ಇನ್ನು ನೂರು ವರ್ಷಗಳಲ್ಲಿ ಮನುಷ್ಯನನ್ನು ಕೊಂದು ಮಜಾ ಅನುಭವಿಸುವುದು ದೊಡ್ಡ ಮನರಂಜನೆಯಾಗಲಿದೆಯಂತೆ!

ಲಂಕಾಶೈರ್, ಜೂನ್ 24:ಬೋರ್ ಆಗುವುದರಿಂದ ಪಾರಾಗಲು ಮನುಷ್ಯ ಏನು ಮಾಡಲಿಕ್ಕೂ ಸಿದ್ಧ. ಈ ಪ್ರವೃತ್ತಿ ಮುಂದಿನ ನೂರು ವರ್ಷಗಳೊಳಗೆ ಮನುಷ್ಯನನ್ನು ಕೊಂದು ಮಜಾ ಅನುಭವಿಸುವುದು ಬಹುದೊಡ್ಡ ಮನರಂಜನೆ ಮತ್ತು ಟೂರಿಸ್ಟ್ ಆಕರ್ಷಣೆಯಾಗಲಿದೆ ಎಂದು ಇತ್ತೀಚಿನ ಹೊಸ ವರದಿ ಎಚ್ಚರಿಕೆ ನೀಡಿದೆ. ಯುನಿವರ್ಸಿಟಿ ಆಫ್ ಲಂಕೇಶೈರ್ ಟೂರಿಸಂ ಪ್ರಾಧ್ಯಾಪಕ ಹಾಗೂ ಮುಂಚೂಣಿಯ ಟೂರಿಸಂ ತಜ್ಞ ಆದ ಡಾನಿಯೇಲ್ ರೈಟ್ ಭಯಹುಟ್ಟಿಸುವ ಈ ಹೇಳಿಕೆಗಳೊಂದಿಗೆ ರಂಗಪ್ರವೇಶಿಸಿದ್ದಾರೆ. ಇನ್ನು ನೂರು ವರ್ಷಗಳ ಜಗತ್ತು ಇರುವುದಾದರೆ ಇಷ್ಟದ ಮನರಂಜನೆಆಗಿ ನರಬೇಟೆ ಪರಿವರ್ತನೆಗೊಳ್ಳುವುದು ಎಂದು ಅವರು ಖಚಿತ ಧ್ವನಿಯಲ್ಲಿ ಹೇಳುತ್ತಾರೆ. ಈ ಕಾಲಾವಧಿಯಲ್ಲಿ ಸ್ಟ್ರಾಗ್ ಪಾರ್ಟಿಗಳು. ಟೀ ಬಿಲ್ಡಿಂಗ್ ಎಕ್ಸರ್‌ಸೈಸ್, ಪ್ರವಾಸಿ ಸ್ಥಳ ವೀಕ್ಷಣೆಗಾರರು ಮುಂತಾದವರ ಪ್ರಧಾನ ಆಕರ್ಷಣೆ ನರಭೇಟೆ ಆಗಿ ಬದಲಾಗುವುದು ಎಂದು ಇದಕ್ಕೆ ಸಂಬಂಧಿಸಿದ ವರದಿ ಸಮರ್ಥಿಸುತ್ತಿದೆ.
2200 ಇಸವಿಯಲ್ಲಿ ಇಂತಹ ನರಬೇಟೆಗಳು ಸಾರ್ವಜನಿಕ ಸ್ಥಳದಲ್ಲಿ ನಡೆಯಲಿದ್ದು ಟಿವಿಗಳು ನೇರ ಪ್ರಸಾರ ನಡೆಸಲಿವೆ. ಎಂದು ಡಾನಿಯಲ್ ರೈಟ್ ಹೇಳುತ್ತಾರೆ. ಜನಸಂಖ್ಯೆಯ ನಿಯಂತ್ರಣಾತೀತ ಹೆಚ್ಚಳ. ಬಡವರು, ಶ್ರೀಮಂತರ ನಡುವಿನ ಅಂತರ ಇಂತಹ ಕೃತ್ಯಗಳಿಗೆ ಸಾಧ್ಯತೆಗಳನ್ನು ಸೃಷ್ಟಿಸಲಿದೆ ಎಂದು ಇದಕ್ಕೆ ಸಂಬಂಧಿಸಿದ ವರದಿಗಳು ತಿಳಿಸುತ್ತಿವೆ. ಸಾರ್ವಜನಿಕರ ನಡುವಿನ ಫಾಸಿ ಶಿಕ್ಷೆಗಳು ಈಗಲೇ ಜನಾಕರ್ಷಣೆ ಪಡೆದುಕೊಂಡಿದೆ. ಇದಕ್ಕಿಂತಲೂ ಪೈಶಾಚಿಕ ನರಭೇಟೆ ನಡೆಯಲಿದೆ ಎಂದು ಡಾನಿಯಲ್ ಹೇಳುತ್ತಾರೆ.
ಯುದ್ಧಗಳ ಕೊಲೆಪಾತಕ, ಕಾನ್ಸಂಟ್ರೇಷನ್ ಕ್ಯಾಂಪ್‌ಗಳ ನರಮೇಧಗಳ ದೃಶ್ಯಗಳಿಗೆ ಇದು ಪ್ರೇಕ್ಷಕರು ಹೆಚ್ಚಿದ್ದಾರೆ. ಅವುಗಳನ್ನು ಇಂದು ಮ್ಯೂಸಿಯಂಗಳಲ್ಲಿಯೂ ಪ್ರದರ್ಶಿಸಲಾಗುತ್ತಿದೆ. 2100ರಲ್ಲಿ ನರಭೇಟೆ ಅಂಡರ್‌ಗ್ರೌಂಡ್ ಸ್ಪೋರ್ಟ್ಸ್ ಜನಪ್ರಿಯತೆಗಳಿಸಲಿದೆ ಎಂದು ಅವರು ಹೇಳಿದ್ದಾರೆ.







