ಉತ್ತರ ಕೊರಿಯ: ಯಶಸ್ವಿ ಕ್ಷಿಪಣಿ ಪರೀಕ್ಷೆ ಅಮೆರಿಕಕ್ಕೆ ಬೆದರಿಕೆ
ಸಿಯೋಲ್, ಜೂ. 23: ಹೊಸ ಶಕ್ತಿಶಾಲಿ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಯು ಪೆಸಿಫಿಕ್ ಸಾಗರದಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ನೇರ ಬೆದರಿಕೆಯಾಗಿದೆ ಎಂದು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಬುಧವಾರ ನಡೆದ ಕ್ಷಿಪಣಿ ಹಾರಾಟದ ಉಸ್ತುವಾರಿಯನ್ನು ಸ್ವತಃ ಕಿಮ್ ವಹಿಸಿದ್ದರು. ಇದು ಉತ್ತರ ಕೊರಿಯದ ಮುನ್ನೆಚ್ಚರಿಕಾ ಪರಮಾಣು ದಾಳಿ ಸಾಮರ್ಥ್ಯವನ್ನು ಅಗಾಧ ಪ್ರಮಾಣದಲ್ಲಿ ವೃದ್ಧಿಸಿದೆ ಎಂದು ಕಿಮ್ ಹೇಳಿರುವುದಾಗಿ ಅಧಿಕೃತ ಸುದ್ದಿಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
Next Story





