ಜೂ.26:ಕಾಂಗ್ರೆಸ್ನಿಂದ ಅಶೋಕನಗರದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ
![ಜೂ.26:ಕಾಂಗ್ರೆಸ್ನಿಂದ ಅಶೋಕನಗರದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಜೂ.26:ಕಾಂಗ್ರೆಸ್ನಿಂದ ಅಶೋಕನಗರದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ](https://www.varthabharati.in/sites/default/files/images/articles/2016/06/24/images.jpg)
ಮಂಗಳೂರು, ಜೂ.24: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 25 ನೆ ದೇರೆಬೈಲು ಪಶ್ಚಿಮ ವಾರ್ಡ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಜೂ.26 ರಂದು ಬೆಳಗ್ಗೆ 9 ಗಂಟೆಗೆ ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯಕೀಯ ಶಿಬಿರ ನಡೆಯಲಿದೆ. ಶಿಬಿರವನ್ನು ಶಾಸಕ ಜೆ.ಆರ್. ಲೋಬೊ ಉದ್ಘಾಟಿಸಲಿದ್ದಾರೆ.
ಕೆಎಂಸಿ ಹಾಗೂ ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯಲಿರುವ ಈ ವೈದ್ಯಕೀಯ ಶಿಬಿರದಲ್ಲಿ ಉಚಿತ ದಂತ ಚಿಕಿತ್ಸೆ , ಕಣ್ಣಿನ ಚಿಕಿತ್ಸೆ, ಮಲೇರಿಯಾ ತಪಾಸಣಾ ಹಾಗೂ ಮಹಿಳೆಯರಿಗೆ ಥೈರಾಯಿಡ್ ಕಾಯಿಲೆಯ ತಪಾಸಣೆಯನ್ನು ಮಾಡಲಾಗುವುದು. ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಉಚಿತವಾಗಿ ಕನ್ನಡಕಗಳನ್ನು ನೀಡಲಾಗುವುದೆಂದು ಪ್ರಕಟನೆ ತಿಳಿಸಿದೆ.
Next Story