ವೇತನ ಕೇಳಿದ್ದಕ್ಕೆ ಕಾರ್ಮಿಕನ ಹತ್ಯೆ
ಮುಝಫರ್‌ನಗರ,ಜೂ.25: ಇಲ್ಲಿಯ ಅಟಾಲಿ ಗ್ರಾಮದಲ್ಲಿ ತನ್ನ ವೇತನವನ್ನು ನೀಡುವಂತೆ ಆಗ್ರಹಿಸಿದ್ದ ಕಾರ್ಮಿಕನನ್ನು ಆತನ ಮಾಲಿಕ ಮತ್ತು ಕುಟುಂಬದವರು ಸೇರಿಕೊಂಡು ಥಳಿಸಿ ಕೊಂದುಹಾಕಿದ್ದಾರೆ.
ಭೋಲಾಲ್(60) ಕೊಲೆಯಾದ ವ್ಯಕ್ತಿ. ರವೀಂದರ್ ಮತ್ತು ಆತನ ಕುಟುಂಬ ಸದಸ್ಯರು ಆರೋಪಿಗಳಾಗಿದ್ದಾರೆ.
ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರವೀಂದರ್ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದಾರೆ.
Next Story





