ಜರ್ಮನಿ ಥಿಯೇಟರ್‌ನಲ್ಲಿ ಗುಂಡಿನ ದಾಳಿ ನಡೆಸಿದ 'ವಿಚಲಿತ ಮನುಷ್ಯ' ಪೊಲೀಸ್ ಗುಂಡಿಗೆ ಬಲಿ

ವೇರ್ನ್‌ಹ್ಯಾಮ್ (ಜರ್ಮನಿ): ಮುಸುಕುಧಾರಿ ವ್ಯಕ್ತಿಯೊಬ್ಬ ಪಶ್ಚಿಮ ಜರ್ಮನಿಯ ಸಿನೆಮಾ ಮಂದಿರದ ಮೇಲೆ ದಾಳಿ ಮಾಡಲು ಆರಂಭಿಸಿದ ತಕ್ಷಣ ಪೊಲೀಸರು ಪ್ರತಿದಾಳಿ ನಡೆಸಿ ಆತನನ್ನು ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ಉದ್ದವಾದ ಬಂದೂಕು ಹೊಂದಿದ್ದ ಈತ ಬಹುಶಃ 'ವಿಚಲಿತ ಮನುಷ್ಯ'(disturbed man)ನಾಗಿರಬೇಕು. ಈತನ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಆಂತರಿಕ ವ್ಯವಹಾರಗಳ ಖಾತೆ ಸಚಿವ ಪೀಟರ್ ಬೆಹೂತ್ ಹೇಳಿದ್ದಾರೆ. ಪೊಲೀಸರಿಗೆ ಆತನ ಉದ್ದೇಶ ಅಥವಾ ಗುರುತು ಪತ್ತೆಯಾಗಿಲ್ಲ. ಆತ ಉಗ್ರಗಾಮಿ ಹಿನ್ನೆಲೆಯವನೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ವಿವರಿಸಿದ್ದಾರೆ.
ದಕ್ಷಿಣ ಪ್ರಾಂಕ್‌ಪರ್ಟ್‌ನ ಸಿನೆಮಾ ಮಂದಿರದ ಮೇಲೆ ದಾಳಿ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಪೊಲೀಸರು ಅಲ್ಲಿಗೆ ಧಾವಿಸಿದ ದೃಶ್ಯವನ್ನು ಜರ್ಮನಿಯ ಟೆಲಿವಿಷನ್ ಪ್ರಸಾರ ಮಾಡಿದೆ. ಸುಮಾರು 18-25 ವರ್ಷ ವಯಸ್ಸಿನ ಈ ದಾಳಿಕೋರ ಅಪರಾಹ್ನ 3ರ ವೇಳೆ ಈ ದಾಳಿ ನಡೆಸಿದ.
Next Story





