ಕರ್ತವ್ಯಲೋಪ: ಶಾಂತಿಪಾಲಕರನ್ನು ಹಿಂದಕ್ಕೆ ಕಳುಹಿಸಲು ವಿಶ್ವಸಂಸ್ಥೆ ಮುಂದು
ವಿಶ್ವಸಂಸ್ಥೆ, ಜೂ. 23: ಸೌತ್ ಸುಡಾನ್‌ನಲ್ಲಿನ ಶಾಂತಿ ಪಾಲಕರ ಶಿಬಿರವೊಂದರ ಮೇಲೆ ಫೆಬ್ರವರಿಯಲ್ಲಿ ನಡೆದ ಭೀಕರ ದಾಳಿಯ ವೇಳೆ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ, ಶಾಂತಿ ಪಾಲಕರನ್ನು ಮನೆಗೆ ಕಳುಹಿಸಲು ವಿಶ್ವಸಂಸ್ಥೆ ಸಿದ್ಧತೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಫೆಬ್ರವರಿ 17 ಮತ್ತು 18ರಂದು ಈಶಾನ್ಯದ ಪಟ್ಟಣ ಮಲಕಾಲ್‌ನಲ್ಲಿರುವ ಶಿಬಿರಕ್ಕೆ ಸೇನಾ ಸಮವಸ್ತ್ರದಲ್ಲಿದ್ದ ಬಂದೂಕುಧಾರಿಗಳು ದಾಳಿ ನಡೆಸಿದಾಗ ಶಾಂತಿಪಾಲಕರ ಪ್ರತಿಕ್ರಿಯೆ ‘‘ನೀರಸವಾಗಿತ್ತು’’ ಎನ್ನುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ವಿಶ್ವಸಂಸ್ಥೆಯ ಶಾಂತಿಪಾಲನಾ ಮುಖ್ಯಸ್ಥ ಹರ್ವ್ ಲ್ಯಾಡ್‌ಸೌಸ್ ಹೇಳಿದರು.
ನಾಗರಿಕರ ಮೇಲೆ ಗುಂಡು ಹಾರಿಸುತ್ತಾ ಡೇರೆಗಳಿಗೆ ಬೆಂಕಿಕೊಡುತ್ತಾ ಬಂದೂಕುಧಾರಿಗಳು ಮುನ್ನುಗ್ಗಿದ್ದರು.
ಈ ಶಿಬಿರದಲ್ಲಿ ಸುಮಾರು 48,000 ಮಂದಿ ಆಶ್ರಯ ಪಡೆದಿದ್ದರು. ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟು 123 ಮಂದಿ ಗಾಯಗೊಂಡಿದ್ದರು.
Next Story





