ಚೆನ್ನೈ: 40ಕೋಟಿ ರೂ. ಹೆರಾಯಿನ್, 30ಲಕ್ಷರೂ ಮೌಲ್ಯದ ಅಮೆರಿಕನ್ ಕರೆನ್ಸಿ ಪತ್ತೆ

ಚೆನ್ನೈ, ಜೂನ್ 25: ಕೊಲೊಂಬೊಕ್ಕೆ ಹೋಗುತ್ತಿದ್ದ ಇಬ್ಬರು ಪ್ರಯಾಣಿಕರಿಂದ 40ಕಿಲೊಗ್ರಾಮ್ ಹೆರಾಯಿನ್ ರೆವನ್ಯೂ ಇಂಟಲಿಜೆನ್ಸ್ ಡೈರೆಕ್ಟರೇಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕೆ 40ಕೋಟಿರೂಪಾಯಿ ಬೆಲೆ ಇದೆ. ವಿಮಾನದ ಒಬ್ಬ ಉದ್ಯೋಗಿಯನ್ನೂ ಕೂಡಾ ಪ್ರಶ್ನಿಸಲಿಕ್ಕಾಗಿ ವಶಕ್ಕೆ ಪಡೆಯಲಾಗಿದೆ.
ಮೂವರು ಭಾರತೀಯರೆಂದು ಅಧಿಕಾರಿಗಳು ತಿಳಿಸಿದ್ದಾರೆ.ಎರಡು ಸೂಟ್‌ಕೇಸ್‌ಗಳಲ್ಲಿ ಸಕ್ಕರೆ ಮೈದಾ ಪ್ಯಾಕ್‌ಗಳ ನಡುವೆ ಅಡಗಿಸಿಟ್ಟು ಹೆರಾಯಿನ್ ಪ್ಯಾಕೆಟ್‌ಗಳನ್ನು ಸಾಗಿಸಲು ಆರೋಪಿಗಳು ಯತ್ನಿಸುತ್ತಿದ್ದರು. ಮಾದಕವಸ್ತುಗಳನ್ನು ಒಯ್ಯಲು ಸಹಕರಿಸಿದ ಆರೋಪದಲ್ಲಿ ಏರಲೈನ್ ಉದ್ಯೋಗಿಯನ್ನು ಕಸ್ಟಡಿಗೆ ಪಡೆಯಲಾಗಿದೆ. ಇದಲ್ಲದೆ ಕೊಲೊಂಬೊಕ್ಕೆ ಹೋಗುತ್ತಿದ್ದ ಯಾತ್ರಿಕನಿಂದ 30ಲಕ್ಷ ರೂಪಾಯಿ ಅಮೆರಿಕನ್ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ.
Next Story





