ದುಬೈ: ದಾರುನ್ನೂರ್ ವತಿಯಿಂದ ಶೈಖುನಾ ಅಲಿಕುಟ್ಟಿ ಉಸ್ತಾದ್‌ರಿಗೆ ಸನ್ಮಾನ

ದುಬೈ, ಜೂ.25: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು, ಕುಂಬಳೆ, ಮಂಗಲ್ಪಾಡಿ, ಪೈವಳಿಕೆ ಸಂಯುಕ್ತ ಖಾಝಿ, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಬ್ಯಾಸ ಬೋರ್ಡ್‌ನ ಉಪಾಧ್ಯಕ್ಷರಾದ ಶೈಖುಲ್ ಜಾಮಿಆ ಪ್ರೊಫೆಸರ್ ಶೈಖುನಾ ಅಲಿ ಕುಟ್ಟಿ ಉಸ್ತಾದ್‌ರಿಗೆ ಸನ್ಮಾನ ಸಮಾರಂಭ ದೇರಾ ದುಬೈಯಲ್ಲಿರುವ ರಾಫಿ ಹೋಟೆಲ್ನಲ್ಲಿ ನಡೆಯಿತು.
ವೇದಿಕೆಯಲ್ಲಿ ದಾರುನ್ನೂರ್ ಯುಎಇನ ಉಪದೇಶಕ ಸೈಯದ್ ಅಸ್ಗರ್ ಅಲಿ ತಂಙಳ್, ದಾರುನ್ನೂರ್ ಯುಎಇ ಗೌರವಾಧ್ಯಕ್ಷ ಹಾಜಿ ಮೊಯ್ದೀನ್ ಕುಟ್ಟಿ ಕಕ್ಕಿಂಜೆ, ದುಬೈ ಸುನ್ನಿ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಶೌಕತ್ ಅಲಿ ಹುದವಿ, ದಾನತ್ ಗ್ರೂಪ್ ಆಫ್ ಕಂಪೆನೀಸ್ನ ಎಂ.ಡಿ. ಹಾರಿಸ್, ಕಾಸರಗೋಡು ಜಿಲ್ಲಾ ಕೆಎಂಸಿಸಿ ಸೆಕ್ರೆಟರಿ ಸೈಫ್ ಮಂಜೇಶ್ವರ, ದಾರುನ್ನೂರ್ ಯುಎಇ ಉಪಾಧ್ಯಕ್ಷರಾದ ಸಂಶುದ್ದೀನ್ ಸೂರಲ್ಪಾಡಿ, ಮುಹಮ್ಮದ್ ಹನೀಫ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ದಾರುನ್ನೂರಿನ ಸಮಗ್ರ ಪರಿಚಯವನ್ನು ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಸಭೆಯ ಮುಂದಿಟ್ಟರು. ಬಳಿಕ ಶೈಖುನಾ ಜಾಮಿಯ ಅಲಿ ಕುಟ್ಟಿ ಉಸ್ತಾದರನ್ನು ದಾರುನ್ನೂರ್ ಯುಎಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್, ಕೋಶಾಧಿಕಾರಿ ಅಬ್ದುಸ್ಸಲಾಂ ಬಪ್ಪಳಿಗೆ, ಅಬ್ದುಲ್ ನಾಸಿರ್ ಸುರತ್ಕಲ್ ಮತ್ತಿತರರು ಸನ್ಮಾನಿಸಿದರು. ದಾರುನ್ನೂರ್ ಯೂತ್ ಟೀಮ್ ಅಧ್ಯಕ್ಷ ಸಂಶೀರ್ ಬಾಂಬಿಲ, ಗೌರವಾದ್ಯಕ್ಷ ಇಮ್ರಾನ್ ಮಜಿಲೋಡಿ, ಪ್ರಧಾನ ಕಾರ್ಯದರ್ಶಿ ಸಫಾ ಇಸ್ಮಾಯೀಲ್ ಬಜ್ಪೆ ಮೊದಲಾದವರು ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಸ್ತಾದರು, ಸಮಸ್ತ ನಡೆದು ಬಂದ ಹಾದಿ ಮತ್ತು ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ಸಂಶುಲ್ ಉಲಮಾ ಇ.ಕೆ. ಉಸ್ತಾದರ ಮಹತ್ತರ ತೀರ್ಮಾನಗಳು ಮತ್ತು ದಿಟ್ಟ ಹೆಜ್ಜೆ ಇಂದು ಸಮಸ್ತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಹಕಾರಿಯಾಯಿತು ಎಂದರು. ಆಫ್ರಿಕಾ ಖಂಡದ ಕೇನ್ಯಾದಲ್ಲಿ 20 ಎಕ್ರೆ ವಿಶಾಲವಾದ ಪ್ರದೇಶದಲ್ಲಿ ಜಾಮಿಯಾ ನೂರಿಯಾ ಅರಬಿಕ್ ಕಾಲೇಜ್ ಗೆ ಶಿಲಾನ್ಯಾಸ ನಡೆದಿದ್ದು ಆಸ್ಟ್ರೇಲಿಯಾದಲ್ಲೂ ಸಮಸ್ತದ ಧ್ವಜ ಹಾರಾಡಲಿದೆ ಎಂದರು.
ದಾರುನ್ನೂರ್ ಕರ್ನಾಟಕದ ಪಾಲಿಗೆ ಒಂದು ಹೊಸ ಹೆಜ್ಜೆಯೊಂದಿಗೆ ಕಾಲಿಡುತ್ತಿದ್ದು ಇದರ ಭವಿಷ್ಯ ಉಜ್ವಲವಾಗಲಿದೆ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಲೀಂ ಅಲ್ತಾಫ್ ಫರಂಗಿಪೇಟೆ, ಕೇರಳದ ವಿದ್ವಾಂಸರು ಧರ್ಮ ಸಂಸ್ಥಾಪನೆಗಾಗಿ ಭಾರತ ಬಿಟ್ಟು ಸೌತ್ ಆಫ್ರಿಕಾ ತಲುಪಿದರು . ಆದರೆ ಕರ್ನಾಟಕದವರಾದ ನಾವು ಪಕ್ಕದ ತಾಲೂಕಿಗೆ ಪಯಣ ಮಾಡಲು ಇನ್ನೂ ಸಿದ್ಧರಾಗಿಲ್ಲ. ಇದೊಂದು ಮಹಾದುರಂತ. ದಾರುನ್ನೂರ್ ಉತ್ತರ ಕರ್ನಾಟಕದ ಜಿಲ್ಲೆಗಳ ಮಕ್ಕಳನ್ನು ಕರೆ ತಂದು ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಓರ್ವ ವಿದ್ವಾಂಸನನ್ನಾಗಿ ಪುನಃ ಅವರ ಊರಿಗೆ ಕಳುಹಿಸುವಾಗ ಬದಲಾವಣೆ ಉಂಟಾಗುವುದರಲ್ಲಿ ಸಂಶಯ ಇಲ್ಲ ಎಂದು ಹೇಳಿದರು.
ಉಸ್ತಾದ್ ಶೌಕತ್ ಹುದವಿ ಸ್ವಾಗತಿಸಿ ಅಲಿ ಕುಟ್ಟಿ ಉಸ್ತಾದರ ವ್ಯಕ್ತಿ ಪರಿಚಯ ಮಾಡಿದರು. ದಾರುನ್ನೂರ್ ಗ್ರಾಂಡ್ ಇಫ್ತಾರ್ ಸಮಿತಿ ಚೇರ್ಮನ್ ಅನ್ಸಾಫ್ ಪಾತೂರು ವಂದಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಮುಹಮ್ಮದ್ ರಫೀಕ್ ಸುರತ್ಕಲ್, ಇಲ್ಯಾಸ್ ಕಡಬ, ಅಬ್ದುರ್ರಝಾಕ್ ಸೊಂಪಾಡಿ, ಉಸ್ಮಾನ್ ಕೆಮ್ಮಿಂಜೆ, ಹನೀಫ್ ಎಡಪದವು, ಅಬ್ದುರ್ರಝಾಕ್ ಸಾಲೆತ್ತೂರು, ತಯ್ಯಿಬ್ ಹೆಂತಾರ್, ಆರಿಫ್ ಗಡಿಯಾರ್, ಜಾಬಿರ್ ಬಪ್ಪಳಿಗೆ, ಅಶ್ರಫ್ ಬಾಂಬಿಲ, ಬಶೀರ್ ಕೆಮ್ಮಿಂಜೆ, ತಾಹಿರ್ ಹೆಂತಾರ್, ಶಾಕಿರ್ ಕುಪ್ಪೆಪದವು, ನಾಸಿರ್ ಬಪ್ಪಳಿಗೆ, ಅಬ್ದುರ್ರಶೀದ್ ಮುನ್ನ ಮೊದಲಾದವರು ಸಹಕರಿಸಿದರು.







