ಚೆನ್ನೈನ ಮಹಿಳಾ ಉದ್ಯಮಿ ಜುಬೈದಾರಿಗೆ ವಿಶ್ವಸಂಸ್ಥೆ ಪ್ರಶಸ್ತಿ

ಚೆನ್ನೈ, ಜೂ.25: ವಿಶ್ವಸಂಸ್ಥೆಯ ವತಿಯಿಂದ ಕಾರ್ಪೊರೇಟ್ ಜಗತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ನೀಡುವ ಪ್ರಶಸ್ತಿಗೆ ಚೆನ್ನೈನ ಮಹಿಳಾ ಉದ್ಯಮಿ ಜುಬೈದಾ ಬಾಯಿ ಆಯ್ಕೆಯಾಗಿದ್ದಾರೆ.
ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಸಾರ್ವತ್ರಿಕ ನಿಯಮಗಳ ಅನುಷ್ಠಾನ, ಕಾರ್ಮಿಕ ಸ್ನೇಹಿ ಉದ್ಯಮ, ಭ್ರಷ್ಟಾಚಾರಕ್ಕೆ ತಡೆ, ಪರಿಸರ ಸಂರಕ್ಷಣೆ ಮುಂತಾದ ಸಿದ್ಧಾಂತಗಳ ಜೊತೆಗೆ ಕಾರ್ಯನಿರ್ವಹಿಸುತ್ತಾ, ಸಮಾಜದ ಪರ ಕಾಳಜಿ ಹೊಂದಿರುವ ಕಾರ್ಪೊರೇಟ್ ಕಂಪೆನಿಗಳನ್ನು ಗುರುತಿಸಿ ‘ಗ್ಲೋಬಲ್ ಕಾಂಪ್ಯಾಕ್ಟ್ ಎಸ್‌ಡಿಜಿ ಪಯೋನಿಯರ್ಸ್’ ಎಂಬ ಪ್ರಶಸ್ತಿಯನ್ನು ನೀಡುತ್ತಿದೆ.
ಜುಬೈದಾ ಬಾಯಿಯವರು ‘ಆಯ್ಸ’ ಎಂಬ ಸಾಮಾಜಿಕಾ ಹಿತಾಸಕ್ತಿಯ ಸಂಸ್ಥೆಯ ಸಂಸ್ಥಾಪಕಿಯಾಗಿದ್ದು, ಜಗತ್ತಿನಾದ್ಯಂತ ಇರುವ ಬಡ ಮಹಿಳೆಯರ ಆರೋಗ್ಯ ರಕ್ಷಣೆ, ಅವರ ಬದುಕನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.
ವಿಶ್ವಸಂಸ್ಥೆಯು ಈ ಪ್ರಶಸ್ತಿಗಾಗಿ ಜಗತ್ತಿನಾದ್ಯಂತ 10 ಉದ್ಯಮಿಗಳನ್ನು ಆಯ್ಕೆ ಮಾಡಿದ್ದು, ಈ ಪಟ್ಟಿಯಲ್ಲಿ ಚೆನ್ನೈನ ಮಹಿಳಾ ಉದ್ಯಮಿ ಸ್ಥಾನ ಗಳಿಸಿರುವುದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ.





