ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ
ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನ ವ್ಯವವಸ್ಥಾಪನಾ ಸಮಿತಿ
ಬಂಟ್ವಾಳ, ಜೂ. 25: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣು ಮೂರ್ತಿ ದೇವಸ್ಥಾನದ ವ್ಯವವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ಅವಿರೋಧವಾಗಿ ಆಯ್ಕೆಗೊಂಡರು.
ಜೂನ್ 20 ಧಾಮರ್ಿಕ ದತ್ತಿ ಇಲಾಖೆ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಅಧ್ಯಕ್ಷತೆಯಲ್ಲಿ, ಕಳ್ಳಿಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ, ದೇವಳದ ಆಡಳಿತಾಧಿಕಾರಿ ರಾಜಶೇಖರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಜರಗಿತು.
ಪದಾಧಿಕಾರಿಗಳಾಗಿ ದಿವಾಕರ ಪಂಬದಬೆಟ್ಟು, ಜನಾರ್ಧನ ಸಾಲಿಯಾನ್ ದರಿಬಾಗಿಲು, ಪದ್ಮನಾಭ ರಾವ್ ಕನಪಾಡಿ, ವೇಣುಗೋಪಾಲ ಶೆಟ್ಟಿ ಕುಪ್ಪಿಲಗುತ್ತು, ಪ್ರತಿಭಾ ಪಿ. ಶೆಟ್ಟಿ ಗೋಳಿನೆಲ, ಧರ್ಮಾವತಿ ಆರ್. ಗಟ್ಟಿ ತುಂಬೆ, ರಮೇಶ್ ಕೊಡಂಗೆ, ಪುರೋಹಿತ ಶಿವರಾಮ ಶಿಬರಾಯರು ಆಯ್ಕೆಗೊಂಡರು.
Next Story





