ಎನ್ ಎಸ್‌ಜಿ ಸೇರ್ಪಡೆಗೆ ಭಾರತಕ್ಕೆ ಚೀನಾ ವಿರೋಧ

ಹೊಸದಿಲ್ಲಿ, ಜೂ.24: ಪರಮಾಣು ಪೂರೈಕೆ ಗ್ರೂಪ್ (ಎನ್‌ಎಸ್ ಜಿ) ಸೇರ್ಪಡೆಗೆ ಭಾರತಕ್ಕೆ ನೆರೆಯ ಚೀನಾ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗಿ ಸಭೆ ವಿಫಲವಾಗಿದೆ.
ಸಿಯೋಲ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾರತಕ್ಕೆ ಎನ್‌ಎಸ್ ಜಿ ಸೇರ್ಪಡೆಗೆ ಚೀನಾ ಬಹಿರಂಗವಾಗಿ ಅಡ್ಡಗಾಲು ಹಾಕಿದೆ.
ಒಕ್ಕೂಟದ ಒಟ್ಟು 48 ರಾಷ್ಟ್ರಗಳ ಪೈಕಿ 38 ರಾಷ್ಟ್ರಗಳು ಭಾರತದ ಪರ ಮತ ಚಲಾಯಿಸಿದೆ. ಆದರೆ 10 ರಾಷ್ಟ್ರಗಳಿಂದ ವಿರೋಧ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
Next Story





