ಮಂಗಳನಲ್ಲಿ ಖನಿಜ ಪತ್ತೆ

ವಾಶಿಂಗ್ಟನ್, ಜೂ. 25: ಮಂಗಳ ಗ್ರಹದಲ್ಲಿ ಶೋಧ ನಡೆಸುತ್ತಿರುವ ನಾಸಾದ ಕ್ಯೂರಿಯಾಸಿಟಿ ನೌಕೆಯು ಗ್ರಹದ ಬಂಡೆಗಲ್ಲಿನ ಮಾದರಿಯೊಂದರಲ್ಲಿ ಅನಿರೀಕ್ಷಿತವಾಗಿ ಖನಿಜವೊಂದನ್ನು ಪತ್ತೆಹಚ್ಚಿದೆ.
ಮಂಗಳ ಗ್ರಹವು ತನ್ನ ಉಗಮದ ವೇಳೆ ಸ್ಫೋಟಕ ಜ್ವಾಲಾಮುಖಿಗಳನ್ನು ಹೊಂದಿತ್ತು ಎನ್ನುವುದನ್ನು ಇದು ಸೂಚಿಸುತ್ತದೆ ಎನ್ನಲಾಗಿದೆ.
ಕಳೆದ ವರ್ಷದ ಜುಲೈಯಲ್ಲಿ ಶೋಧಕ ಸಂಗ್ರಹಿಸಿದ ಬಂಡೆಗಲ್ಲಿನ ಪುಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ‘ಟ್ರೈಡಿಮೈಟ್’ ಎಂಬ ಸಿಲಿಕ ಖನಿಜ ಇರುವುದು ಸಂಶೋಧನೆಯಿಂದ ಗೊತ್ತಾಗಿದೆ.
Next Story





