Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತೀಯ ಕ್ರಿಕೆಟ್ ತಂಡಕ್ಕಿನ್ನು ಕುಂಬ್ಳೆ...

ಭಾರತೀಯ ಕ್ರಿಕೆಟ್ ತಂಡಕ್ಕಿನ್ನು ಕುಂಬ್ಳೆ ‘ಗುರು’!

ಇಬ್ರಾಹಿಂ ಅಡ್ಕಸ್ಥಳಇಬ್ರಾಹಿಂ ಅಡ್ಕಸ್ಥಳ24 Jun 2016 11:11 PM IST
share
ಭಾರತೀಯ ಕ್ರಿಕೆಟ್ ತಂಡಕ್ಕಿನ್ನು ಕುಂಬ್ಳೆ ‘ಗುರು’!

ಟೀಮ್ ಇಂಡಿಯಾಕ್ಕೆ ಬಹಳ ತಡವಾಗಿ ಕೋಚ್ ನೇಮಕವಾಗಿದೆ. ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ ನೂತನ ಪ್ರಧಾನ ಕೋಚ್ ಆಗಿ ಟೀಮ್ ಇಂಡಿಯಾದಲ್ಲಿ ಎರಡನೆ ಇನಿಂಗ್ಸ್ ಆರಂಭಿಸಲಿದ್ದಾರೆ.

ಅನಿಲ್ ಕುಂಬ್ಳೆಗೆ ಪೈಪೋಟಿ ನೀಡಿದ್ದ ರವಿಶಾಸ್ತ್ರಿಗೆ ಕೋಚ್ ಹುದ್ದೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಒಂದು ರೀತಿ ಹಂಗಾಮಿ ಕೋಚ್ ಆಗಿದ್ದ ಶಾಸ್ತ್ರಿಗೆ ಕುಂಬ್ಳೆಯ ವಿರುದ್ಧ ಸೆಣಸಲು ಸಾಧ್ಯವಾಗಲಿಲ್ಲ. ಕುಂಬ್ಳೆಗಿಂತ ವಯಸ್ಸಿನಲ್ಲಿ ಹಿರಿಯರಾದ ರವಿಶಾಸ್ತ್ರಿ ಅವರು, ಭಾರತದ ಕ್ರಿಕೆಟ್‌ಗೆ ಕುಂಬ್ಳೆ ನೀಡಿರುವಷ್ಟು ಕೊಡುಗೆ ನೀಡಿಲ್ಲ. ಕುಂಬ್ಳೆ 132 ಟೆಸ್ಟ್ ಹಾಗೂ 271 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ್ನುಆಡಿದವರು. ಹಾಗೂ ಎಲ್ಲ ವಿಧಗಳ ಕ್ರಿಕೆಟ್‌ನಲ್ಲೂ ಆಡಿರುವ ಅನುಭವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸಿ ಎಂಟು ವರ್ಷಗಳ ಬಳಿಕ ಕುಂಬ್ಳೆ ಮತ್ತೆ ಟೀಮ್ ಇಂಡಿಯಾ ಡ್ರೆಸ್ ರೂಮ್ ಪ್ರವೇಶಿಸಲಿದ್ದಾರೆ.

26 ವರ್ಷಗಳ ಹಿಂದೆ ಕುಂಬ್ಳೆ ಆಟಗಾರನಾಗಿ ಟೀಮ್ ಇಂಡಿಯಾದ ಡ್ರೆಸ್ ರೂಮ್ ಪ್ರವೇಶಿಸಿದ್ದರು. 18 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರನಾಗಿ ಮಿಂಚಿದ್ದರು. ಗೂಗ್ಲಿ ಮೂಲಕ ವಿಶ್ವದ ಹಲವು ಮಂದಿ ದಾಂಡಿಗರನ್ನು ಕಾಡಿದ್ದರು. ಹಲವು ವಿಶ್ವ ದಾಖಲೆಗಳ ಸರದಾರ ಎನಿಸಿಕೊಂಡಿದ್ದ ಕುಂಬ್ಳೆ ಕ್ರಿಕೆಟ್‌ನಲ್ಲಿ ನಿಷ್ಠೆ ಹೊಂದಿದ್ದರು. ಈಗಿನ ಕ್ರಿಕೆಟ್ ಆಟಗಾರರಂತೆ ಕ್ರಿಕೆಟ್ ಮೂಲಕ ಹಣ ಗಳಿಸುವ ದಂಧೆಗೆ ಇಳಿಯಲಿಲ್ಲ. ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದ ಕುಂಬ್ಳೆ ಗಾಯಗೊಂಡಾಗ ತಂಡದಲ್ಲಿರುವ ತನ್ನ ಜವಾಬ್ದಾರಿಯನ್ನು ಕಳಚಿಕೊಂಡು ಪೆವಿಲಿಯನ್‌ಗೆ ಓಡಿದವರಲ್ಲ.
 2002ರಲ್ಲಿ ಅಂಟಿಗುವಾ ಟೆಸ್ಟ್‌ನಲ್ಲಿ ಕುಂಬ್ಳೆ ಬ್ಯಾಟಿಂಗ್ ನಡೆಸುವಾಗ ಅವರ ದವಡೆಗೆ ಪೆಟ್ಟಾಗಿತ್ತು. ಬಳಿಕ ಪೆವಿಲಿಯನ್‌ಗೆ ತೆರಳಿದ ಕುಂಬ್ಳೆ ಗಾಯಕ್ಕೆ ಬ್ಯಾಂಡೇಜ್ ಸುತ್ತಿ ಬೌಲಿಂಗ್ ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಬ್ರಿಯಾನ್ ಲಾರಾ ವಿಕೆಟ್ ಉಡಾಯಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಆ ಮೂಲಕ ತನ್ನ ಕ್ರೀಡಾ ಸ್ಪೂರ್ತಿಯನ್ನು ಎಲ್ಲರಿಗೂ ಪರಿಚಯಿಸಿದ್ದರು.
    ಕೋಚ್ ಹುದ್ದೆಗೆ ಕುಂಬ್ಳೆ ಒಂದು ವರ್ಷದ ಅವಧಿಗೆ ನೇಮಕಗೊಂಡಿದ್ದಾರೆ. ಆದರೆ ಈ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದ ಇತರ 56 ಮಂದಿಗೆ ಆಘಾತ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ರವಿಶಾಸ್ತ್ರಿಗೆ ಆಘಾತ ನೀಡಿದ್ದಾರೆ. ಶಾಸ್ತ್ರಿ ಅವರು ನಿರ್ದೇಶಕರಾಗಿ ತಂಡದಲ್ಲಿ ಖಾಲಿ ಇರುವ ಕೋಚ್ ಹುದ್ದೆಯನ್ನು ತುಂಬಿದ್ದರು. 2015ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಬೆನ್ನಲ್ಲೆ ಕೋಚ್ ಡಂಕನ್ ಫ್ಲೆಚರ್ ಅವರು ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು.

ಬಳಿಕ ತೆರವಾದ ಸ್ಥಾನಕ್ಕೆ ಹಲವು ಮಂದಿ ಕಣ್ಣಿಟ್ಟಿದ್ದರೂ,ಬಿಸಿಸಿಐ ಹೊಸ ಕೋಚ್ ನೇಮಕದ ಕಡೆಗೆ ಗಮನ ಹರಿಸಲಿಲ್ಲ. ವಿದೇಶಿ ಕೋಚ್‌ಗಳಿಗಿಂತ ಶ್ರೇಷ್ಠ ಕೋಚ್‌ಗಳು ಭಾರತದಲ್ಲಿ ಇರುವುದು ಬಿಸಿಸಿಐಗೆ ಗೊತ್ತಿದ್ದರೂ ಅದು ಆತುರವಾಗಿ ಕೋಚ್ ನೇಮಕದ ಕಡೆಗೆ ಗಮನ ಹರಿಸಲಿಲ್ಲ. ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿಗೆ ಜವಾಬ್ದಾರಿ ನೀಡಿ ಅವರ ಸಾಮರ್ಥ್ಯವನ್ನು ಪರೀಕ್ಷಿಸಿತು. ಆದರೆ ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್‌ಗೆ ರವಿಶಾಸ್ತ್ರಿಯ ಅನುಭವ ಕುಂಬ್ಳೆಯ ಅನುಭವ ಮತ್ತು ಸಾಧನೆಯ ಮುಂದೆ ಮಸುಕಾಗಿ ಕಂಡು ಬಂತು. ಕುಂಬ್ಳೆ ರಂಗಪ್ರವೇಶ ಮಾಡುವುದು ಗೊತ್ತಾದ ಬೆನ್ನಲ್ಲೆ ಹಲವು ಮಂದಿ ಹಿರಿಯರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದರು. ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಅವರು ಸಂದರ್ಶನಕ್ಕೆ ಹಾಜರಾಗಲಿಲ್ಲ. ಸಂದೀಪ್ ಪಾಟೀಲ್‌ಗೆ ತನಗೆ ಕೋಚ್ ಹುದ್ದೆ ಸಿಗಲಾರದು ಎಂದು ಅರಿವಾಗುತ್ತಲೇ ಸ್ಪರ್ಧೆಯಿಂದ ದೂರ ಸರಿದರು.
ರವಿಶಾಸ್ತ್ರಿ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟರು. ಅವರು ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರೂ ತ್ರಿಮೂರ್ತಿಗಳು ಅವರ ಕೊಡುಗೆಯನ್ನು ಕಡೆಗಣಿಸಿದರು ಎನ್ನುವುದು ವಿಶೇಷ. ಟೀಮ್ ಇಂಡಿಯಾದ ಕೋಚ್ ಆಗಿ ಕುಂಬ್ಳೆ ನೇಮಕಗೊಂಡಿದ್ದರೂ, ಅವರಿಗೆ ಒಂದು ವರ್ಷದ ಮಟ್ಟಿಗೆ ಜವಾಬ್ದಾರಿ ನೀಡಲಾಗಿದೆ. ಇದರೊಂದಿಗೆ ಬಿಸಿಸಿಐ ಕುಂಬ್ಳೆಯ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾಗಿದೆ. ಕುಂಬ್ಳೆಗೆ ಅಗ್ನಿ ಪರೀಕ್ಷೆ ಎದುರಾಗಿದೆ.

                                                             ಕೋಚ್ ಹಾದಿಯಲ್ಲಿ...
 ಭಾರತಕ್ಕೆ ಮೇ 31, 1926ರಲ್ಲಿ ಐಸಿಸಿ(ಇಂಪೀರಿಯಲ್‌ಕ್ರಿಕೆಟ್ ಕಾನ್ಫೆರೆನ್ಸ್) ಸೇರ್ಪಡೆಗೊಂಡ ಭಾರತ ಜೂನ್ 25,1932ರಲ್ಲಿ ಟೆಸ್ಟ್ ರಾಷ್ಟ್ರವಾಗಿ ಐಸಿಸಿಯಿಂದ ಮಾನ್ಯತೆ ಪಡೆಯಿತು.
ಭಾರತದ ಕ್ರಿಕೆಟ್ ತಂಡ 1983ರಲ್ಲಿ ದೊಡ್ಡ ಸಾಧನೆ ಮಾಡಿತು. ಕಪಿಲ್ ದೇವ್ ನಾಯಕತ್ವದ ತಂಡ ವಿಶ್ವಕಪ್ ಜಯಿಸಿತ್ತು. 2011ರಲ್ಲಿ ಎರಡನೆ ಬಾರಿ ಭಾರತ ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದುಕೊಂಡಿತು.
  
ಧೋನಿ ನಾಯಕತ್ವದಲ್ಲಿ ಭಾರತ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಸೌರವ್ ಗಂಗುಲಿ ನಾಯಕತ್ವದಲ್ಲಿ 2003ರ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದಿತ್ತು. ಒಂದೊಮ್ಮೆ ಟೆಸ್ಟ್‌ನಲ್ಲಿ ನಂ.1 ಸ್ಥಾನವನ್ನು ಭಾರತ ಪಡೆದಿತ್ತು. ಭಾರತಕ್ಕೆ ಕೋಚ್ ಹುದ್ದೆ ನೇಮಕ ನಡೆದಿರುವುದು 1992ರಲ್ಲಿ. ಮಾಜಿ ನಾಯಕ ಅಜಿತ್ ವಾಡೇಕರ್ ಭಾರತದ ಕೋಚ್ ಆಗಿ 1996ರ ತನಕ ಸೇವೆ ಸಲ್ಲಿಸಿದ್ದರು. ಆ ಬಳಿಕ ಭಾರತ ಒಟ್ಟು 11 ಕೋಚ್‌ಗಳನ್ನು ನೋಡುವಂತಾಗಿದೆ. ಅನಿಲ್ ಕುಂಬ್ಳೆ 11ನೆ ಕೋಚ್. ಇವರಲ್ಲಿ 4 ಮಂದಿ ವಿದೇಶಿ ಕೋಚ್‌ಗಳು ಸೇರಿದ್ದಾರೆ.

ವಾಡೇಕರ್ ಬಳಿಕ ಸಂದೀಪ್ ಪಾಟೀಲ್(1996), ಮದನ್‌ಲಾಲ್(1996-97), ಅಂಶುಮಾನ್ ಗಾಯಕ್‌ವಾಡ್(1997-99), ಕಪಿಲ್ ದೇವ್(1999-2000), ನ್ಯೂಝಿಲೆಂಡ್‌ನ ಜಾನ್ ರೈಟ್ (2000-2005), ಆಸ್ಟ್ರೇಲಿಯದ ಗ್ರೇಗ್ ಚಾಪೆಲ್(2005-07), ದಕ್ಷಿಣ ಆಫ್ರಿಕದ ಗ್ಯಾರಿ ಕರ್ಸ್ಟನ್(2007-11), ಡಂಕನ್ ಫ್ಲೆಚರ್(2011-15) ಹೀಗೆ ಕೋಚ್‌ಗಳು ಟೀಮ್ ಇಂಡಿಯಾದ ಯಶಸ್ಸಿಗೆ ಶ್ರಮಿಸಿದ್ದಾರೆ. ಒಟ್ಟಿನಲ್ಲಿ ಅನಿಲ್ ಕುಂಬ್ಳೆ ಅವರ ಮೇಲೆ ಬಿಸಿಸಿಐ ನಂಬಿಕೆ ಇರಿಸಿ ಕೋಚ್ ಹುದ್ದೆಗೆ ಅವರನ್ನು ನೇಮಕ ಮಾಡಿದೆ. ಇದರೊಂದಿಗೆ ವಿದೇಶಿ ಕೋಚ್‌ಗಳ ನೇಮಕದ ಹಾದಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಕುಂಬ್ಳೆಗೆ ಈ ಹುದ್ದೆಯಲ್ಲಿ ಅನುಭವ ಇಲ್ಲದಿದ್ದರೂ ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಕೋಚ್ ಜವಾಬ್ದಾರಿಯನ್ನು ನೀಡಿದೆ.

share
ಇಬ್ರಾಹಿಂ ಅಡ್ಕಸ್ಥಳ
ಇಬ್ರಾಹಿಂ ಅಡ್ಕಸ್ಥಳ
Next Story
X