ಉಳ್ಳಾಲ, ಜೂ.24: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ವತಿಯಿಂದ ಜೂ.25ರಂದು ಲುಹರ್ ನಮಾಝ್ ಬಳಿಕ ತೊಕ್ಕೊಟ್ಟಿನ ಮಸ್ಜಿದುಲ್ ಹುದಾದಲ್ಲಿ ‘ಕರ್ಮಶಾಸ್ತ್ರದ ಭಿನ್ನತೆಗಳು’ ಎಂಬ ವಿಷಯದಲ್ಲಿ ಕಾಸರ ಗೋಡ್ ಆಲಿಯಾ ಇಂಟರ್ ನ್ಯಾಷನಲ್ ಅಕಾಡೆಮಿಯ ಉಪನ್ಯಾಸಕ ವೌಲಾನಾ ಖಲೀಲುರ್ರಹ್ಮಾನ್ ನದ್ವಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.