ಸಮಸ್ತ ಮದ್ರಸ ಪರೀಕ್ಷೆ : ವಿಟ್ಲ ಮದ್ರಸಕ್ಕೆ ಶೇ. 100 ಫಲಿತಾಂಶ
ವಿಟ್ಲ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕಳೆದ ಸಾಲಿನಲ್ಲಿ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ.
5ನೇ ತರಗತಿಯಲ್ಲಿ ಅಬ್ದುಲ್ ರಝಾಕ್ ಪ್ರಥಮ ಹಾಗೂ ಮುಹಮ್ಮದ್ ಫರ್ಮಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. 7ನೇ ತರಗತಿಯಲ್ಲಿ ಶಹರುಭಾನು ಪ್ರಥಮ ಹಾಗೂ ಅಶ್ರಫ್ ದ್ವಿತೀಯ ಸ್ಥಾನ ಪಡೆದರೆ, 1ನೇ ತರಗತಿಯಲ್ಲಿ ನವಾಝ್ ಪ್ರಥಮ ಹಾಗೂ ಸುಹೈಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ವಿ.ಎಚ್. ಅಶ್ರಫ್, ಖತೀಬ್ ಹಸನ್ ಅರ್ಶದಿ, ಮದ್ರಸ ಅಧ್ಯಾಪಕರಾದ ಉಮರುಲ್ ಫಾರೂಕ್ ಅರ್ಶದಿ, ಅಬ್ದುಲ್ ಹಕೀಂ ಅರ್ಶದಿ, ಇಸ್ಮಾಯಿಲ್ ಹನೀಫಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅಭಿನಂದಿಸಿದ್ದಾರೆ.
Next Story