ಬ್ರಿಟನ್‌ನಲ್ಲಿರುವ ಹೈದರಾಬಾದ್ ನಿಝಾಮರ 35 ಮಿಲಿಯನ್ ಪೌಂಡ್ ಭಾರತದ್ದೋ ಪಾಕಿಸ್ತಾನದ್ದೋ?

ಲಂಡನ್,ಜೂನ್ 24: ಬ್ರಿಟನ್‌ನಲ್ಲಿರುವ ಕೋಹಿನೂರ್ ವಜ್ರಕ್ಕಾಗಿ ಭಾರತ ಪಾಕಿಸ್ತಾನಗಳೆರಡೂ ಹಕ್ಕುವಾದವನ್ನು ಎತ್ತುತ್ತವೆ. ಇದರಂತೆ ಲಂಡನ್‌ನ ನಾಟ್‌ವೆಸ್ಟ್ ಬ್ಯಾಂಕ್‌ನಲ್ಲಿ 68ವರ್ಷಗಳ ಹಳೆಯ ಠೇವಣಿಯೊಂದರ ಕುರಿತು ಎರಡು ದೇಶಗಳು ವಾದವನ್ನು ಮಂಡಿಸುತ್ತಿವೆ. ಅರುವತ್ತೆಂಟು ವರ್ಷ ಮೊದಲು ಹೈದರಾಬಾದ್‌ನ ಏಳನೆ ನಿಝಾಮ ಒಂದು ಮಿಲಿಯನ್ ಪೌಂಡ್(9.80 ಕೋಟಿ ರೂ.)ನ್ನು ಅಂದಿನ ಪ್ರಸಿದ್ಧ ಬ್ಯಾಂಕ್‌ಆದ ನಾಟ್‌ವೆಸ್ಟ್‌ನಲ್ಲಿ ಠೇವಣಿ ಇರಿಸಿದ್ದ. ಈಗ ಮೊಬಲಗು ಸೇರಿ 35 ಮಿಲಿಯನ್ ಪೌಂಡ್‌ಆಗಿದೆ.(347.5ಕೋಟಿ ರೂ.) ಹೀಗಾಗಿ ಇದರ ಹಕ್ಕು ಮಂಡಿಸುವಲ್ಲಿ ಎರಡು ರಾಷ್ಟ್ರಗಳಲ್ಲಿಯೂ ಸ್ಪರ್ಧೆ ಇದೆ.
ಸ್ವಾತಂತ್ರ್ಯಾನಂತರ ಅಂದಿನ ಊರ ರಾಜ್ಯಗಳು ಭಾರತದೊಂದಿಗೆ ಅಥವಾ ಪಾಕಿಸ್ತಾನದೊಂದಿಗೆ ಸೇರಲು ಇಚ್ಛಿಸಿದಾಗ ಮೊದಲು ಸ್ವತಂತ್ರವಾಗಿರಲು ನಂತರ ಪಾಕಿಸ್ತಾನದೊಂದಿಗೆ ಸೇರಲು ನಿಝಾಮ ಇಚ್ಛಿಸಿದ್ದರು. 1948ರಲ್ಲಿ ಸೇನಾಶಕ್ತಿಯನ್ನು ಬಳಸಿ ಹೈದರಾಬಾದ್‌ನ್ನು ಭಾರತದಲ್ಲಿ ವಿಲೀನಗೊಳಿಸಿತ್ತು. ಇದಕ್ಕಿಂತ ಮೊದಲು ಅವರ ಹಣಕಾಸು ಸಚಿವರು ವೆಸ್ಟ್‌ಬ್ಯಾಂಕ್‌ನಲ್ಲಿ ಒಂದುಮಿಲಿಯನ್ ಪೌಂಡ್ ಠೇವಣಿ ಇರಿಸಿದ್ದರು. ಅಂದಿನ ಲಂಡನ್ ಪಾಕಿಸ್ತಾನದ ಹೈಕಮಿಶನರ್‌ರ ಖಾತೆಯಲ್ಲಿ ಇದನ್ನು ಠೇವಣಿ ಇರಿಸಲಾಗಿತ್ತು. ತನ್ನ ಅನುಮತಿಯಿಲ್ಲದೆ ಹಣಕಾಸು ಸಚಿವರ ಈ ಟ್ರಾನ್ಸಫರ್ ನಡೆಸಿದ್ದರು ಆದ್ದರಿಂದ ಹಣವನ್ನು ಮರಳಿ ನೀಡಬೇಕೆಂದು ನಿಝಾಮ ನಿರಂತರ ಪ್ರಯತ್ನಿಸಿದರೂ ಹಣ ಪಡೆಯಲು ಸಾಧ್ಯವಾಗಿರಲಿಲ್ಲ. ಹಣದ ಕಾನೂನು ಬದ್ಧ ಒಡೆತನ ಯಾರಿಗೆ ಸೇರಿದ್ದುಎಂದು ಖಚಿತಗೊಳ್ಳದೆ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ತಿಳಿಸಿತ್ತು.
ಪಾಕಿಸ್ತಾನದ ಈ ಹಣದ ಹಕ್ಕನ್ನು ಮಂಡಿಸುವುದನ್ನು ತಡೆಯಬೇಕೆಂದು ಭಾರತದ ಅರ್ಜಿಯನ್ನುಇಂಗ್ಲಿಷ್ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಪಾಕಿಸ್ತಾನದ ಹಕ್ಕುವಾದವನ್ನು ತಪ್ಪೆಂದುಸಾಬೀತುಪಡಿಸಲು ಭಾರತ ವಿಫಲವಾಯಿತೆಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ತಿಳಿಸಿದೆ. ಇನ್ನೂ ವಿಚಾರ ಇದೆ ಎಂದು ಭಾರತ ಹೇಳುತ್ತಿದೆ. ಅಂತಿಮವಾಗಿ ಈ ಹಣ ಯಾರಪಾಲಾಗುವುದೆಂಬ ಕುತೂಹಲ ಹಾಗೆಯೇ ಉಳಿದಿದೆ.







