ಅನಾರೋಗ್ಯ ಪೀಡಿತ ದಾವೂದ್‌ಗೆ ಸೇನಾ ವ್ಯೆದ್ಯರಿಂದ ಚಿಕಿತ್ಸೆ: ವರದಿ

ಹೊಸದಿಲ್ಲಿ, ಜೂನ್ 25: ಭೂಗತ ದೊರೆ ದಾವೂದ್ ಇಬ್ರಾಹೀಂ ಸುದೀರ್ಘ ಸಮಯದಿಂದ ರೋಗಿಯಾಗಿದ್ದು, ಮೂರು ತಿಂಗಳುಗಳಿಂದ ಕರಾಚಿಯಲ್ಲಿ ಪಾಕಿಸ್ತಾನ ಸೇನೆಯ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೆದರಿಕೆ ಹಾಕಿ ಜನರನ್ನು ನಡುಗಿಸುತ್ತಿದ್ದ ಭೂಗತ ದೊರೆ ಇಂದು ತನ್ನ ಸ್ವಂತ ಕಾಲಲ್ಲಿ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾನೆ. ತನ್ನ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದು ಕರಾಚಿಯ ಜಿಯಾವುದ್ದೀನ್ ಆಸ್ಪತ್ರೆಯ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಕರಾಚಿಯ ಶಿರೀನ್ ಜಿನ್ನಾ ಕಾಲನಿಯಲ್ಲಿರುವ ಹೊಸಮನೆಯಲ್ಲಿಯೇ ದಾವೂದ್‌ಗೆ ಚಿಕಿತ್ಸೆ ನಡೆಯುತ್ತಿದೆ. ತನ್ನ ಅನಾರೋಗ್ಯದಿಂದಾಗಿಯೇ ಇಲ್ಲಿಂದ ಆಸ್ಪತ್ರೆಗೆ ಹೋಗುವುದು ಸುಲಭ ಎಂಬ ಉದ್ದೇಶದಿಂದ ಈ ಮನೆಯನ್ನು ಖರೀದಿಸಿದ್ದಾನೆನ್ನಲಾಗಿದೆ. ದಾವೂದ್‌ನ ಚಿಕಿತ್ಸೆಗೆ ಕರಾಚಿ ಲಿಯಾಕತ್ ಮಿಲಿಟ್ರಿ ಆಸ್ಪತ್ರೆಯ ವೈದ್ಯರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಸೇನೆ, ಐಎಸ್‌ಐಅಧಿಕಾರಿಗಳು ನಿರಂತರ ದಾವೂದ್‌ನ ಸಂಪರ್ಕದಲ್ಲಿದ್ದಾರೆ. ಆದರೆ ಈತನಿಗೆ ಯಾವ ರೋಗ ಹಿಡಿದಿದೆಎಂದು ಈವರೆಗೂ ಸ್ಪಷ್ಟವಾಗಿಲ್ಲ. ಕರಾಚಿಯಲ್ಲಿ ದಾವೂದ್‌ನ ಭದ್ರತೆಯನ್ನು ಪಾಕಿಸ್ತಾನಿ ಸೇನೆ ಮತ್ತು ಅಲ್ಲಿನ ಬೇಹುಗಾರಿಕಾ ಏಜೆನ್ಸಿ ವಹಿಸಿಕೊಂಡಿದೆ ಎನ್ನಲಾಗುತ್ತಿದೆ.







