ಬೋಡೊ ಬಂಡುಕೋರರೊಂದಿಗಿನ ಶಾಂತಿ ಒಪ್ಪಂದ 6 ತಿಂಗಳು ವಿಸ್ತರಣೆ
ಹೊಸದಿಲ್ಲಿ,ಜೂ.23: ಅಸ್ಸಾಮಿನ ಬೋಡೊ ಬಂಡುಕೋರ ಗುಂಪು ಎನ್‌ಡಿಎಫ್‌ಬಿ(ಪಿ) ಜೊತೆ ತಾನು ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ಸರಕಾರವು ಗುರುವಾರ ಈ ವರ್ಷದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಕೇಂದ್ರ, ಅಸ್ಸಾಂ ಸರಕಾರ ಮತ್ತು ಎನ್‌ಡಿಎಫ್‌ಬಿ(ಪಿ) ಪ್ರತಿನಿಧಿಗಳನ್ನೊಳಗೊಂಡಿರುವ ಜಂಟಿ ನಿಗಾ ಗುಂಪಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಎನ್‌ಡಿಎಫ್‌ಬಿ(ಪಿ) ತನ್ನ ಬೇಡಿಕೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕೆಲವು ವರ್ಷಗಳ ಹಿಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸರಕಾರದೊಡನೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆಯಾದರೂ, ಗುಂಪಿನ ಇನ್ನೊಂದು ಬಣ ಎನ್‌ಡಿಎಫ್‌ಬಿ(ಎಸ್) ತನ್ನ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸಿದೆ.
Next Story





