Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶಿಕ್ಷಣತಜ್ಞರ ಕಡೆಗಣನೆಯಿಂದ ಉತ್ತಮ ಉನ್ನತ...

ಶಿಕ್ಷಣತಜ್ಞರ ಕಡೆಗಣನೆಯಿಂದ ಉತ್ತಮ ಉನ್ನತ ಶಿಕ್ಷಣ ಸಾಧ್ಯವೇ?

ಪ್ರಭಾಷ್ ರಾಜನ್ಪ್ರಭಾಷ್ ರಾಜನ್23 Jun 2016 11:40 PM IST
share
ಶಿಕ್ಷಣತಜ್ಞರ ಕಡೆಗಣನೆಯಿಂದ ಉತ್ತಮ ಉನ್ನತ ಶಿಕ್ಷಣ ಸಾಧ್ಯವೇ?

ಭಾಗ-1

ಏಷ್ಯಾದ ಪ್ರತಿಷ್ಠಿತ ಕ್ಯೂಎಸ್ (ಕ್ವೆಕರೆಲ್ಲಿ ಸೈಮಂಡ್ಸ್) ವಿಶ್ವವಿದ್ಯಾನಿಲಯ ರ್ಯಾಂಕಿಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಪರಿಪೂರ್ಣವಲ್ಲದಿದ್ದರೂ, ಇದು ಬೇರೆ ಬೇರೆ ವಿಶ್ವವಿದ್ಯಾನಿಲಯಗಳು ಎಲ್ಲಿ ನಿಂತಿವೆ ಎಂಬ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ಸೂಚಕವಾಗಬಲ್ಲದು. ಕಳೆದ ಕೆಲ ವರ್ಷಗಳ ಪ್ರವೃತ್ತಿಯನ್ನು ಗಮನಿಸುತ್ತಾ ಬಂದರೆ, ಯಾವ ಭಾರತೀಯ ವಿಶ್ವವಿದ್ಯಾನಿಲಯ ಕೂಡ ಏಷ್ಯಾದ ಅಗ್ರ 30 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿ ಏಳು ಚೀನಿ ವಿವಿಗಳು, ಐದು ಹಾಂಕಾಂಗ್ ವಿವಿಗಳು ಹಾಗೂ ದಕ್ಷಿಣ ಕೊರಿಯಾದ ಕೆಲ ವಿಶ್ವವಿದ್ಯಾನಿಲಯಗಳಿವೆ. ಅಗ್ರ 50ರ ಪಟ್ಟಿಯಲ್ಲಿ ಭಾರತದ ಐದು ವಿಶ್ವವಿದ್ಯಾನಿಲಯಗಳಷ್ಟೇ ಇವೆ. ಇವುಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (33), ಮುಂಬೈ ಐಐಟಿ (35), ದಿಲ್ಲಿ ಐಐಟಿ (36), ಮದ್ರಾಸ್ ಐಐಟಿ (43) ಹಾಗೂ ಕಾನ್ಪುರ ಐಐಟಿ (48) ದೇಶದ ಅಗ್ರ ಐದು ಸಂಸ್ಥೆಗಳು. ಆದರೆ ಸಾಂಪ್ರದಾಯಿಕ ಬಹುಶಿಸ್ತೀಯ ವಿಶ್ವವಿದ್ಯಾನಿಲಯಗಳಾದ ದಿಲ್ಲಿ ವಿವಿ, ಬನಾರಸ್ ಹಿಂದೂ ವಿವಿ, ಹೈದರಾಬಾದ್ ವಿವಿ ಅಥವಾ ಜವಾಹರ್‌ಲಾಲ್ ನೆಹರೂ ವಿವಿ ಅಗ್ರ 50ರ ಪಟ್ಟಿಯಲ್ಲಿ ಸೇರಿಲ್ಲ.
ಸಾಮಾನ್ಯವಾಗಿ ಭಾರತದ ವಿಶ್ವವಿದ್ಯಾನಿಲಯಗಳ ಕಳಪೆ ನಿರ್ವಹಣೆಗೆ ನೀಡುವ ಸಬೂಬು ಎಂದರೆ, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಆಕ್ಸ್‌ಫರ್ಡ್ ಅಥವಾ ಕ್ಯಾಂಬ್ರಿಡ್ಜ್‌ನಂಥ ವಿಶ್ವವಿದ್ಯಾನಿಲಯಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎನ್ನುವುದು. ಆದರೆ ಏಷ್ಯಾದ ವಿಶ್ವವಿದ್ಯಾನಿಲಯಗಳ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಈ ವಾದದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್, ಏಷ್ಯಾದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಆರಂಭವಾದದ್ದು 1980ರಲ್ಲಿ. ಅಂದರೆ ನಮ್ಮ ಪ್ರಮುಖ ವಿಶ್ವವಿದ್ಯಾನಿಲಯಗಳಾದ ದಿಲ್ಲಿ ವಿವಿ (1922), ಬಿಎಚ್‌ಯು (1916), ಮದ್ರಾಸ್ ವಿವಿ (1857) ಮತ್ತು ಮುಂಬೈ ವಿವಿ (1857) ಆರಂಭವಾದ ಬಹಳಷ್ಟು ವರ್ಷಗಳ ಬಳಿಕ. ನಾನ್ಯಂಗ್ ವಿಶ್ವವಿದ್ಯಾನಿಲಯ (1955) ಹಾಗೂ ಯುನಿವರ್ಸಿಟಿ ಆಫ್ ಸಿಂಗಾಪುರ (1962) ಎಂಬ ಎರಡು ವಿಶ್ವವಿದ್ಯಾನಿಲಯಗಳನ್ನು ವಿಲೀನಗೊಳಿಸಿ ಹೊಸ ವಿವಿಯನ್ನು 1980ರಲ್ಲಿ ಸ್ಥಾಪಿಸಲಾಯಿತು. ಅಂತೆಯೇ ಕೊರಿಯಾ ಅಡ್ವಾನ್ಸ್‌ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆರಂಭವಾದದ್ದು 1971ರಲ್ಲಿ. ಅಂದರೆ ಭಾರತದಲ್ಲಿ ಜೆಎನ್‌ಯು ಆರಂಭವಾದ ವರ್ಷ. ಕೊರಿಯಾದ ಈ ವಿವಿ ರ್ಯಾಂಕಿಂಗ್‌ನಲ್ಲಿ 6ನೆ ಸ್ಥಾನದಲ್ಲಿದೆ. ಮತ್ತೊಂದು ಉತ್ತಮ ಉದಾಹರಣೆ ಎಂದರೆ ಸಿಟಿ ಯೂನಿವರ್ಸಿಟಿ ಆಫ್ ಹಾಂಕಾಂಗ್ ಆರಂಭವಾದದ್ದು 1994ರಲ್ಲಿ. ಇದು ಏಷ್ಯಾದಲ್ಲಿ 7ನೆ ಹಾಗೂ ವಿಶ್ವದಲ್ಲಿ 57ನೆ ಸ್ಥಾನದಲ್ಲಿದೆ. ಆದ್ದರಿಂದ ವಿಶ್ವವಿದ್ಯಾನಿಲಯ ಎಷ್ಟು ಹಳೆಯದು ಎನ್ನುವ ಅಂಶ ಇಲ್ಲಿ ಪ್ರಮುಖವಾಗುವುದಿಲ್ಲ ಎನ್ನುವುದು ಸ್ಪಷ್ಟ.
ಅಗ್ರ ರ್ಯಾಂಕಿಂಗ್‌ನ ವಿಶ್ವವಿದ್ಯಾನಿಲಯಗಳ ಪ್ರಾಬಲ್ಯ ಮುರಿಯಲು ನಮ್ಮ ವಿವಿಗಳು ಏಕೆ ಹೆಣಗಾಡುತ್ತಿವೆ? ಇದಕ್ಕೆ ಬಹಳಷ್ಟು ಕಾರಣಗಳಿವೆ. ಇವುಗಳಲ್ಲಿ ಮಹತ್ವದ ಅಂಶಗಳನ್ನು ಪರಿಶೀಲಿಸೋಣ.
ಅಧಿಕಾರಶಾಹಿ ಹಾಗೂ ರಾಜಕೀಯ ಹಸ್ತಕ್ಷೇಪ: ವಿಶ್ವವಿದ್ಯಾನಿಲಯಗಳ ಅಧಿಕ ಅಧಿಕಾರಶಾಹಿ ವ್ಯವಸ್ಥೆಯಿಂದಾಗಿ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತೀರಾ ವಿಳಂಬವಾಗುತ್ತಿದೆ. ಜತೆಗೆ ಇದು ನಮ್ಮ ವಿಶ್ವವಿದ್ಯಾನಿಲಯಗಳ ಶ್ರಮಸಂಸ್ಕೃತಿಯನ್ನು ಜಡ ಸಂಸ್ಕೃತಿಯಾಗಿ ಮಾರ್ಪಡಿಸಿದೆ. ಬಹುತೇಕ ಎಲ್ಲ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ, ಮಂಕು ಕವಿದ ಅಧಿಸೂಚನೆಗಳು, ಮೇಜಿನಿಂದ ಮೇಜಿಗೆ ಒಪ್ಪಿಗೆಗಾಗಿ ಅಲೆದಾಡುವ ಸರಕಾರಿ ಆದೇಶಗಳು ಹಾಗೂ ಕಡತಗಳು ಹೀಗೆ ಸರಕಾರಿ ವ್ಯವಸ್ಥೆಯ ಚಿತ್ರಣವೇ ಕಂಡುಬರುತ್ತದೆ. ಇದರ ಕಾರಣದಿಂದ ವಿಳಂಬ ನೀತಿ ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳ ವ್ಯವಸ್ಥೆಯಾಗಿದೆ. ಖಾಲಿ ಹುದ್ದೆಗಳ ಬಗ್ಗೆ ಜಾಹೀರಾತು ನೀಡಲು, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು, ಸಂದರ್ಶನಗಳನ್ನು ನಡೆಸಲು ಮತ್ತು ಅಂತಿಮ ಆಯ್ಕೆಗೆ ಹಲವು ವರ್ಷಗಳನ್ನೇ ತೆಗೆದುಕೊಳ್ಳುತ್ತವೆ.
ಮುಕ್ತ ಮಾರುಕಟ್ಟೆಯ ಗಾಳಿ ಭಾರತೀಯ ಆರ್ಥಿಕತೆಗೆ ಒಳ್ಳೆಯ ಜಗತ್ತನ್ನು ಪರಿಚಯಿಸುತ್ತಿರುವಾಗ, ಶಿಕ್ಷಣದಂಥ ಸಾರ್ವಜನಿಕ ಸರಕನ್ನು ಮಾರುಕಟ್ಟೆ ಶಕ್ತಿಗಳ ಅಸ್ಥಿರತೆಗೆ ಒಳಪಡಿಸುವುದು ಒಳ್ಳೆಯ ಯೋಚನೆಯಲ್ಲ.
ಸಾಮಾನ್ಯವಾಗಿ ಪ್ರಮುಖ ನೇಮಕಾತಿಗಳಲ್ಲಿ ಆಗುವ ವಿಳಂಬ. ಉದಾಹರಣೆಗೆ ದಿಲ್ಲಿ ವಿವಿ ವ್ಯಾಪ್ತಿಯ 20 ಕಾಲೇಜುಗಳಲ್ಲಿ ಪ್ರಾಚಾರ್ಯರೇ ಇಲ್ಲ. ಇದರಲ್ಲಿ ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್, ಹಿಂದೂ ಕಾಲೇಜ್‌ನಂಥ ದೇಶದ ಪ್ರತಿಷ್ಠಿತ ಕಾಲೇಜುಗಳೂ ಸೇರಿವೆ. ಹಲವು ವರ್ಷಗಳಿಂದ ಇಲ್ಲಿ ಪ್ರಾಚಾರ್ಯ ಹುದ್ದೆ ಖಾಲಿ ಉಳಿದಿವೆ. 2015ರ ವರದಿಯ ಪ್ರಕಾರ, 16 ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಅಧಿಕಾರಾವಧಿ ಮುಕ್ತಾಯವಾಗಿ ಅವರು ಹೋಗಿ ಒಂದು ವರ್ಷದ ಬಳಿಕವೂ ಆ ಹುದ್ದೆಗಳಿಗೆ ನೇಮಕ ಆಗಿರಲಿಲ್ಲ. ಇದಕ್ಕೆ ವಿರುದ್ಧವಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ಹುದ್ದೆ ಖಾಲಿಯಾಗುವ ಸಾಕಷ್ಟು ಮುನ್ನವೇ ಆ ಹುದ್ದೆಗೆ ನೇಮಕಾತಿ ನಡೆದು, ನಾಯಕತ್ವ ಹಸ್ತಾಂತರ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಹೀಗೆ ಕೇವಲ ವಿಳಂಬವಾಗುವುದು ಮಾತ್ರವಲ್ಲದೇ, ಈ ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ ಕೂಡಾ ಕಳವಳಕಾರಿ ವಿಚಾರ. ಉದಾಹರಣೆಗೆ ಅಹ್ಮದಾಬಾದ್ ಐಐಎಂನ ಅಧ್ಯಕ್ಷ ಹುದ್ದೆಗೆ ಶೋಧನಾ ಸಮಿತಿ ಶಿಪಾರಸು ಮಾಡಿರುವ ಹೆಸರುಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿರಸ್ಕರಿಸಿದೆ. ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕುಲಪತಿ ನೇಮಕವನ್ನು ಇಂಗ್ಲೆಂಡಿನ ಶಿಕ್ಷಣ ಸಚಿವರು ಅನುಮೋದಿಸುವ ಪದ್ಧತಿ ಇದೆಯೇ?
ಅಧಿಕಾರಶಾಹಿಯಿಂದ ಶಿಕ್ಷಣ ತಜ್ಞರವರೆಗೆ
ನಮ್ಮ ಶಿಕ್ಷಣ ತಜ್ಞರನ್ನು ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಅಥವಾ ಆಕಾಂಕ್ಷೆ ಇರುವವರನ್ನು ನಾವು ನಿಂದನಾತ್ಮಕವಾಗಿ ನೋಡುತ್ತೇವೆ. ಪರಿಣಾಮವಾಗಿ ಪ್ರತಿಭಾವಂತರು ಶಿಕ್ಷಣ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಜೊತೆಗೆ ಇದು ಹಾಲಿ ಇರುವ ಶಿಕ್ಷಣ ತಜ್ಞರನ್ನು ಕೂಡಾ ನೈತಿಕವಾಗಿ ನಿರುತ್ಸಾಹಗೊಳಿಸುತ್ತದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಸರಕಾರ ತನ್ನ ನೌಕರರ ವೇತನ ಪರಿಷ್ಕರಿಸಲು ಪ್ರತೀ 10 ವರ್ಷಗಳಿಗೊಂದು ವೇತನ ಆಯೋಗವನ್ನು ನೇಮಕ ಮಾಡುತ್ತದೆ. ಇದೇ ಪ್ರಕ್ರಿಯೆಯನ್ನು ಶಿಕ್ಷಣತಜ್ಞರ ವೇತನ ಪರಿಷ್ಕರಣೆಗೂ ಬಳಸಲಾಗುತ್ತದೆ. ಅಂದರೆ ಅಧಿಕಾರಶಾಹಿಯ ವೇತನ ಪರಿಷ್ಕರಣೆ ಮಾನದಂಡವೇ ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಇದು ಅವೈಜ್ಞಾನಿಕ. ಏಕೆಂದರೆ ನಾಗರಿಕ ಸೇವಕರಾಗಲು ಕನಿಷ್ಠ ವಿದ್ಯಾರ್ಹತೆ ಪದವಿ. ಆದರೆ ಒಬ್ಬ ಶಿಕ್ಷಣ ಕ್ಷೇತ್ರದ ಪ್ರಾಧ್ಯಾಪಕನ ಕನಿಷ್ಠ ವಿದ್ಯಾರ್ಹತೆ ಸ್ನಾತಕೋತ್ತರ ಪದವಿ ಹಾಗೂ ಸಾಮಾನ್ಯವಾಗಿ ಪಿಎಚ್‌ಡಿ. ಅಂದರೆ ಪದವೀಧರರ ಸಂಖ್ಯೆ ಪಿಎಚ್‌ಡಿ ಹೊಂದಿರುವವರ ಸಂಖ್ಯೆಗಿಂತ ತೀರಾ ಹೆಚ್ಚಾಗಿರುವುದರಿಂದ ಸರಕಾರಿ ನೌಕರಿಗೆ ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಸಹಪ್ರಾಧ್ಯಾಪಕರಾಗಲು ಸಿಗುವವರ ಸಂಖ್ಯೆ ತೀರಾ ಕಡಿಮೆ.
ಮೂಲ ಅರ್ಥಶಾಸ್ತ್ರದ ಪ್ರಕಾರ, ಬೇಡಿಕೆಗಿಂತ ಪೂರೈಕೆ ಹೆಚ್ಚಿದಾಗ, ಸಹಜವಾಗಿಯೇ ಬೆಲೆ ಕಡಿಮೆಯಾಗುತ್ತದೆ. ಇದನ್ನು ಇಲ್ಲಿ ಅನ್ವಯಿಸುವುದಾದರೆ, ಪದವೀಧರರ ಸಂಖ್ಯೆ ಅಧಿಕವಾಗಿರುವುದರಿಂದ ವೇತನವೂ ಕಡಿಮೆಯಾಗಬೇಕು. ಆದರೆ ಸೆಕ್ಯುರಿಟಿ ಹಾಗೂ ಇತರ ವಹಿವಾಟುಗಳ ಬಗ್ಗೆ ಆಳವಾದ ಜ್ಞಾನ ಇರುವ, ಪಿಎಚ್‌ಡಿ ಪದವಿ ಪಡೆದ ವಕೀಲರ ಲಭ್ಯತೆ ಕಡಿಮೆ ಇರುವುದರಿಂದ ಸಹಜವಾಗಿಯೇ ಇವರ ವೇತನ ಹೆಚ್ಚಾಗಿರಬೇಕು. ಇಷ್ಟಾಗಿಯೂ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ವೇತನವನ್ನು ಕೇಂದ್ರ ಸರಕಾರದ ‘ಎ’ ದರ್ಜೆ ಅಧಿಕಾರಿಯ ವೇತನಕ್ಕೆ ಸಮಾನವಾಗಿ ನಿಗದಿಪಡಿಸಲಾಗುತ್ತದೆ. ಇದರಿಂದ ಸಹಜವಾಗಿಯೇ, ಶಿಕ್ಷಣ ತಜ್ಞರಾಗುವ ಬದಲು ಪ್ರತಿಭಾವಂತರು ಅಧಿಕಾರಶಾಹಿ ವ್ಯವಸ್ಥೆಯೆಡೆಗೆ ಆಕರ್ಷಿತರಾಗುತ್ತಾರೆ. ಅಂದರೆ ಉನ್ನತ ಶಿಕ್ಷಣ ಪಡೆದವರು ಸಂಶೋಧನಾ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಬದಲು ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತಾಗುತ್ತದೆ.
ಕೃಪೆ: thewire

share
ಪ್ರಭಾಷ್ ರಾಜನ್
ಪ್ರಭಾಷ್ ರಾಜನ್
Next Story
X