ರಿಯೋ ಒಲಿಂಪಿಕ್ಸ್ ವಿಲೇಜ್ ಮಾಧ್ಯಮಕ್ಕೆ ಮುಕ್ತ

ರಿಯೋ ಡಿ ಜನೈರೊ,ಜೂ.24: ರಿಯೋ ಒಲಿಂಪಿಕ್ಸ್‌ನ ಅಥ್ಲೀಟ್‌ಗಳ ಗ್ರಾಮವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮುಕ್ತಗೊಳಿಸಲಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ಗೆ ಅಂತಿಮ ತಯಾರಿ ಬಿರುಸಿನಿಂದ ನಡೆಯುತ್ತಿದೆ.
ಒಲಿಂಪಿಕ್ಸ್ ಗ್ರಾಮದಲ್ಲಿ ಒಲಿಂಪಿಕ್ಸ್‌ನ ವೇಳೆ 17,000ಕ್ಕೂ ಅಧಿಕ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳಿಗೆ ತಂಗಲು ವ್ಯವಸ್ಥೆಯಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ 6,000 ಜನರು ತಂಗಬಹುದು.
ವಿಲೇಜ್ ನಿರ್ದೇಶಕರ ಪ್ರಕಾರ, ವಿಲೇಜ್ ಸ್ವಯಂಸೇವಕರಿಗೆ ಮುಂದಿನ ವಾರ ತರಬೇತಿ ನೀಡಲಾಗುತ್ತದೆ.
‘‘ಸರ್ವ ಸಜ್ಜಿತ ತಂಡ ವಿಲೇಜ್‌ನ ಯಶಸ್ಸಿಗೆ ಮೂಲಭೂತ ಅವಶ್ಯಕತೆಯಾಗಿದೆ’’ ಎಂದು ವಿಲೇಜ್ ಡೈರೆಕ್ಟರ್ ಮಾರಿಯೊ ಕ್ಲೆಂಟಿ ಹೇಳಿದ್ದಾರೆ.
ಬ್ರೆಝಿಲ್‌ನ ಬಾಸ್ಕೆಟ್‌ಬಾಲ್ ಗ್ರೇಟ್ ಜಾನೆಟ್ ಅರ್ಕೈನ್ ವಿಲೇಜ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ವಿಲೇಜ್‌ಗೆ ಆಗಮಿಸಲಿರುವ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳನ್ನು ಜಾನೆಟ್ ಸ್ವಾಗತಿಸಲಿದ್ದಾರೆ.
‘‘ನನ್ನ ಪಾಲಿಗೆ ಈ ಪಾತ್ರವು ಪದಕ ಗೆದ್ದಷ್ಟೇ ಸಂತೋಷದ ವಿಷಯವಾಗಿದೆ’’ ಎಂದು ಜನೆತ್ ಹೇಳಿದ್ದಾರೆ.
47ರ ಹರೆಯದ ನಿವೃತ್ತ ಅಥ್ಲೀಟ್ ಜಾನೆಟ್ ಅತ್ಯಂತ ಹೆಚ್ಚು ಒಲಿಂಪಿಕ್ ಅಂಕ ಗಳಿಸಿ ದಾಖಲೆ ಬರೆದಿದ್ದರು. 2004ರ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ ಬ್ರೆಝಿಲ್ ತಂಡದ ಸದಸ್ಯೆಯಾಗಿದ್ದರು. 1996ರ ಅಟ್ಲಾಂಟ ಹಾಗೂ 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.
ರಿಯೋ ಒಲಿಂಪಿಕ್ಸ್ ಆಗಸ್ಟ್ 5 ರಿಂದ 21ರ ತನಕ ನಡೆಯಲಿದೆ. ಪ್ಯಾರಾಲಿಂಪಿಕ್ಸ್ ಸೆ.7 ರಿಂದ 18ರ ತನಕ ನಡೆಯುವುದು.







