ಭಾರೀ ಬಿರುಗಾಳಿಗೆ ಪೂರ್ವ ಚೀನಾ ತತ್ತರ 98 ಸಾವು; ನೂರಾರು ಮಂದಿಗೆ ಗಾಯ

ಫುನಿಂಗ್, ಜೂ. 25: ಪೂರ್ವ ಚೀನಾದಲ್ಲಿ ಬೀಸಿದ ಪ್ರಬಲ ಬಿರುಗಾಳಿಯಿಂದಾಗಿ 98 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯ ರಭಸಕ್ಕೆ ಜಿಯಾಂಗ್ಸು ಪ್ರಾಂತದಲ್ಲಿ ವಿದ್ಯುತ್‌ಕಂಬಗಳು ಧರೆಗುರುಳಿವೆ, ಕಾರುಗಳು ತಲೆಕೆಳಗಾಗಿವೆ ಮತ್ತು ಮನೆಗಳ ಛಾವಣಿಗಳು ಹಾರಿಹೋಗಿವೆ.
ಗುರುವಾರ ಮಧ್ಯಾಹ್ನದ ಸುಮಾರಿಗೆ ಯನ್‌ಚೆಂಗ್ ಸಮೀಪ ಬಿರುಗಾಳಿ ಅಪ್ಪಳಿಸಿತು ಹಾಗೂ ಗಂಟೆಗೆ 125 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ ಫುನಿಂಗ್ ಕೌಂಟಿಯಲ್ಲಿ ಹಲವು ವಸಾಹತುಗಳನ್ನು ನೆಲಸಮಗೊಳಿಸಿತು ಎಂದು ನಾಗರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Next Story





