ಮುಂಡಗೋಡ: ಎಪಿಎಂಸಿ ಆವರಣದ ಸಾಗುವಾನಿ ಮರ ಅರಣ್ಯಗಳ್ಳರ ಪಾಲು

ಮುಂಡಗೋಡ, ಜೂ.25: ಎಪಿಎಂಸಿ ಆವರಣದಲ್ಲಿದ್ದ ಬೆಲೆ ಬಾಳುವ ಸಾಗುವಾನಿ ಮರವನ್ನು ಅರಣ್ಯಕಳ್ಳರು ಲೂಟಿಮಾಡಿಕೊಂಡ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇತ್ತಿಚ್ಚಿಗೆ ಅರಣ್ಯದಲ್ಲಿಯ ಬೆಲೆಬಾಳುವ ಮರಗಳು ಮಾಯವಾಗುತ್ತಿದ್ದರೂ ಅರಣ್ಯ ಇಲಾಖೆಯ ಗಮನಕ್ಕೆ ಬರದೇ ಇರುವುದು ವಿಪರ್ಯಾಸ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಅರಣ್ಯ ಇಲಾಖೆ ಬೇಜವಾಬ್ದಾರಿ ತೋರುತ್ತಿರುವುದರಿಂದ ಅರಣ್ಯಗಳ್ಳರಿಗೆ ಯಾವುದೇ ಭಯವಿಲ್ಲದಂತಾಗಿ ಮುಂಡಗೋಡ ಅರಣ್ಯಪ್ರದೇಶ ಬಯಲುಸೀಮೆ ಯಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





