ಟರ್ಕಿಯಲ್ಲೂ ಮತಗಣನೆ: ಅಧ್ಯಕ್ಷ ಇಂಗಿತ
ಇಸ್ತಾಂಬುಲ್, ಜೂ. 23: ಬ್ರಿಟನ್‌ನಲ್ಲಿ ನಡೆದ ಜನಮತಗಣನೆಯ ಮಾದರಿಯಲ್ಲೇ, ಐರೋಪ್ಯ ಒಕ್ಕೂಟಕ್ಕೆ ಸೇರಬೇಕೇ ಬೇಡವೇ ಎಂಬ ಬಗ್ಗೆ ಟರ್ಕಿ ಕೂಡ ಜನಮತಗಣನೆ ನಡೆಸಬಹುದಾಗಿದೆ ಎಂಬ ಇಂಗಿತವನ್ನು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ವ್ಯಕ್ತಪಡಿಸಿದ್ದಾರೆ.
ಒಕ್ಕೂಟಕ್ಕೆ ಟರ್ಕಿಯು ಸೇರುವ ಪ್ರಕ್ರಿಯೆಯನ್ನು ಸುದೀರ್ಘ ಅವಧಿಯಿಂದ ಅಮಾನತಿನಲ್ಲಿಡಲಾಗಿ ರುವುದನ್ನು ಸ್ಮರಿಸಬಹುದಾಗಿದೆ.
ಒಕ್ಕೂಟವು ಅಂಕಾರವನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅವರು ಕೆಂಡಕಾರಿದರು. ಒಕ್ಕೂಟದ ಸದಸ್ಯತ್ವ ನೀಡುವ ಬಗ್ಗೆ 1963ರಲ್ಲೇ ಟರ್ಕಿಗೆ ಭರವಸೆ ನೀಡಲಾಗಿತ್ತು. ಆದರೆ, 53 ವರ್ಷಗಳ ಬಳಿಕವೂ ಏನೂ ಆಗಿಲ್ಲ ಎಂದರು.
ಟರ್ಕಿಯು ಮುಸ್ಲಿಂ ಬಾಹುಳ್ಯದ ದೇಶವಾಗಿರುವುದರಿಂದ ಅದನ್ನು ಸೇರಿಸಿಕೊಳ್ಳಲು ಐರೋಪ್ಯ ಒಕ್ಕೂಟ ಮುಂದಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
Next Story





