ವಿಫಲವಾದ ಮೋದಿ ಸ್ವಿಸ್ ಭೇಟಿ

ಸಿಯೋಲ್, ಜೂ. 24: ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ)ವಿಗೆ ಭಾರತದ ಸೇರ್ಪಡೆಗೆ ಸ್ವಿಟ್ಜರ್‌ಲ್ಯಾಂಡ್ ಮತ್ತು ಮೆಕ್ಸಿಕೊ ದೇಶಗಳ ಬೆಂಬಲ ಕೋರುವ ಉದ್ದೇಶವನ್ನಿಟ್ಟುಕೊಂಡೇ ಪ್ರಧಾನಿ ಮೋದಿ ಈ ತಿಂಗಳ ಆದಿ ಭಾಗದಲ್ಲಿ ಈ ಎರಡು ದೇಶಗಳಿಗೆ ಪ್ರವಾಸ ಹೋಗಿದ್ದರು.
ಎನ್‌ಎಸ್‌ಜಿಯ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಗಳಿಗೆ ತನ್ನ ದೇಶದ ಬೆಂಬಲವಿದೆ ಎಂಬುದಾಗಿ ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷ ಜೊಹಾನ್ ಶ್ನೈಡರ್ ಅಮ್ಮಾನ್ ಘೋಷಿಸಿಯೂ ಇದ್ದರು. ಆದರೆ, ಸಿಯೋಲ್‌ನಲ್ಲಿ ಗುರುವಾರ ನಡೆದ ಎನ್‌ಎಸ್‌ಜಿ ಸದಸ್ಯರ ಸಮಾವೇಶದಲ್ಲಿ ಸ್ವಿಝರ್‌ಲ್ಯಾಂಡ್ ಭಾರತದ ನಿರೀಕ್ಷೆಗಳಿಗೆ ಕೊಳ್ಳಿಯಿಟ್ಟಿತು.
ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಅಮೆರಿಕ ನೀಡಿರುವ ಬಹಿರಂಗ ಕರೆಯ ಹೊರತಾಗಿಯೂ, ಭಾರತಕ್ಕೆ ವಿಶೇಷ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ವಿಟ್ಜರ್‌ಲ್ಯಾಂಡ್, ಬ್ರೆಝಿಲ್, ಆಸ್ಟ್ರಿಯ ಮತ್ತು ಅಯರ್‌ಲ್ಯಾಂಡ್ ಮುಂತಾದ ದೇಶಗಳು ಹೇಳಿದವು. ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ ಎಂಬುದಾಗಿ ಆ ದೇಶಗಳು ಹೇಳಿದವು.
Next Story





