ವಿದೇಶಾಂಗ ನೀತಿಯಲ್ಲಿ ಮೋದಿ ವಿಫಲ: ಕೇಜ್ರಿವಾಲ್
ಹೊಸದಿಲ್ಲಿ, ಜೂ.24: ಪ್ರಧಾನಿ ನರೇಂದ್ರ ಮೋದಿ ವಿದೇಶಿ ನೀತಿಯ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ.
ಭಾರತದ ಸದಸ್ಯತ್ವದ ಕುರಿತುಯಾವುದೇ ನಿರ್ಧಾರ ಕೈಗೊಳ್ಳದೆ ಪರಮಾಣು ಪೂರೈಕೆ ಗುಂಪಿನ(ಎನ್‌ಎಸ್‌ಜಿ) ಸಭೆ ಮುಕ್ತಾಯ ವಾಗಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಟಿದೆ.
ತನ್ನ ವಿದೇಶಿ ಪ್ರವಾಸಗಳ ವೇಳೆ ಏನು ಮಾಡಿದ್ದಾರೆಂಬ ಕುರಿತು ಪ್ರಧಾನಿ ವಿವರಣೆ ನೀಡಬೇಕಾಗಿದೆಯೆಂದು ಕೇಜ್ರಿವಾಲ್ ಹೇಳಿದ್ದಾರೆ.
ಎನ್‌ಎಸ್‌ಜಿ ಸದಸ್ಯತ್ವದ ಭಾರತದ ಪ್ರಯತ್ನವನ್ನು ಸ್ವಿಟ್ಜ ರ್ಲೆಂಡ್ ವಿರೋಧಿಸಿತೆಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ಆ ದೇಶಕ್ಕೆ ಪ್ರಧಾನಿ ಮೋದಿ ನೀಡಿದ್ದ ಭೇಟಿಯು ಫಲಪ್ರದವಾಗಿಲ್ಲವೆಂಬುದನ್ನು ಇದು ಸೂಚಿಸುತ್ತಿದೆಯೆಂದು ಟ್ವೀಟಿಸಿದ್ದಾರೆ.
ಜೂ.6ರಂದು ಪ್ರಧಾನಿ ಮೋದಿಯವ ರೊಂದಿಗೆ ಮಾತುಕತೆ ನಡೆಸಿದ ಬಳಿಕ ಸ್ವಿಟ್ಜರ್ಲೆಂಡ್‌ನ ಅಧ್ಯಕ್ಷ ಜೋಹಾನ್ ಶ್ನೈಡರ್‌ಅಮ್ಮಾನ್ ಭಾರತದ ಸದಸ್ಯತ್ವವನ್ನು ತನ್ನ ದೇಶ ಬೆಂಬಲಿಸುತ್ತಿದೆಯೆಂದು ಘೋಷಿಸಿದ್ದರು.
ಕೆಲವೇ ದಿನಗಳ ಹಿಂದೆ ಪ್ರಧಾನಿ ಯಾಕೆ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಲಿಲ್ಲ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಎನ್‌ಟಿಪಿಗೆ ಸಹಿ ಹಾಕದ ರಾಷ್ಟ್ರಗಳನ್ನು ಸದಸ್ಯರನ್ನಾಗಿ ಸೇರಿಸುವ ಕುರಿತು ಚೀನಾದ ನೇತೃತ್ವದಲ್ಲಿ ಕೆಲವು ರಾಷ್ಟ್ರಗಳಿಂದ ವಿರೋಧ ವ್ಯಕ್ತವಾದ ಕಾರಣ ಸಿಯೋಲ್‌ನಲ್ಲಿ ನಡೆದ 48 ಸದಸ್ಯರ ಎನ್‌ಎಸ್‌ಜಿ ಸಭೆಯು ಇಂದು ಮುಕ್ತಾಯಗೊಂಡಿದೆ.