ಜೇಸಿಐ ಆಲಂಕಾರು ವತಿಯಿಂದ 'ನ್ಯಾಪ್ಸ್ಕಿನ್ ಯಂತ್ರ' ಕೊಡುಗೆ

ಕಡಬ, ಜೂ.25: ಜೇಸಿಐ ಆಲಂಕಾರು ಘಟಕದ ಶಾಶ್ವತ ಯೋಜನೆ 'ಸುರಕ್ಷಾ 2016' ಯೋಜನೆಯಡಿ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಗೆ ನ್ಯಾಪ್ಸ್ಕಿನ್ ಬರ್ನಿಂಗ್ ಯಂತ್ರದ ಕೊಡುಗೆ ನೀಡಲಾಯಿತು.
ಯಂತ್ರವನ್ನು ಜೇಸಿಐ 15ರ ವಲಯಾಧ್ಯಕ್ಷ ಸಂದೀಪ್ ಕುಮಾರ್ ಉದ್ಟಾಟಿಸಿದರು. ಆಲಂಕಾರು ಜೇಸಿಐ ಘಟಕಾಧ್ಯಕ್ಷ ತೋಷಿತ್ ರೈಯವರು ಅಧ್ಯಕ್ಷತೆ ವಹಿಸಿದ್ದರು. ನ್ಯಾಪ್ಸ್ಕಿನ್ ಬರ್ನಿಂಗ್ ಯಂತ್ರದ ಕೊಡುಗೆಗೆ ಸಹಕಾರ ನೀಡಿದ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯಗುರು ಸತೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜೇಸಿಐ ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ರೈ, ವಲಯಾಧಿಕರಿಗಳಾದ ಶಕೀಲ್ ಹಾವಂಜೆ, ಮನೋಜ್ ಕಡಬ, ಪ್ರದೀಪ್ ರೈ ಮನವಳಿಕೆ, ಪ್ರದೀಪ್ ಬಾಕಿಲ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕ ವೆಂಕಟೇಶ್ ದಾಮ್ಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Next Story





