪಟ್ಟಿಯಿಂದ ತನ್ನ ಹೆಸರನ್ನೇ ಕೈಬಿಟ್ಟ ಬಿಜೆಪಿ ಸಂಸದ

ಕೈರಾನ , ಜೂ . ೨೩: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನದಿಂದ ಮುಸ್ಲಿಮರಿಗೆ ಹೆದರಿ ಹಿಂದೂಗಳು ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಸಂಸದ ನೀಡಿದ  ಪಟ್ಟಿ ಸಂಪೂರ್ಣ ಆಧಾರರಹಿತ ಹಾಗೂ ತಪ್ಪುಗಳಿಂದ ಕೂಡಿದ್ದು ಎಂದು ಜಿಲ್ಲಾಡಳಿತ ಹಾಗೂ ಹಲವು ಮಾಧ್ಯಮಗಳು ಬಹಿರಂಗಪಡಿಸಿದ್ದವು. ಈ ಬಳಿಕ ಖುದ್ದು ಬಿಜೆಪಿ ಸಂಸದ ಹುಕುಂ ಸಿಂಗ್ ಅವರೇ ಈ ಪಟ್ಟಿಯ ಬಗ್ಗೆ ತಿಪ್ಪರಲಾಗ ಹೊಡೆದು ರಾಗ ಬದಲಿಸಿದ್ದರು. ಈಗ ಹುಕುಂ ಸಿಂಗ್ ಅವರ ಪಟ್ಟಿಯಲ್ಲಿನ ಇನ್ನೊಂದು ಬಹುದೊಡ್ಡ ಲೋಪ ಬಹಿರಂಗವಾಗಿದೆ. ಅದರಲ್ಲಿ ಕೈರಾನದಿಂದ ವಲಸೆ ಹೋದ ಒಂದು ಬಹುಮುಖ್ಯ ಹಿಂದೂವೊಬ್ಬರ ಹೆಸರೇ ಇಲ್ಲ ಎಂದು ತಿಳಿದು ಬಂದಿದೆ. ಆ ಹಿಂದೂ ಬೇರಾರೂ ಅಲ್ಲ, ಸ್ವತಃ ಹುಕುಂ ಸಿಂಗ್ ಅವರೇ !

ಹೌದು, ಬಿಜೆಪಿ ಸಂಸದ ಹುಕುಂ ಸಿಂಗ್ ಅವರು ಮೂರು ದಶಕಗಳ ಹಿಂದೆ ಕೈರಾನದಿಂದ ವಲಸೆ ಹೋಗಿ ಮುಝಫರ್ ನಗರದಲ್ಲಿ ನೆಲೆಸಿದವರು ಎಂದು ಕೈರಾನದ ಸ್ಥಳೀಯರು ಖಚಿತಪಡಿಸಿದ್ದಾರೆ. ಆದರೆ ಅವರು ಸ್ವತಃ ತನ್ನ ಹೆಸರನ್ನು ಬರೆಯಲು ಮರೆತು ಬಿಟ್ಟಿದ್ದಾರೆ.

" ಮೂರು ದಶಕಗಳ ಹಿಂದೆ ಹುಕುಂ ಸಿಂಗ್ ಸಾಹೇಬರು ಇಲ್ಲಿಂದ ವಲಸೆ ಹೋಗಿ ಮುಝಫರ್ ನಗರದ ಹಿಂದೂ ಬಾಹುಳ್ಯವಿರುವ ಗಾಂಧಿ ಕಾಲನಿಯಲ್ಲಿ ನೆಲೆಸಿದರು. ಆದರೆ ೨೦೧೦ ರಲ್ಲಿ ಅವರ ಕುಟುಂಬದಲ್ಲಿ ಒಂದು ದುರಂತ ನಡೆಯಿತು. ಗೂಂಡಾಗಳು ಅವರ ಮನೆಗೆ ನುಗ್ಗಿ ಅವರ ಪತ್ನಿಯನ್ನು ಕೊಲೆ ಮಾಡಿದರು.ಈ ದುಷ್ಕೃತ್ಯ ಎಸಗಿದ್ದು ' ಬೇರೆ ಸಮುದಾಯದವರಲ್ಲ '.  ಆ ಬಳಿಕ ಹುಕುಂ ಸಿಂಗ್ ಅವರು ಮತ್ತೆ ಕೈರಾನಕ್ಕೆ ಬಂದು ನಗರದ ಹೊರವಲಯದಲ್ಲಿ ನೆಲೆಸಿದರು. ಆದರೆ ಮೊನ್ನೆ ಪಟ್ಟಿ ನೀಡುವಾಗ ಯಾಕೆ ಅವರು ಇದನ್ನು ಮರೆತರು ಎಂದು ನನಗೆ ಆಶ್ಚರ್ಯವಾಗುತ್ತಿದೆ  " ಎಂದು ಶಾಮ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಫರ್ಹತ್ ಖಾನ್ ಅವರು ಹೇಳಿದ್ದಾರೆ.

ತಾನು ಕೈರಾನದಿಂದ ಮುಝಫರ್ ನಗರಕ್ಕೆ ವಲಸೆ ಹೋಗಿದ್ದು ಹೌದು ಎಂದು ಹುಕುಂ ಸಿಂಗ್ ಅವರೂ ಒಪ್ಪಿಕೊಂಡಿದ್ದಾರೆ.

ಕೈರಾನಾದ ಸ್ಥಳೀಯರ ಪ್ರಕಾರ ಹುಕುಂ ಸಿಂಗ್ ಅವರ ಮೇಲೆ ಗೂಂಡಾಗಳಿಗೆ ಪರೋಕ್ಷ ಸಹಕಾರ , ಬೆಂಬಲ ನೀಡುವ ಆರೋಪವೂ ಇದೆ.  "ಕೈರಾನದ ಕುಖ್ಯಾತ ಗೂಂಡಾ ಮೂಕೀಮ್ ಕಾಲಾಗೂ ಹುಕುಂ ಸಿಂಗ್ ಅವರ ಅಭಯ ಇತ್ತು. ಆದ್ದರಿಂದಲೇ ಅವರು ಈ ಹಿಂದೆ ಎಂದೂ ಆತನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿಲ್ಲ . ಈಗ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುವಾಗ ಕೇವಲ ರಾಜಕೀಯ ಕಾರಣಕ್ಕೆ ಅವರು ಈ ಹೊಸ ವರಸೆ ಪ್ರಾರಂಭಿಸಿದ್ದಾರೆ " ಎಂದು ಸ್ಥಳೀಯರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X