25 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಜೂ. 24: ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೆ ರಾಜ್ಯ ಸರಕಾರ ಇಪ್ಪತ್ತೈದು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಹೆಸರಿನ ಮುಂದಿರುವ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ಶುಕ್ರವಾರ ಆದೇಶ ಹೊರಡಿಸಿದೆ.
ಜಾವೇದ್ ಅಕ್ತರ್-ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆಪಿಟಿಸಿಎಲ್ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆಗಾರಿಕೆ ನೀಡಿ ವರ್ಗಾಯಿಸಲಾಗಿದೆ. ನವೀನ್ ರಾಜ್ ಸಿಂಗ್-ಸರಕಾರದ ಕಾರ್ಯದರ್ಶಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹೆಚ್ಚುವರಿಯಾಗಿ ಎಂಪಿಎಂ ವ್ಯವಸ್ಥಾಪಕ ನಿರ್ದೇಶಕ.
ಸುಬೋಧ್ ಯಾದವ್-ಕಾರ್ಯದರ್ಶಿ ಕೆಪಿಎಸ್ಸಿ, ಡಾ.ಜೆ.ರವಿಶಂಕರ್- ತೋಟಗಾರಿಕಾ ಇಲಾಖೆ ನಿರ್ದೇಶಕ, ಡಾ.ಎನ್.ಮಂಜುಳಾ-ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ, ಮನೋಜ್ ಕುಮಾರ್ ಮೀನಾ-ಐಜಿಆರ್‌ಸಿಎಸ್ ಆಯುಕ್ತ, ಡಾ. ರತನ್ ಯು. ಕೆಲ್ಕಾರ್-ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ, ಸೌರ್ಜನ್ಯಾ -ಸಾರ್ವಜನಿಕ ನಿರ್ದೇಶನಾಲಯದ ಆಯುಕ್ತೆ, ಡಾ.ಆರ್.ವಿಶಾಲ್- ಮುನ್ಸಿಫಲ್ ಆಡ್ಮಿನಿಸ್ಟ್ರೇಷನ್ ನಿರ್ದೇಶಕ.
ವಿ.ಅನ್ಬು ಕುಮಾರ್-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ, ಡಾ. ಎನ್.ವಿ.ಪ್ರಸಾದ್-ಭೂಸೇನಾ ನಿಗಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿ. ಸತ್ಯವತಿ-ಜಿಲ್ಲಾಧಿಕಾರಿ ಚಿಕ್ಕಮಗಳೂರು, ಬಿ.ಎಂ.ವಿಜಯ್ ಶಂಕರ್- ಬಿಬಿಎಂಪಿ ವಿಶೇಷ ಆಯುಕ್ತ, ದೀಪ್ತಿ ಆದಿತ್ಯ ಕಾಂಡೆ-ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.
ಉಜ್ವಲ್ ಕುಮಾರ್ ಘೋಷ್-ಇ-ಆಡಳಿತ ಇಲಾಖೆ ಸಿಇಒ, ಎಂ.ದೀಪಾ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ, ಪಿ.ರಾಜೇಂದ್ರ ಚಾವ್ಲಾ- ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ರಾಮದೀಪ್ ಚೌದರಿ-ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ.
ಡಾ.ಎಂ.ವಿ.ವೆಂಕಟೇಶ್-ಹಾವೇರಿ ಜಿಲ್ಲಾಧಿಕಾರಿ, ಎಸ್.ಎಸ್.ನಕುಲ್-ಉತ್ತರ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿ, ಎಸ್.ಬಿ.ಬೊಮ್ಮನಹಳ್ಳಿ-ಧಾರವಾಡ ಜಿಲ್ಲಾಧಿಕಾರಿ, ಬಿ.ಸಿಂಧು-ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಡಿ.ಎಸ್.ರಮೇಶ್- ದಾವಣಗೆರೆ ಜಿಲ್ಲಾಧಿಕಾರಿ, ಪಂಕಜ್ ಕುಮಾರ್ ಪಾಂಡೆ-ಕೆಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.







