ಶಾಲಾ ಕಟ್ಟಡ ಉದ್ಘಾಟನೆ
ಸುಳ್ಯ, ಜೂ.24: ಸುಳ್ಯದ ರೋಟರಿ ಶಾಲಾ ನೂತನ ಕಟ್ಟಡದ ಉದ್ಘಾಟನೆ ಜೂ.25ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸುವರು. ಮೀನಾಕ್ಷಿ ಶಾಂತಿಗೋಡು, ಡಾ. ಎಸ್.ಆರ್.ನಾಗಾರ್ಜುನ, ದಿವ್ಯಪ್ರಭಾ ಮತ್ತಿತರರು ಉಪಸ್ಥಿತರಿರುವರು.
Next Story





