ಗಗನಯಾತ್ರಿ ಅತ್ಯಂತ ಹೆಚ್ಚು ಮಿಸ್ ಮಾಡಿಕೊಳ್ಳೋದು ಏನನ್ನು?
ಬಾಹ್ಯಾಕಾಶದಿಂದ ಮರಳಿದ ಟಿಮ್ ಪೀಕ್ ಉತ್ತರ ಕೇಳಿದರೆ ನೀವು ನಕ್ಕು ಬಿಡುವುದು ಖಚಿತ

...............................................................................................................................
..................................................
ಸಾಮಾನ್ಯ ಶೌಚಾಲಯವನ್ನು ಬಳಸುವುದು ಮತ್ತು ವಾತಾವರಣವನ್ನು ಮೆಚ್ಚಿಕೊಳ್ಳುವುದು ಟಿಮ್ ಪೀಕ್ ಅವರ ಸಣ್ಣಪುಟ್ಟ ಸಂತೋಷಗಳು. ಅಂತಾರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಿಂದ ವಾಪಾಸಾಗುತ್ತಾ ಅವರು ಇದನ್ನೆಲ್ಲ ಅನುಭವಿಸಿ ಖುಷಿಪಟ್ಟರು.
ಬ್ರಿಟನ್ ನಿವಾಸಿ ಟಿಮ್ ಪೀಕ್ ಕೆಲವೊಂದು ಅಮೂಲ್ಯ ಭೂಮಿಯ ಅನುಭವಗಳನ್ನು ಬಾಹ್ಯಾಕಾಶದಲ್ಲಿ ಹಗುರವಾಗಿ ತೇಲಾಡುತ್ತಾ ಮರೆತೇ ಹೋಗಿದ್ದರು. ಗುರುತ್ವಾಕರ್ಷಣೆಯ ಸೆಳೆತವನ್ನು ಮರಳಿ ಹೊಂದಿಸಿಕೊಳ್ಳಲು ಅವರಿಗೆ ಬಹಳ ಕಷ್ಟವೇ ಆಗಿತ್ತು.
ಆದರೆ ಭೂಮಿಗೆ ಬಂದುದಕ್ಕೆ ಅವರಿಗೆ ಕೆಲವು ಲಾಭಗಳೂ ಆಗಿವೆ. ಭೂಮಿಗೆ ಬಂದ ಕೂಡಲೇ ಗುರುತ್ವವನ್ನು ಎದುರಿಸುವುದು ಕಷ್ಟವಾಗುತ್ತದೆ. ಆದರೆ ಕೆಲವು ಪ್ರಕರಣಗಳು ಇದಕ್ಕೆ ಹೊರತಾಗಿರುತ್ತದೆ. ಮುಖ್ಯವಾಗಿ ಶೌಚವನ್ನು ಬಳಸುವಾಗ ಗುರುತ್ವ ನಮ್ಮ ಸ್ನೇಹಿತ. ಭೂಮಿಗೆ ಬರುವುದೆಂದರೆ ಇದನ್ನೇ ನಾವು ಯೋಚಿಸುತ್ತಿರುತ್ತೇವೆ ಎಂದು ಇತ್ತೀಚೆಗೆ ವಾಪಾಸಾದ ಅಂತಾರರಾಷ್ಟ್ರೀಯ ಬಾಹ್ಯಾಕಾಶ ತಿರುಗಾಡಿಯಾಗಿರುವ ಟಿಮ್ ಹೇಳಿದ್ದಾರೆ.
ಐಎಸ್‌ಎಸ್ ನೌಕೆಯಲ್ಲಿ ಪೀಕ್ ಆರು ತಿಂಗಳು ಕಳೆದಿದ್ದಾರೆ. ದೇಹದಿಂದ ತ್ಯಾಜ್ಯ ಹೊರ ಹಾಕಲು ಸಕ್ಷನ್ ಹೋಸ್ ಬಳಕೆಯಾಗದೆ ಇರುವುದು ಅವರಿಗೆ ಖುಷಿಯಾಗಿದೆ. ಅಲ್ಲದೆ ತಾಜಾ ಗಾಳಿ, ಮಳೆ ಮತ್ತು ಮಣ್ಣಿನ ವಾಸನೆಯನ್ನು ಅವರು ಆಸ್ವಾದಿಸಿದ್ದಾರೆ. ಇದು ನಿಜಕ್ಕೂ ಅದ್ಭುತ ಮತ್ತು ಪರಿಚಿತ. ನಾನು ಬಾಹ್ಯಾಕಾಶದಲ್ಲಿರುವಾಗ ಇದೆಲ್ಲವನ್ನೂ ಕಳೆದುಕೊಂಡಿರುವೆ. ಮಳೆಯ ಅನುಭವ ಅಲ್ಲಿ ಸಿಗುವುದೇ ಇಲ್ಲ. ಹಾಗೆ ನೋಡಿದರೆ ಹವಾಮಾನದ ಅನುಭವವೇ ಅಲ್ಲಿರುವುದಿಲ್ಲ. ಅದೇನಿದ್ದರೂ ಭೂಮಿಯ ವಿಶೇಷತೆ ಎಂದು ಜರ್ಮನ್ ನಗರದ ಕೊಲಜನ್‌ನ ಯುರೋಪಿಯನ್ ಆಸ್ಟ್ರಾನಾಟ್ ಸೆಂಟರ್‌ನ ಬಾಹ್ಯಾಕಾಶ ಪಯಣಿಗ ಪೀಕ್ ಹೇಳಿದ್ದಾರೆ.
44 ವರ್ಷದ ಪೀಕ್ ಐಎಸ್‌ಎಸ್‌ನಲ್ಲಿ ಪ್ರಯಾಣಿಸಿದ ಮೊದಲ ಬ್ರಿಟಿಷ್ ಬಾಹ್ಯಾಕಾಶ ತಜ್ಞ. ರಷ್ಯಾದ ಯೂರಿ ಮಲೆನಷೆಕೊ ಮತ್ತು ನಾಸಾದ ಟಿಮ್ ಕೋಪ್ರಾ ಜೊತೆಗೆ ಅವರು ಬಾಹ್ಯಾಕಾಶ ಪ್ರಯಾಣ ಮಾಡಿದ್ದರು. ಸದ್ಯದ ಮಟ್ಟಿಗೆ ಕುಟುಂಬದ ಜೊತೆಗೆ ಕಾಲ ಕಳೆಯಲು ಬಯಸಿರುವುದಾಗಿ ಅವರು ಹೇಳಿದ್ದಾರೆ.










