ದಮ್ಮಾಮ್: ಡಿಕೆಎಸ್ಸಿ ದಮಾಮ್ ವತಿಯಿಂದ ಇಫ್ತಾರ್ ಸಂಗಮ

ದಮ್ಮಾಮ್, ಜೂ.23: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ದಮ್ಮಾಮ್ ಘಟಕದ ವತಿಯಿಂದ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮ ಇತ್ತೀಚೆಗೆ ದಮ್ಮಾಮಿನ ಅಲ್ ಕಯಾಮ್ ರೆಸ್ಟೋರೆಂಟ್ನ ಹಾಲ್ನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ಮತ್ತು ದುಆ ನೇತೃತ್ವವನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷ ಅಸೈಯದ್ ಆಟಕೋಯ ತಂಙಳ್ ವಹಿಸಿದ್ದರು.
ಫೈಝಿ ಅಲ್ ಕೋಬಾರ್ ರಮಝಾನ್ ಸಂದೇಶ ನೀಡಿದರು. ಈ ಸಂದರ್ಭ ಅಲ್ಕೊಬಾರ್ ಮತ್ತು ದಮ್ಮಾಮ್ ಸಮಿತಿಯ ವತಿಯಿಂದ ತಂಙಳ್ರನ್ನು ಸನ್ಮಾನಿಸಲಾಯಿತು.
ಮುಹಮ್ಮದ್ ಹಸನ್ ಮೂಡುತೋಟ, ಹಾತಿಂ ಕೂಳೂರು, ಹಸನ್ ಬಾವ ಕುಪ್ಪೆಪದವು, ಹಾತಿಂ ಕಂಚಿ, ಮೊಯ್ದಿನ್ ಬಾವ ಮಂಜೇಶ್ವರ, ಸಿದ್ದೀಕ್ ಕೊಂಚಾರ್,ಅಬ್ದುಲ್ ಖಾದರ್ ಸಕಲೇಶಪುರ, ಹಸನ್ ಕೊಟ್ಟಿಗೆಹಾರ, ಇಸ್ಮಾಯೀಲ್ ಅರಾಮಿಕ್ಸ್, ಅಬ್ದುಲ್ ಅಝೀಝ್ ಮೂಡುತೋಟ, ಇಬ್ರಾಹೀಂ ಬೈಕಂಪಾಡಿ, ಸಂಶೀರ್ ಮುಲ್ಕಿ, ಅಬೂಬಕರ್ ಅಜಿಲಮೊಗ್ರು, ಅಬ್ದುಲ್ ಹಮೀದ್ ಕೊಲ್ನಾಡ್, ಹನೀಫ್ ತಡಂಬೈಲ್, ಹನೀಫ್ ಕುಪ್ಪೆಪದವು, ಇಸ್ಮಾಯೀಲ್ ಮೂಲೂರು, ಉಮರ್ ಮರವೂರು, ಇಮ್ತಿಯಾಝ್ ಕೂಳೂರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಮುಖಂಡರು ಮತ್ತು ದಮಾಮ್ ಝೋನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಅರಾಮಿಕ್ಸ್ , ಇಸ್ಮಾಯೀಲ್ ಕಿನ್ಯ, ಸುಲೈಮಾನ್ ಸೂರಿಂಜೆ, ಅಬೂಬಕರ್ ಬರ್ವ, ಜಮಾಲ್ ಸ್ವಾಲಿಹ್ ಕಣ್ಣಂಗಾರ್, ಕೆ.ಎಚ್.ರಫೀಕ್ ಸೂರಿಂಜೆ, ಫಾರೂಕ್ ಕರ್ನಿರೆ, ಝೈನುದ್ದೀನ್ ಮುಕ್ವೆ ,ಉಸ್ಮಾನ್ ಅರಾಮಿಕ್ಸ್, ಅನ್ವರಾಕ ಗೂಡಿನಬಳಿ, ಅಬ್ದುಲ್ ರಹ್ಮಾನ್ ಪಾಣಾಜೆ, ಬಶೀರ್ ಮೆಗಾ, ಮುಸ್ತಫಾ ಮೈನ, ಅಬ್ದುಲ್ ಅಝೀಝ್ ಮೂಳೂರ್,ಅಬ್ದುಲ್ ಗಫೂರ್ ಸಜಿಪ ಮತ್ತು ಹಲವಾರು ನಾಯಕರು ಭಾಗವಹಿಸಿ ಶುಭ ಹಾರೈಸಿದರು. ಕಾಟಿಪಳ್ಳ ಸ್ವಾಗತಿಸಿದರು. ಝೈನುದ್ದೀನ್ ಮುಕ್ವೆ ವಂದಿಸಿದರು.







