Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕ್ರಿಕೆಟ್‌ನ ಹಿರಿಮೆ ಹೆಚ್ಚಿಸಿದ ಕನ್ನಡಿಗ...

ಕ್ರಿಕೆಟ್‌ನ ಹಿರಿಮೆ ಹೆಚ್ಚಿಸಿದ ಕನ್ನಡಿಗ ಕುಂಬ್ಳೆ

ಮರೆಯಲಾಗದ ಆ ಐದು ಕ್ಷಣಗಳು

ವಾರ್ತಾಭಾರತಿವಾರ್ತಾಭಾರತಿ24 Jun 2016 8:36 AM IST
share
ಕ್ರಿಕೆಟ್‌ನ ಹಿರಿಮೆ ಹೆಚ್ಚಿಸಿದ ಕನ್ನಡಿಗ ಕುಂಬ್ಳೆ

ಹೊಸದಿಲ್ಲಿ, ಜೂ.24: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶದ ಅತ್ಯಂತ ಯಶಸ್ವಿ ಬೌಲರ್ ಅನಿಲ್ ಕುಂಬ್ಳೆ ಅವರನ್ನು ಮುಂದಿನ ತಿಂಗಳು ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳುವ ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ನೇಮಕ ಮಾಡಿದೆ. ಟೆಸ್ಟ್‌ನಲ್ಲಿ 619 ಹಾಗೂ ಏಕದಿನ ಪಂದ್ಯದಲ್ಲಿ 337 ವಿಕೆಟ್‌ಗಳನ್ನು ಪಡೆದಿರುವ ಕುಂಬ್ಳೆ ಕ್ರಿಕೆಟ್ ಜೀವನದ ಐದು ಮಹತ್ವದ ಕ್ಷಣಗಳು ಇಲ್ಲಿವೆ ನೋಡಿ.

10ಕ್ಕೆ 10:

1999ರ ಫೆಬ್ರವರಿ 7ರಂದು ದಿಲ್ಲಿಯ ಫಿರೋಜ್‌ಷಾ ಕೋಟ್ಲಾ ಕ್ರೀಡಾಂಗಣದಲ್ಲಿ, ಇನಿಂಗ್ಸ್‌ನ ಹತ್ತೂ ವಿಕೆಟ್‌ಗಳನ್ನೂ ಕಿತ್ತು, ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಪಾಕಿಸ್ತಾನ ವಿರುದ್ಧದ 2 ಟೆಸ್ಟ್‌ಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ, ಪಾಕಿಸ್ತಾನ ಗೆಲ್ಲಲು 420 ರನ್ ಬೇಕಿತ್ತು. ಅಂತಿಮ ದಿನ ಡ್ರಾ ಮಾಡಿಕೊಳ್ಳಲು ಪಾಕ್ ಹೆಣಗುತ್ತಿತ್ತು. ಆಗ ಜೀವನಶ್ರೇಷ್ಠ ಸಾಧನೆ ತೋರಿದ ಸ್ಪಿನ್ ಮಾಂತ್ರಿಕ 74 ರನ್‌ಗಳಿಗೆ 10 ವಿಕೆಟ್ ಕಿತ್ತು, 19 ವರ್ಷದಲ್ಲಿ ಭಾರತಕ್ಕೆ ಪಾಕ್ ವಿರುದ್ಧ ಮೊದಲ ಜಯ ತಂದುಕೊಟ್ಟರು.

ಗಾಯಾಳುವಾಗಿ

ಇದು ಮೈ ಝುಮ್ಮೆನಿಸುವ ಕ್ರೀಡಾಸ್ಫೂರ್ತಿ. 2002ರ ಮೇ ತಿಂಗಳಲ್ಲಿ ವೆಸ್ಟ್‌ಇಂಡೀಸ್‌ನ ಸೆಂಟ್ ಜಾನ್ಸ್‌ನಲ್ಲಿ ನಾಲ್ಕನೇ ಟೆಸ್ಟ್‌ನ ಮೂರನೇ ದಿನದ ಆಟ. ಬ್ಯಾಟಿಂಗ್ ವೇಳೆ ಆಗಿದ್ದ ಗಾಯದ ಕಾರಣದಿಂದ ದವಡೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕುಂಬ್ಳೆ ಫೀಲ್ಡಿಂಗ್ ಮಾಡಿದರು. 14 ಓವರ್‌ಗಳ ಬೌಲಿಂಗ್ ಮಾಡಿದ ಕುಂಬ್ಳೆ ಬ್ರಿಯಾನ್ ಲಾರಾ ಅವರ ಅಮೂಲ್ಯ ವಿಕೆಟ್ ಪಡೆದರು.

ಕುಂಬ್ಳೆ ಸಿಕ್ಸರ್

ಕುಂಬ್ಳೆಯವರ ಮತ್ತೊಂದು ಐತಿಹಾಸಿಕ ಸಾಧನೆ 1993ರ ನವೆಂಬರ್ 27ರಂದು. ವೆಸ್ಟ್‌ಇಂಡೀಸ್ ವಿರುದ್ಧದ ಹೀರೊಕಪ್ ಫೈನಲ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ 12 ರನ್ನಿಗೆ 6 ವಿಕೆಟ್ ಕಿತ್ತರು. ಈ ದಾಖಲೆ 2014ರ ವರೆಗೂ ಅವರ ಹೆಸರಿನಲ್ಲಿತ್ತು. 2014ರಲ್ಲಿ ಸ್ಟುವರ್ಟ್ ಬಿನ್ನಿ 4 ರನ್ನಿಗೆ ಬಾಂಗ್ಲಾದ 6 ವಿಕೆಟ್ ಕಿತ್ತು ಈ ದಾಖಲೆ ಮುರಿದರು. ಈ ಪಂದ್ಯದಲ್ಲಿ ಅಜರುದ್ದೀನ್ ನೇತೃತ್ವದ ಭಾರತ ತಂಡ 102 ರನ್ನುಗಳ ಭರ್ಜರಿ ಜಯ ಸಾಧಿಸಿತು.

ಮೊದಲ ಹಾಗೂ ಕೊನೆ ಶತಕ

ಕುಂಬ್ಳೆ ಟೆಸ್ಟ್ ಜೀವನದ ಏಕೈಕ ಶತಕ ಬಂದದ್ದು, 2007ರಲ್ಲಿ ಓವೆಲ್‌ನಲ್ಲಿ. ಇಂಗ್ಲೆಂಡ್ ವಿರುದ್ಧ 1-0 ಮುನ್ನಡೆಯಲ್ಲಿದ್ದ ಭಾರತ ಕೊನೆಯ ಟೆಸ್ಟ್‌ನಲ್ಲಿ, ಕೊನೆಯವರಾಗಿ ಬಂದಿದ್ದ ಶ್ರೀಶಾಂತ್ ಜೊತೆ ಈ ಸಾಧನೆ ಮಾಡಿದರು. ಶ್ರೀಶಾಂತ್ ಕ್ರೀಸ್‌ಗೆ ಬಂದಾಗ ಕುಂಬ್ಳೆ 97ರಲ್ಲಿದ್ದರು. ಕೆವಿನ್ ಪೀಟರ್‌ಸನ್ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿ ಈ ಸಾಧನೆ ಮಾಡಿದರು.

ಗೆಲುವಿನತ್ತ ಮುನ್ನಡೆಸಿದರು

2002ರಲ್ಲಿ ಇಂಗ್ಲೆಂಡಿನ ಹೆಡಿಂಗ್ಲೆಯಲ್ಲಿ, ಸರಣಿ ಸಮಬಲ ಮಾಡಿಕೊಳ್ಳಲು ಭಾರತಕ್ಕೆ ಇನಿಂಗ್ಸ್ ಗೆಲುವು ತಂದುಕೊಟ್ಟ ಕುಂಬ್ಳೆಗೆ ಸ್ಮರಣೀಯ ಪಂದ್ಯ. ಈ ಪಂದ್ಯದಲ್ಲಿ ರಾಬ್ ಕೀ, ನಾಸಿರ್ ಹುಸೇನ್, ಅಲೆಕ್ ಸ್ಟುವರ್ಟ್ ಸೇರಿದಂತೆ ನಾಲ್ವರನ್ನು ಬಲಿಪಡೆದು ಅತಿಥೇಯರಿಗೆ ಫಾಲೋ ಆನ್ ಹೇರಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X