ಶಿಕ್ಷಣತಜ್ಞರ ಕಡೆಗಣನೆಯಿಂದ ಉತ್ತಮ ಉನ್ನತ ಶಿಕ್ಷಣ ಸಾಧ್ಯವೇ?

ಮುಕ್ತ ಮಾರುಕಟ್ಟೆಯ ಗಾಳಿ ಭಾರತೀಯ ಆರ್ಥಿಕತೆಗೆ ಒಳ್ಳೆಯ ಜಗತ್ತನ್ನು ಪರಿಚಯಿಸುತ್ತಿರುವಾಗ, ಶಿಕ್ಷಣದಂಥ ಸಾರ್ವಜನಿಕ ಸರಕನ್ನು ಮಾರುಕಟ್ಟೆ ಶಕ್ತಿಗಳು ಅಸ್ಥಿರತೆಗೆ ಒಳಪಡಿಸುವುದು ಒಳ್ಳೆಯ ಯೋಚನೆಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಾರುಕಟ್ಟೆಯ ಪಾತ್ರ, ಸರಕಾರದ ಪ್ರಯತ್ನಗಳಿಗೆ ಪೂರಕವಾಗಬೇಕೇ ವಿನಃ ಸರಕಾರದ ನೆರವಿಗೆ ಪರ್ಯಾಯವಾಗಿ ನಿ ಒದಗಿಸುವುದಲ್ಲ. ಪ್ರಮುಖ ಸಂಸ್ಥೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಎಚ್‌ಇಎ್ಎ ನಿ ಯುಜಿಸಿಗೆ ಪರ್ಯಾಯವಾಗಿರುತ್ತದೆಯೇ?
ಅಲ್ಲದೆ ಬೋಧನಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯೇ ಶಿಕ್ಷಣವೃತ್ತಿಯನ್ನು ತಿರಸ್ಕರಿಸುವಂಥದ್ದು. ಸಾಮಾನ್ಯವಾಗಿ ಖಾಯಂ ಹುದ್ದೆಗಳು ಖಾಲಿಯಾದಾಗ, ಆ ಹುದ್ದೆಗೆ ಆರು ತಿಂಗಳು ಅಥವಾ ಒಂದು ವರ್ಷದ ಮಟ್ಟಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದನ್ನು ಖಾಯಂ ಹುದ್ದೆಗೆ ನೇಮಕ ಮಾಡಿಕೊಳ್ಳುವವರ ಪ್ರೊಬೇಷನರಿ ಅವ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಈ ತಾತ್ಕಾಲಿಕ ಸಿಬ್ಬಂದಿ ಎಷ್ಟೇ ಉತ್ತಮವಾಗಿ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ, ಒಂದು ವರ್ಷ ಮುಗಿದ ಕೂಡಲೇ ಆತನನ್ನು ವಜಾ ಮಾಡಲಾಗುತ್ತದೆ. ಸಾಕಷ್ಟು ನಿದರ್ಶನಗಳಲ್ಲಿ ಇಂಥ ತಾತ್ಕಾಲಿಕ ಸಿಬ್ಬಂದಿಗೆ ವಿವಿ ರಜೆ ಅವಯಲ್ಲಿ ವೇತನವನ್ನೂ ನೀಡುವುದಿಲ್ಲ. ದಿಲ್ಲಿ ವಿಶ್ವವಿದ್ಯಾನಿಲಯವೊಂದರಲ್ಲೇ 3500 ಮಂದಿ ತಾತ್ಕಾಲಿಕ ಬೋಧಕ ಸಿಬ್ಬಂದಿ ಇದ್ದಾರೆ. ಕಲ್ಲಿಕೋಟೆ ಎನ್‌ಐಟಿ ಇತ್ತೀಚೆಗೆ ಬೋಧನಾ ಸಿಬ್ಬಂದಿಯ ನೇಮಕಾತಿಗೆ ಜಾಹೀರಾತು ನೀಡಿತು. ನ್ಯಾನೊ ವಿಜ್ಞಾನ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್ ಮತ್ತಿತರ ಕ್ಷೇತ್ರಗಳಲ್ಲಿ ಪಿಎಚ್‌ಡಿ ಪದವಿ ಪಡೆದವರಿಂದ ಅರ್ಜಿ ಆಹ್ವಾನಿಸಿತು. ಆದರೆ ಈ ಹುದ್ದೆ ತಾತ್ಕಾಲಿಕ ಮಾತ್ರ ಹಾಗೂ ವೇತನ ತಿಂಗಳಿಗೆ 50 ಸಾವಿರ ರೂಪಾಯಿ!
ಇನ್ನೊಂದು ಪ್ರಮುಖ ಕಾರಣ ಎಂದರೆ, ಉನ್ನತ ಶಿಕ್ಷಣವನ್ನು ನಿಯಂತ್ರಿಸುವ ಶಿಕ್ಷಣೇತರ ವಿಧಾನಗಳು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ), ದೇಶದ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುವ ಅತ್ಯುನ್ನತ ಸಂಸ್ಥೆ. ವಿಶ್ವವಿದ್ಯಾನಿಲಯ ಶಿಕ್ಷಣದ ಪ್ರತಿಯೊಂದು ಆಯಾಮಗಳನ್ನೂ ಇದು ನಿಯಂತ್ರಿಸಬೇಕು. ಬೋಧನೆ ಹಾಗೂ ಸಂಶೋಧನೆಯಿಂದ ಹಿಡಿದು, ನೇಮಕಾತಿ ಹಾಗೂ ಕಂತೆ ಕಂತೆ ಅಸೂಚನೆಗಳ ವರೆಗೆ. ಇತ್ತೀಚೆಗೆ ಯುಜಿಸಿ ಒಂದು ಅಸೂಚನೆ ಹೊರಡಿಸಿ, ಎಲ್ಲ ಸಹಾಯಕ ಪ್ರಾಧ್ಯಾಪಕರೂ ವಾರಕ್ಕೆ ಕನಿಷ್ಠ 18 ಗಂಟೆ ಬೋಧನೆ ಮಾಡಬೇಕು ಎಂದು ಸೂಚಿಸಿದೆ. ಇದರ ಉದ್ದೇಶ ದೇಶದ ವಿವಿಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುವಂಥದ್ದು. ಆದರೆ ಅದು ಅಷ್ಟೇ ವಿವರಣೆಗೆ ನಿಲುಕದ್ದು.
ಕೆಲ ವರ್ಷಗಳ ಹಿಂದೆ ಯುಜಿಸಿ, ಅಂಕ ಆಧಾರಿತ ವ್ಯವಸ್ಥೆಯಾದ ಶೈಕ್ಷಣಿಕ ಸಾಧನೆ ಸೂಚ್ಯಂಕ (ಎಪಿಐ) ಜಾರಿಗೆ ತಂದಿತು. ಇದರ ಅನ್ವಯ ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ನೇಮಕಾತಿ ಮತ್ತು ಭಡ್ತಿಗೆ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸುವುದು ಇದರ ಉದ್ದೇಶವಾಗಿತ್ತು.
ಈ ವ್ಯವಸ್ಥೆಯಡಿ, ಬಹಳಷ್ಟು ಸಂಕೀರ್ಣ ಅಂಶಗಳಾದ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾದ ಪ್ರಬಂಧಗಳನ್ನೂ ಸೇರಿಸಲಾಯಿತು. ಒಂದು ಸಂಶೋಧನಾ ಪ್ರಬಂಧವನ್ನು ತಜ್ಞರ ವಿಮರ್ಶೆಯ ನಿಯತಕಾಲಿಕದಲ್ಲಿ ಪ್ರಕಟಿಸಿದ ಪ್ರಾಧ್ಯಾಪಕರು 20 ಅಂಕ ಪಡೆಯಲು ಅರ್ಹರಾಗುತ್ತಾರೆ. ಅಂಥ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಬಂಧ ಪ್ರಕಟಿಸಲಾದ ಪ್ರಾಧ್ಯಾಪಕರ ಕಥೆ ಏನು? ಯುಜಿಸಿ ಇಂಥ ಬೋಧನಾ ಸಿಬ್ಬಂದಿ ಇಂಥ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸುವಂತೆ ಉತ್ತೇಜನ ನೀಡುವುದಿಲ್ಲ. ಬದಲಾಗಿ. ಈ ವಿಧಾನದಿಂದ ತಪ್ಪಿಸಿಕೊಳ್ಳಲು ಸುಲಭ ಮಾರ್ಗವನ್ನು ತೋರಿಸಿಕೊಟ್ಟಿತು. ಸೂಚಿತವಲ್ಲದ ನಿಯತಕಾಲಿಕಗಳಲ್ಲಿ ಇಂಥ ಪ್ರಬಂಧಗಳನ್ನು ಮಂಡಿಸಿದರೆ, 10 ಅಂಕ ನೀಡುವುದು ಯುಜಿಸಿ ತೋರಿಸಿಕೊಟ್ಟ ಪರ್ಯಾಯ ಮಾರ್ಗ. ಐಎಸ್‌ಎಸ್‌ಎನ್ ಅಥವಾ ಐಎಸ್‌ಬಿಎನ್ ಸಂಖ್ಯೆ ಹೊಂದಿದ ಯಾವುದೇ ನಿಯತಕಾಲಿಕಗಳಲ್ಲಿ ಪ್ರಬಂಧ ಪ್ರಕಟಿಸಲು ಅವಕಾಶ ಕಲ್ಪಿಸಿಕೊಟ್ಟಿತು.
ಆದರೆ ಐಎಸ್‌ಎಸ್‌ಎನ್ ಅಥವಾ ಐಎಸ್‌ಬಿಎನ್ ಸಂಖ್ಯೆಗೂ ಶಿಕ್ಷಣ ಗುಣಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಒಬ್ಬ ಶಿಕ್ಷಣ ತಜ್ಞ, ಪ್ರತಿಷ್ಠಿತ ನಿಯತಕಾಲಿಕದಲ್ಲಿ ಪ್ರಬಂಧ ಪ್ರಕಟಿಸಲು ಶ್ರಮ ವಹಿಸುವ ಬದಲು, ಅಂಕ ಸಂಪಾದಿಸುವ ಸಲುವಾಗಿ ನಕಲಿ ನಿಯತಕಾಲಿಕಗಳಲ್ಲಿ ಪ್ರಬಂಧ ಪ್ರಕಟಿಸುವ ಸುಲಭ ವಿಧಾನಕ್ಕೆ ಮೊರೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದೇ ಕಾರಣದಿಂದ ಭಾರತದ ಶಿಕ್ಷಣ ಕ್ಷೇತ್ರದಲ್ಲಿ, ಯಾವ ಶೈಕ್ಷಣಿಕ ವೌಲ್ಯವೂ ಇಲ್ಲದ ಹಲವು ನಿಯತಕಾಲಿಕಗಳು ತಲೆ ಎತ್ತಿವೆ. ಇದು ಸಹಜವಾಗಿಯೇ ಕಳಪೆ ಹಾಗೂ ಕ್ರಿಯಾವಿಮುಖತೆಯನ್ನು ಸಾಂಸ್ಥೀಕರಣಗೊಳಿಸುತ್ತದೆ.
ಈ ಅಂಕಪದ್ಧತಿಗೆ ಹೊಂದಿಕೆಯಾಗದಿರುವ ಇನ್ನೊಂದು ಅಂಶವೆಂದರೆ, ಬೋಧನಾ ಸಿಬ್ಬಂದಿಯ ಯಾವುದೇ ಸಂಶೋಧನೆಯನ್ನು ಮತ್ತೊಂದು ಸಂಶೋಧನೆಯಲ್ಲಿ ಉಲ್ಲೇಖಿಸಿದರೂ ಕೂಡಾ ಯಾವ ಅಂಕವನ್ನೂ ಪ್ರಾಧ್ಯಾಪಕರಿಗೆ ನೀಡುವ ಪದ್ಧತಿ ಇಲ್ಲ. ಸಾಮಾನ್ಯವಾಗಿ ಇಂಥ ಉಲ್ಲೇಖವನ್ನು ಸಂಶೋಧನೆ ಗುಣಮಟ್ಟ ಅಳೆಯುವ ಮಾನದಂಡ ಎಂದು ಪರಿಗಣಿಸಲಾಗುತ್ತದೆ. ಕ್ಯೂಎಸ್ ಸೂಚ್ಯಂಕದಲ್ಲಿ ಜಾಗತಿಕ ರ್ಯಾಂಕಿಂಗ್ ನೀಡುವಲ್ಲಿ ಈ ಅಂಶಕ್ಕೆ ಶೇ.20ರಷ್ಟು ಮಹತ್ವ ನೀಡಲಾಗುತ್ತದೆ. ಜಾಗತಿಕವಾಗಿ ಪ್ರಮುಖ ವಿಶ್ವವಿದ್ಯಾನಿಲಯಗಳು ಬೋಧನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ, ಅವರ ಸಂಶೋಧನೆಗಳು ಇತರ ಎಷ್ಟು ಸಂಶೋಧನಾ ಪ್ರಬಂಧಗಳಲ್ಲಿ ಉಲ್ಲೇಖವಾಗಿದೆ ಎನ್ನುವ ಅಂಶಕ್ಕೆ ಹೆಚ್ಚು ಒತ್ತು ನೀಡುತ್ತವೆ.
ಕೆಲಸಕ್ಕೆ ಅನುವು ಮಾಡಿಕೊಡದ ಅಥವಾ ನಿರ್ಬಂಧ ವಾತಾವರಣ ಇನ್ನೊಂದು ಪ್ರಮುಖ ಕಾರಣ. ಕೇವಲ ಸಂಶೋಧನೆಯ ಲಿತಾಂಶವನ್ನು ಬೋಧನಾ ಸಿಬ್ಬಂದಿ ಗಳಿಸಿದ ಅಂಕಗಳ ಆಧಾರದಲ್ಲಿ ಅಳೆಯುವುದರಿಂದ ಸಂಶೋಧನೆಗೆ ಉತ್ತೇಜನ ನೀಡಿದಂತಾಗದು. ನಮ್ಮ ವಿಶ್ವವಿದ್ಯಾನಿಲಯಗಳು ಬೋಧನಾ ಸಿಬ್ಬಂದಿ ಹೆಚ್ಚು ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು. ಇದರಲ್ಲಿ ಹೊರೆಯಾಗದಷ್ಟು ಪ್ರಮಾಣದ ಬೋಧನಾ ಕೆಲಸ, ಮೂಲಸೌಕರ್ಯಗಳಾದ ಸಮರ್ಪಕ ಕಚೇರಿ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ ಸೇವೆಗಳ ಲಭ್ಯತೆ, ಸಂಶೋಧನಾ ಅನುದಾನ, ಗುಣಮಟ್ಟದ ಗ್ರಂಥಾಲಯ ಸೇವೆಗಳ ಲಭ್ಯತೆ ಮತ್ತಿತರ ಅಂಶಗಳು ಪ್ರಮುಖವಾಗುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ, ಬೋಧನಾ ಸಿಬ್ಬಂದಿಯ ವೃತ್ತಿ ಅವಕಾಶಗಳನ್ನು, ಆತ ಶೈಕ್ಷಣಿಕವಾಗಿ ಯಾವ ಸಾಧನೆ ಮಾಡಿದ್ದಾನೆ ಎಂಬ ಮಾನದಂಡದ ಬದಲಾಗಿ 2 ತಾಂತ್ರಿಕ ಅಂಶಗಳಾದ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ ಎಂಬ ಆಧಾರದಲ್ಲಿ ಜ್ಯೇಷ್ಠತೆ ನಿರ್ಧರಿಸುವುದರಿಂದ ಸಂಶೋಧನೆಗೆ ಉತ್ತೇಜನ ದೊರಕದು.
ಇವೆಲ್ಲದರ ಜತೆಗೆ ವಿಶ್ವವಿದ್ಯಾನಿಲಯಗಳ ಬಗೆಗಿನ ಪ್ರಸ್ತುತ ಸರಕಾರದ ದೃಷ್ಟಿಕೋನವೇ ಉನ್ನತ ಶಿಕ್ಷಣವನ್ನು ಕಂಗೆಡಿಸುವಂಥದ್ದು. ಹಣಕಾಸು ಸಚಿವ ಅರುಣ್ ಜೇಟ್ಲಿ, ೆಬ್ರವರಿಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ, 10 ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು ವಿಶ್ವದರ್ಜೆಯ ಬೋಧನಾ ಹಾಗೂ ಸಂಶೋಧನಾ ಸಂಸ್ಥೆಗಳಾಗಿ ರೂಪುಗೊಳಿಸಲು ಗುರುತಿಸಲಾಗುವುದು ಮತ್ತು ಅವುಗಳಿಗೆ ನಿಯಂತ್ರಿತ ವಾತಾವರಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ. ಆದರೆ ಈ ನಿಯಂತ್ರಿತ ವಾತಾವರಣ ಎಂದರೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಸೌಲಭ್ಯ ಕೆಲ ಆಯ್ದ ಸಂಸ್ಥೆಗಳಿಗಷ್ಟೇ ಏಕೆ? ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹಣಕಾಸು ಸಚಿವರು, 1000 ಕೋಟಿ ರೂಪಾಯಿ ನಿಯೊಂದಿಗೆ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (ಎಚ್‌ಇಎ್ಎ) ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ನಿ ಮಾರುಕಟ್ಟೆಯನ್ನೂ ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.
ಮುಕ್ತ ಮಾರುಕಟ್ಟೆಯ ಗಾಳಿ ಭಾರತೀಯ ಆರ್ಥಿಕತೆಗೆ ಒಳ್ಳೆಯ ಜಗತ್ತನ್ನು ಪರಿಚಯಿಸುತ್ತಿರುವಾಗ, ಶಿಕ್ಷಣದಂಥ ಸಾರ್ವಜನಿಕ ಸರಕನ್ನು ಮಾರುಕಟ್ಟೆ ಶಕ್ತಿಗಳು ಅಸ್ಥಿರತೆಗೆ ಒಳಪಡಿಸುವುದು ಒಳ್ಳೆಯ ಯೋಚನೆಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಾರುಕಟ್ಟೆಯ ಪಾತ್ರ, ಸರಕಾರದ ಪ್ರಯತ್ನಗಳಿಗೆ ಪೂರಕವಾಗಬೇಕೇ ವಿನಃ ಸರಕಾರದ ನೆರವಿಗೆ ಪರ್ಯಾಯವಾಗಿ ನಿ ಒದಗಿಸುವುದಲ್ಲ. ಪ್ರಮುಖ ಸಂಸ್ಥೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಎಚ್‌ಇಎ್ಎ ನಿ ಯುಜಿಸಿಗೆ ಪರ್ಯಾಯವಾಗಿರುತ್ತದೆಯೇ? ಬಹುಶಃ ಇದು ನಿಜವಾಗಿರಬೇಕು; ಏಕೆಂದರೆ, 2015-16ನೆ ಸಾಲಿನ ಬಜೆಟ್‌ನಲ್ಲಿ ಯುಜಿಸಿ ಅನುದಾನ 9315.45 ಕೋಟಿ ರೂ. ಇದ್ದದ್ದು, 2016-17ನೆ ಸಾಲಿನಲ್ಲಿ 4286.94 ಕೋಟಿ ರೂ.ಗೆ ಇಳಿದಿದೆ. ಈ ಕಡಿತ ಪ್ರಮಾಣ ಎಚ್‌ಇಎ್ಎಯ ಮೂಲನಿಯಾದ ಒಂದು ಸಾವಿರ ಕೋಟಿಗಿಂತ ತೀರಾ ಅಕ. ಜಾಗತಿಕ ಜ್ಞಾನ ಆರ್ಥಿಕತೆಯಾಗಿ ಪರಿವರ್ತನೆಯಾಗುವ ಇರಾದೆ ಭಾರತಕ್ಕೆ ನಿಜವಾಗಿಯೂ ಇದ್ದರೆ, ಏಷ್ಯಾ ಹಾಗೂ ಜಗತ್ತಿನಾದ್ಯಂತ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಬೆಳೆಯಬೇಕಿದ್ದರೆ, ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳನ್ನು ನಿರ್ಲಕ್ಷಿಸುವಂತಿಲ್ಲ.
ಕೃಪೆ: thewire







