ವಿಮಾನಯಾನ ಸಂಸ್ಥೆಗಳು ರಾಕ್ಷಸರಲ್ಲ
ಅಶೋಕ್ ಗಜಪತಿರಾಜು
ಹೊಸದಿಲ್ಲಿ, ಜೂ.23: ವಿಮಾನಯಾನ ಸಂಸ್ಥೆಗಳು ‘ದೇವತೆಗಳಲ್ಲದಿರ ಬಹುದು, ಆದರೆ ರಾಕ್ಷಸರಲ್ಲ’ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಇಂದು ಹೇಳಿದ್ದಾರೆ.
ವಿಮಾನ ಪ್ರಯಾಣ ದರಗಳ ಏಕಪಕ್ಷೀಯ ಏರಿಕೆಯ ಕುರಿತಾದ ಕಳವಳದ ನಡುವೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮಾನಗಳು ಪ್ರತಿಕ್ರಿಯಾತ್ಮಕವಾಗಿದ್ದವೆಂದು ತಿಳಿಸಿದ್ದಾರೆ.
ವಿಮಾನ ಪ್ರಯಾಣ ದರಗಳ ಭಾರೀ ಏರಿಕೆಯನ್ನು ನಿಭಾ ಯಿಸುವುದಕ್ಕೆ ‘ಸರಳ ಪರಿಹಾರ’ ಇರಲಾರೆದೆಂದು ಸ್ಪಷ್ಟಪಡಿಸಿದ ಅಶೋಕ್ ಗಜಪತಿರಾಜು, ಮೂಲ ದರವನ್ನು ಮೇಲೇರಿಸುವ ಸಾಧ್ಯತೆಯಿರುವುದರಿಂದ ಮಿತಿ ನಿಗದಿಪಡಿಸುವುದೂ ಪರಿಹಾರವಾಗದೆಂದು ಪುನರುಚ್ಚರಿಸಿದ್ದಾರೆ.
ಪ್ರಯಾಣ ದರಕ್ಕೆ ಗರಿಷ್ಠ ಮಿತಿ ನಿಗದಿಪಡಿಸುವುದರ ಕುರಿತಾದ ತನ್ನ ಅನಿಸಿಕೆಯನ್ನು ಬೆಂಬಲಿಸಲು ಅವರು, ಕಳೆದ ವರ್ಷ ನಡೆಸಲಾಗಿದ್ದ ವಿಶ್ಲೇಷಣೆಯೊಂದನ್ನು ಉಲ್ಲೇಖಿಸಿದ್ದಾರೆ. ಮಾರಾಟವಾಗಿದ್ದ ಟಿಕೆಟ್‌ಗಳಲ್ಲಿ ಕೇವಲ ಸುಮಾರು ಶೇ.1.7ರಷ್ಟು ಮಾತ್ರವೇ ಉನ್ನತ ದರದ ಟಿಕೆಟ್‌ಗಳಿದ್ದವೆಂಬುದನ್ನು ಅದು ತೋರಿಸಿತ್ತು.
ಮೇಲ್ಮಿತಿ ಹಾಗೂ ಕೆಳಮಿತಿಗಳು ಅತ್ಯಂತ ಕುತೂಹಲಕರವಾಗಿವೆ. ಆದರೆ ನಾವು ಶೇ.1.7 ರಷ್ಟು ಪ್ರಯಾಣಿಕರ ಲಾಭಕ್ಕಾಗಿ ಶೇ.90ಕ್ಕೂ ಹೆಚ್ಚು ಪ್ರಯಾಣಿಕರಿಗೆ ದರಗಳನ್ನು ಮೇಲಕ್ಕೇರಿಸುವಂತಹ ಪರಿಸ್ಥಿತಿಗೆ ಸಿಕ್ಕಿಬೀಳಬಾರದು ಎಂದು ಸಚಿವರು, ಸರಕಾರವು ವಿಮಾನ ದರಗಳಿಗೆ ಮೇಲ್ಮಿತಿ ನಿಗದಿಗೊಳಿಸುವ ಬಗ್ಗೆ ಪರಿಶೀಲಿಸಲಿದೆಯೇ? ಎಂಬ ಪ್ರಶ್ನೆಗುತ್ತರವಾಗಿ ಹೇಳಿದ್ದಾರೆ.
ವಿಮಾನ ಟಿಕೆಟ್‌ಗಳಿಗೆ ನ್ಯಾಯೋಚಿತ ಬೆಲೆಯನ್ನು ಖಚಿತಪಡಿಸುವುದೇ ಒಟ್ಟಾರೆ ಪ್ರಯತ್ನವೆಂದು ಒತ್ತಿ ಹೇಳಿದ ಅವರು, ಚೆನ್ನೈ ಹಾಗೂ ಶ್ರೀನಗರದ ನೆರೆಯ ವೇಳೆ ದರಗಳನ್ನು ನ್ಯಾಯೋಚಿತವಾಗಿರಿಸುವಲ್ಲಿ ವಿಮಾನ ಸಂಸ್ಥೆಗಳು ಹೊಣೆಗಾರಿಕೆಯನ್ನು ತೋರಿಸಿದ್ದವೆಂದು ಅಶೋಕ್ ಗಜಪತಿರಾಜು ತಿಳಿಸಿದ್ದಾರೆ.
ವಿಮಾನ ಸಂಸ್ಥೆಗಳು ದೇವತೆಗಳಲ್ಲದಿರಬಹುದು. ಆದರೆ, ರಾಕ್ಷಸರಲ್ಲ. ತಾವು ಅವುಗಳೊಂದಿಗೆ ಕೆಲಸ ಮಾಡಿ ಪರಿಹಾರವೊಂದನ್ನು(ಹೆಚ್ಚು ದರಕ್ಕೆ) ಹುಡುಕುವ ಅಗತ್ಯವಿದೆ. ಈ ಸಮಸ್ಯೆಗಳು ಸರಳ ಪರಿಹಾರಕ್ಕೆ ಬಗ್ಗುವುದಿಲ್ಲವೆಂದು ಅವರು ಹೇಳಿದ್ದಾರೆ.
ಈ ತಿಂಗಳಾರಂಭದಲ್ಲಿ ಏಕಪಕ್ಷೀಯ ವಿಮಾನ ದರ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ್ದ ಸಚಿವರು, ದರಗಳಿಗೆ ಮೇಲ್ಮಿತಿ ವಿಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ವಿಮಾನ ಸಂಸ್ಥೆಗಳ ನಡುವಣ ಸ್ಪರ್ಧೆಯು ಸಮಸ್ಯೆಗೆ ಪರಿಹಾರ ನೀಡಬಹುದೆಂದು ಅವರು ಅಭಿಪ್ರಾಯಿಸಿದ್ದರು.





