ಟಾಟಾ ಸಂಸ್ಥೆಗೆ ಒಂದೇ ದಿನ 30 ಸಾವಿರ ಕೋಟಿ ರೂ.ನಷ್ಟ

ಮುಂಬೈ, ಜೂ.25:ಗ್ರೇಟ್ ಬ್ರಿಟನ್ ಯೂರೋಪಿಯನ್ ಒಕ್ಕೂಟದಿಂದ 43 ವರ್ಷಗಳ ಬಳಿಕ ಹೊರಬಂದಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ದೊಡ್ಡ ಹೂಡಿಕೆದಾರ ಸಂಸ್ಥೆಯಾಗಿರುವ ಟಾಟಾ ಸಂಸ್ಥೆಗೆ ಒಂದೇ ದಿನ 30 ಸಾವಿರ ಕೋಟಿ ರೂ.ನಷ್ಟವಾಗಿದೆ.
ಭಾರತದ ಮಾರುಕಟ್ಟೆ ದುರ್ಬಲಗೊಂಡಿದ್ದು, ಟಾಟಾ ಮೊಟಾರ್ಸ್, ಟಾಟಾ ಸ್ಟೀಲ್ ಮತ್ತು ಟಿಸಿಎಸ್ ನ ಷೇರ‍್ ಮೌಲ್ಯ ಕ್ರಮವಾಗಿ ಶೇ 8, ಶೇ 6 ಮತ್ತು ಶೇ 3ರಷ್ಟು ಇಳಿಕೆಯಾಗಿದೆ.
ಉಪ್ಪಿನಿಂದ ಸಾಪ್ಟ್ ವೇರ್ ತನಕ 19 ಸಂಸ್ಥೆಗಳು ಬ್ರಿಟನ್ ನಲ್ಲಿ ಕಾರ್ಯಾಚರಿಸುತ್ತಿದೆ. 60 ಸಾವಿರ ನೌಕರರು ಟಾಟಾ ಸಂಸ್ಥೆಯಲ್ಲಿದ್ದಾರೆ.
Next Story





